ರಾಮಚಂದ್ರಪ್ಪ ಮುಕ್ಕಣ್ಣವರ ಅಪ್ರತಿಮ ಭಜನಾ ಕಲಾವಿದ –  ಮಲ್ಲಯ್ಯ ಸ್ವಾಮೀಜಿ

Must Read

ಮೂಡಲಗಿ: ‘ಭಜನಾ ಕಲಾವಿದ ರಾಮಚಂದ್ರಪ್ಪ ಮುಕ್ಕಣ್ಣವರ ಸಂಗೀತ, ಭಜನೆಯಲ್ಲಿ ತಮ್ಮ ಬದುಕನ್ನು ಕಂಡುಕೊಂಡಿದ್ದರು’ ಎಂದು ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗುಜನಟ್ಟಿ ಗ್ರಾಮದಲ್ಲಿ ನಿಂಗಮ್ಮ ದೇವಸ್ಥಾನದ ಆವರಣದಲ್ಲಿ ಕಲಾವಿದರು ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಭಜನಾ ರತ್ನ ದಿ. ರಾಮಚಂದ್ರಪ್ಪ ಮುಕ್ಕಣ್ಣವರ ಅವರ ೧೨ನೇ ವರ್ಷದ ಪುಣ್ಯಸ್ಮರಣೆ ಹಾಗೂ ಗುಜನಟ್ಟಿ ಗಾಯನ ವೈಭವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ನಿಜಗುಣ ಶಿವಯೋಗಿಗಳು, ಸರ್ಪಭೂಷಣರು, ಮಹಾಲಿಂಗರ ತತ್ವಪದಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಕೇಳುಗರೆಲ್ಲ ಮಂತ್ರಮುಗ್ದರಾಗುತ್ತಿದ್ದರು. ಅವರೊಬ್ಬ ಅಪ್ರತಿಮ ಕಲಾವಿದರಾಗಿದ್ದರು ಎಂದರು.

ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಸಂಗೀತವು ಜೀವನದಲ್ಲಿ ಶಾಂತಿ, ನೆಮ್ಮದಿಯನ್ನು ತಂದುಕೊಡುತ್ತದೆ. ಭಜನಾ ಕಲಾವಿದ ರಾಮಚಂದ್ರ ಮುಕ್ಕಣ್ಣವರ ಅವರ ಕಲಾ ಸೇವೆಯು ಅಪ್ರತಿಮವಾಗಿದೆ ಎಂದರು.

ತುಳಸಿಗೇರಿಯ ರಾಮಾನಂದ ಸ್ವಾಮೀಜಿ, ಬೀದರವಳ್ಳಿಯ ಅಜೀತ ಗುರುಗಳು ಮಾತನಾಡಿದರು. ಸಿದ್ಧಾರೂಢ ಮುಕ್ಕಣ್ಣವರ, ತುಕಾರಾಮ ಮುಕ್ಕಣ್ಣವರ, ಎಂ.ಆರ್. ನಡುವಿನಮನಿ, ನಿಂಗಪ್ಪ ಹಣಮನ್ನವರ, ನಿಂಗಪ್ಪ ಮುಕ್ಕಣ್ಣವರ ಇದ್ದರು.

ಶಂಭು ಮುಕ್ಕಣ್ಣವರ ಸ್ವಾಗತಿಸಿದರು, ಬಸವರಾಜ ದಿನ್ನಿಮನಿ ನಿರೂಪಿಸಿದರು.
ವಿವಿಧೆಡೆಯಿಂದ ಬಂದಿದ್ದ ಕಲಾ ತಂಡಗಳು ಭಜನಾ ಮತ್ತು ಸಂಗೀತ ಸೇವೆ ಮಾಡಿದರು.

LEAVE A REPLY

Please enter your comment!
Please enter your name here

Latest News

ಖಂಡ್ರೆ ವಿರುದ್ಧ ಮಾತನಾಡಿದರೆ ನಾಲಿಗೆ ಕತ್ತರಿಸುವೆ – ಕಾಂಗ್ರೆಸ್ ಕಾರ್ಯಕರ್ತನ ವಿಡಿಯೋ

ಬೀದರ - ನಗರದ ಪಾಪನಾಶ ಶಿವಲಿಂಗ ‌ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಇತ್ತೀಚೆಗೆ ಭಗವಂತ ಖೂಬಾ v/s ಖಂಡ್ರೆ ಟಾಕ್‌ವಾರ್ ನಡೆದ ಘಟನೆ ಇನ್ನೂ ಹಸಿರಾಗಿದೆಈ ಹಿನ್ನೆಲೆಯಲ್ಲಿ...

More Articles Like This

error: Content is protected !!
Join WhatsApp Group