ಪತ್ರಕರ್ತ ಉಮೇಶ ಬೆಳಕೂಡ ಮನೆಯಲ್ಲಿ ರಾಮ ದೀಪೋತ್ಸವ

Must Read

ಮೂಡಲಗಿ – ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರು ಕರೆ ಕೊಟ್ಟಂತೆ ನಗರದ ಪತ್ರಕರ್ತ ಉಮೇಶ ಬೆಳಕೂಡ ಅವರ ನಿವಾಸದಲ್ಲಿ ಶ್ರೀ ರಾಮನಿಗಾಗಿ ಸೋಮವಾರ ಸಾಯಂಕಾಲ ದೀಪೋತ್ಸವ ನೆರವೇರಿತು.

ಚನ್ನಮ್ಮ ನಗರದ ಮಹಿಳಾ ಮಣಿಗಳು ಅಪಾರ ಭಕ್ತಿ ಶ್ರದ್ಧೆಯಿಂದ ಶ್ರೀ ರಾಮನ ಪೂಜೆ ನೆರವೇರಿಸಿ ದೀಪ ಬೆಳಗಿಸಿ ಶ್ರೀ ರಾಮ ಜಯ ರಾಮ, ಜಯ ಜಯ ರಾಮ ಹಾಗೂ ಜೈ ಶ್ರೀರಾಮ ಘೋಷಣೆ ಮೊಳಗಿಸಿದರು.

ಶ್ರೀ ರಾಮನಿಗಾಗಿ ಸಿಹಿ ನೈವೇದ್ಯ ಹಿಡಿಯಲಾಯಿತು. ರಾಮನ ಸ್ತುತಿ ಹಾಡುಗಳನ್ನು ಹಾಡಲಾಯಿತು. ಮಕ್ಕಳು ಹೊಸ ಬಟ್ಟೆ ತೊಟ್ಟು ನಲಿದಾಡಿದರು. ಇದಕ್ಕೆ ಮುಂಚೆ ಬೆಳಿಗ್ಗೆ ಚನ್ನಮ್ಮ ನಗರದಲ್ಲಿ ಸಿಹಿ ಹಂಚಲಾಯಿತು.

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group