ಬಾಗಲಕೋಟೆ: ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ, ಜಿಲ್ಲೆಯ ಬೀಳಗಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸಮೀಪದ ಬಾಡಗಂಡಿಯ ಬಾಪೂಜಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾ ಪಾಟೀಲಗೆ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು, ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ
ಸಾಧನೆ ಮಾಡಿದ ವಿದ್ಯಾರ್ಥಿನಿ ಬಸವನಬಾಗೇವಾಡಿ ತಾಲೂಕಿನ ಮಡಿಕೇಶ್ವರ ಗ್ರಾಮದವಳು. ಅವರ ಮನೆಗೆ ತೆರಳಿ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.
ಬಾಪೂಜಿ ಪಿಯು ಕಾಲೇಜಿನ ಗಣಿತ ಉಪನ್ಯಾಸಕ, ಶರಣಬಸವರಾಜ ಮಟ್ಟಿಮಣಿ ಕನ್ನಡ ಉಪನ್ಯಾಸಕಿ ಶ್ರೀಮತಿ ವೀಣಾ ದಾಸಪ್ಪನವರ ಹಾಗೂ ಅವರ ತಂದೆ ಬಸನಗೌಡ ಪಾಟೀಲ ತಾಯಿ, ಶ್ರೀಮತಿ ಸರೋಜಾ ಪಾಟೀಲ ಉಪಸ್ಥಿತರಿದ್ದರು ಸಾಧನೆ ಮಾಡಿದ ವಿದ್ಯಾರ್ಥಿನಿ ಬಸವನಬಾಗೇವಾಡಿ ತಾಲೂಕಿನ ಮಡಿಕೇಶ್ವರ ಗ್ರಾಮದವಳ .