ಮೂಡಲಗಿ: ರಾಜ್ಯದ ಪವರ್ ಟಿವಿಯು ನಡೆಸಿದ ಅರಭಾವಿ ಕ್ಷೇತ್ರದ ಮತದಾರರ ಸಮೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ಶೇ ೮೩ ರಷ್ಟು ಜನ ಮತ ಹಾಕಿದ್ದು ಮುಂಬರುವ ಚುನಾವಣೆಯಲ್ಲಿ ಜಾರಕಿಹೊಳಿಯವರನ್ನು ಅಲುಗಾಡಿಸುವವರಾರೂ ಇಲ್ಲವೆಂಬ ಅಭಿಪ್ರಾಯ ವ್ಯಕ್ತಗೊಂಡಿದೆ.
ಪವರ್ ಟಿವಿ ಇಂದು ಅರಭಾವಿ ಕ್ಷೇತ್ರದ ಜನತೆಗೆ ಕಾಲ್ ಮಾಡಿ ತಮ್ಮ ಮತ ನೀಡಲು ಆಹ್ವಾನ ನೀಡಿತ್ತು ಅದರ ಅನುಸಾರ ಬೆಳಿಗ್ಗೆ ೯.೩೦ ರಿಂದ ಸಂಜೆಯವರೆಗೂ ಅರಭಾವಿ ಕ್ಷೇತ್ರದ ಮತದಾರರಿಂದ ಬಂದ ಕಾಲ್ ಗಳ ಪೈಕಿ ಶೇ. ೮೩ ರಷ್ಟು ಜನರು ತಾವು ಬಾಲಚಂದ್ರ ಜಾರಕಿಹೊಳಿ ಅಥವಾ ಸಾವಕಾರರಿಗೆ ಮತ ಹಾಕುವುದಾಗಿ ಹೇಳಿದರೆಂದು ಪವರ್ ಟಿವಿ ಹೇಳಿದೆ.
ಪವರ್ ಟಿವಿಗೆ ಬಂದ ಒಟ್ಟು ಕಾಲ್ ಗಳು ೧೩೭೫೨ ಅದರಲ್ಲಿ ಪುರುಷರು ೧೩೦೮೬ ಜನ, ಸ್ತ್ರೀಯರು ೬೬೬ ಜನರಿದ್ದು ಭಾರತೀಯ ಜನತಾ ಪಕ್ಷಕ್ಕೆ ಅಖಂಡ ೧೧೯೭೨ ಮತಗಳು ಸಿಕ್ಕಿವೆ ಕಾಂಗ್ರೆಸ್ ಕೇವಲ ೧೬೮೬ ಮತ ಹಾಗೂ ಜೆಡಿಎಸ್ ೪೬೨ ಮತಗಳನ್ನು ಪಡೆದಿವೆ.
ಸುಮಾರು ಮೂವತ್ತು ವರ್ಷಗಳಿಂದಲೂ ಅರಭಾವಿ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾಗಿ ಬರುತ್ತಿರುವ ಬಾಲಚಂದ್ರ ಜಾರಕಿಹೊಳಿ ಇನ್ನೂ ತಮ್ಮ ಛಾಪು ಉಳಿಸಿಕೊಂಡಿದ್ದಾರೆ ಎನ್ನಬಹುದು.