ಸಿಂದಗಿ; ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಮ್.ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪರಿಣಾಮಕಾರಿ ಯೋಜನಾ ತಯಾರಿಕೆ ಕುರಿತು ಒಂದು ದಿನದ ಕಾರ್ಯಗಾರವನ್ನು ದಿನಾಂಕ ೨೧-೦೪-೨೦೨೫ರಂದು ಹಮ್ಮಿಕೊಳ್ಳಲಾಗಿತ್ತು.
ಡಾ. ರೇಷ್ಮ ಗಜಾಕೋಶ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು, ಗೌರವ ಅತಿಥಿಗಳಾಗಿ ಪಟ್ಟಣದ ಜಿ.ಪಿ. ಪೋರವಾಲ್ ಕಾಲೇಜಿನ ಡಾ. ಪ್ರಕಾಶ ರಾಠೋಡ, ಅಧ್ಯಕ್ಷರಾಗಿ ಪ್ರಾಚಾರ್ಯ ಡಾ. ಬಿ.ಜಿ. ಪಾಟೀಲ ಮತ್ತು ಐ.ಕ್ಯೂ.ಎ.ಸಿ ಸಂಯೋಜಕ ಪ್ರೊ. ಬಿ.ಡಿ. ಮಾಸ್ತಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅರವಿಂದ ಎಮ್. ಮನಗೂಳಿ, ಪ್ರೊ. ಎಸ್.ಎಮ್. ಬಿರಾದಾರ, ಪ್ರೊ. ಜಿ.ಜಿ.ಕಾಂಬಳೆ, ಪ್ರೊ. ಎಸ್.ಕೆ. ಹೂಗಾರ ಮತ್ತು ಡಾ. ಅಂಬರೀಶ ಬಿರಾದಾರ ಉಪಸ್ಥಿತರಿದ್ದರು. ಅತಿಥಿ ಉಪನ್ಯಾಸಕರಾದ ಅಮೀತ ಈಳಗೇರ ಅವರು ನಿರೂಪಿಸಿ, ವಂದಿಸಿದರು.