ಅಬಕಾರಿ ಪೊಲೀಸರ ದಾಳಿ; ಭಾರಿ ಪ್ರಮಾಣದ ಕಳ್ಳಭಟ್ಟಿ ಸಾರಾಯಿ ತಯಾರಿಕೆಯ ರಾ ಮಟೆರಿಯಲ್ ವಶ

Must Read

ಬೀದರ: ನಗರದ ಅಬಕಾರಿ ಪೊಲೀಸರು ದಾಳಿ ನಡೆಸಿ  ಸುಮಾರು 21.6 ಲಕ್ಷ ರೂ. ಮೌಲ್ಯದ ಭಾರಿ ಪ್ರಮಾಣದ ಕಳ್ಳಭಟ್ಟಿ ಸಾರಾಯಿ ತಯಾರಿಕಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿಯನ್ನು ತಯಾರಿಸಲು ಲಾರಿಯಲ್ಲಿ ಸಾಗಾಣಿಕೆ ಮಾಡುತ್ತಿದ್ದ 3000 ಕೆಜಿ ಕೊಳೆತಬೆಲ್ಲ ಹಾಗೂ 6460 kg sodium carbonate ಜೊತೆಗೆ ಲಾರಿಯನ್ನು ಜಪ್ತಿ ಮಾಡಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿ ಹಿನ್ನಲೆಯಲ್ಲಿ ಅಕ್ರಮ ಕಳ್ಳ ಭಟ್ಟಿ ಸಾರಾಯಿ‌ ತಯಾರಿಸಲು ಅಣಿಯಾಗುತ್ತಿದ್ದ ಅಂತಾರಾಜ್ಯ ಖದೀಮರ ತಂಡದ ಯೋಜನೆಯನ್ನು ಅಬಕಾರಿ ಪೊಲೀಸರು ವಿಫಲಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿತರನ್ನು ಬಂಧಿಸಿ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ಆರೋಪಿತರನ್ನು  ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಕೊಳೆತ ಬೆಲ್ಲ  ಮತ್ತು ಪಟಕ (ನವಸಾಗರ) ವನ್ನು ಮಹಾರಾಷ್ಟ್ರದ ಉದ್ಗಿರ್ ನಿಂದ ತೆಲಂಗಾಣ ರಾಜ್ಯದ ಹೈದ್ರಾಬಾದ್ ಗೆ ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಮೈಲೂರು ಬಳಿ ಅಬಕಾರಿ ಪೊಲೀಸರು ದಾಳಿ ನಡೆಸಿದರು.

ಕಾರ್ಯಾಚರಣೆ ಯಲ್ಲಿ ಬೀದರ್ ಎಸ್ಪಿ ಚನ್ನಬಸವಣ್ಣನವರ ಮಾರ್ಗದರ್ಶನದಲ್ಲಿ ಅಬಕಾರಿ ಎನ್.ಮಂಜುನಾಥ್, ಅಬಕಾರಿ ಡಿಎಸ್ ಪಿ ಆನಂದ ಉಕ್ಕಲಿ,ಇನ್ಸ್ ಪೆಕ್ಟರ್ ಸುರೇಶ್, ಗಾಂಧಿಗಂಜ್ ಸಿಪಿಐ ಹಣಮರಡ್ಡೆಪ್ಪ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.


ವರದಿ: ನಂದಕುಮಾರ ಕರಂಜೆ,ಬೀದರ

Latest News

ವಾರದ ಸಾಮೂಹಿಕ ಪ್ರಾಥ೯ನೆ ಹಾಗೂ ವಚನ ವಿಶ್ಲೇಷಣೆ.

ಬೆಳಗಾವಿ - ವಚನ ಪಿತಾಮಹ ಡಾ. ಫ .ಗು. ಹಳಕಟ್ಟಿ  ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 08.02.2026ರಂದು ಸಾಮೂಹಿಕ ಪ್ರಾರ್ಥನೆ ಹಾಗೂ ವಚನ...

More Articles Like This

error: Content is protected !!
Join WhatsApp Group