ಮಹಿಳೆಯರ ಅತ್ಯಾಚಾರ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Must Read

ಸಿಂದಗಿ; ಹಳ್ಳಿಯಿಂದ ದಿಲ್ಲಿಯವರೆಗೆ ಮಹಿಳೆಯರ ಮೇಲೆ ದಿನನಿತ್ಯ ಅತ್ಯಾಚಾರ ದೌರ್ಜನ್ಯಗಳು ನಡೆಯುತ್ತಲಿವೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸಾರ್ವಜನಿಕವಾಗಿ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಮಹಿಳಾ ಜಾಗರಣಾ ವೇದಿಕೆ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಜಾಗರಣಾ ವೇದಿಕೆಯ ಸಂಚಾಲಕಿ ಶೈಲಜಾ ಸ್ಥಾವರಮಠ ಮಾತನಾಡಿ, ರಾಷ್ಟ್ರ ಹಾಗೂ ರಾಜ್ಯಗಳಲ್ಲಿ ನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಹಿಂಸೆ ಸೇರಿದಂತೆ ಪ್ರಚೋದನಕಾರಿ ಘಟನೆಗಳು ನಡೆಯುತ್ತಲಿವೆ ಇದರಿಂದ ಮಹಿಳೆಯರು ಒಬ್ಬರೇ ತಿರುಗಾಡುವದು ಕಠಿಣವಾಗಿದೆ ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಮೂಲಕ ಅತ್ಯಾಚಾರ, ದೌರ್ಜನ್ಯವೆಸಗಿದ್ದಾರೆ ಅದಲ್ಲದೆ ರಾಜ್ಯದಲ್ಲಿ ಇಂತಹ ಘಟನೆಗಳು ರಾಜಾರೋಷವಾಗಿ ಒಂದಲ್ಲ ಒಂದು ಘಟನೆಗಳು ಮರುಕಳಿಸುತ್ತಿವೆ ಇದರಿಂದ ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿ ಮಹಿಳಾ ಕುಲ ತಲೆ ತಗ್ಗಿಸುವಂತಾಗಿದೆ ಕಾರಣ ಘನತೆವೆತ್ತ ರಾಜ್ಯಪಾಲರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಘಟನೆಗಳಲ್ಲಿ ಭಾಗಿಯಾಗುವ ಅಪರಾಧಿಗಳನ್ನು ಸಾರ್ವಜನಿಕವಾಗಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ದಲಿತ ಸೇನೆಯ ಶರಣಮ್ಮ ನಾಯಕ, ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆಯ ಸಭಿಯಾ ಮರ್ತೂರ, ಮಹಾನಂದಾ ಬಮ್ಮಣ್ಣಿ, ಸುನಂದಾ ಯಂಪೂರೆ ಸೇರಿದಂತೆ ಅನೇಕರು ಮಾತನಾಡಿದರು. 

ಈ ಸಂದರ್ಭದಲ್ಲಿ ಸುನಂದಾ ಭಜಂತ್ರಿ, ಶಶಿಕಲಾ ಅಂಗಡಿ, ಅನಸೂಯಾ ಪರಗೊಂಡ, ಸುಭದ್ರಾ ಅಂಬಾಜಿ, ನೀಲಮ್ಮ ಅಗಸರ, ಸಂಗಮ ಸಂಸ್ಥೆಯ ರಾಜೀವ ಕುರಿಮನಿ, ಬಸವರಾಜ ಬಿಸನಾಳ, ತೇಜಸ್ವಿನಿ ಆರ್.ಎಚ್.ಮಲಕಪ್ಪ ಹಲಗಿ, ಅಪೂರ್ವ ಸ್ಥಾವರಮಠ, ನಿವೇದಿತಾ ಶಿವಶಿಂಪಿ, ಶಾಮಲಾ ಮಂದೇವಾಲಿ ಸೇರಿದಂತೆ ಅನೇಕರಿದ್ದರು.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group