spot_img
spot_img

ರಾಯಣ್ಣನ ದೇಶಪ್ರೇಮ ಎಂದೆಂದಿಗೂ ಅಮರ – ಬಾಲಚಂದ್ರ ಜಾರಕಿಹೊಳಿ

Must Read

spot_img
- Advertisement -

ಮೂಡಲಗಿ- ನಮ್ಮ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯೋತ್ಸವದ ದಿನದಂದು ಹುಟ್ಟಿ, ಗಣ ರಾಜ್ಯೋತ್ಸವದಂದು ಮರಣ ಹೊಂದಿದ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಇಂದಿಗೂ, ಎಂದೆಂದಿಗೂ ಅಮರ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಗುರುವಾರದಂದು ತಾಲ್ಲೂಕಿನ ಕಲ್ಲೊಳ್ಳಿ ಪ.ಪಂ ಕಚೇರಿಯ ಹತ್ತಿರ ನಿರ್ಮಾಣಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ರಾಯಣ್ಣನಂತಹ ಕೆಚ್ಚದೆಯ ಶೂರರ ಜೀವನವು ಪ್ರತಿಯೊಬ್ಬ ವ್ಯಕ್ತಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಕಿತ್ತೂರು ಸಂಸ್ಥಾನ ಮತ್ತು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬ್ರಿಟಿಷ್‌ ರ ವಿರುದ್ಧ ಹೋರಾಟ ಮಾಡಿದರು. ಕಿತ್ತೂರು ಚೆನ್ನಮ್ಮನ ಬಲಗೈ ಬಂಟನಾಗಿ ಸಂಸ್ಥಾನವನ್ನು ಉಳಿಸಿಕೊಳ್ಳಲು ಅಹೋರಾತ್ರಿ ವೀರಯೋಧನಂತೆ ಕ್ರಾಂತಿ ಮಾಡಿದ ನಮ್ಮ ರಾಯಣ್ಣನು ಇಡೀ ಮನುಕುಲದ ಆಸ್ತಿ. ರಾಯಣ್ಣನವರಂತಹ ರಾಷ್ಟ್ರಪ್ರೇಮಿಗಳನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಬೇಡಿ ಎಂದು ಅವರು ಹೇಳಿದರು.

ರಾಯಣ್ಣನು ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ಅವರ ಅಜ್ಜನಿಂದ ಸಾವಿರ ಒಂಟಿ ಸರದಾರ ಎಂಬ ಬಿರುದನ್ನು ಪಡೆದ ಹೆಗ್ಗಳಿಕೆ ಇವರದ್ದಾಗಿತ್ತು. ತಮ್ಮ ಇಡೀ ಜೀವನವನ್ನು ಕಿತ್ತೂರು ನಾಡಿನ ಸ್ವಾತಂತ್ರ್ಯಕ್ಕಾಗಿ ಅರ್ಪಣೆ ಮಾಡಿದರು. ಜೀವ ಇರುವತನಕ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಟ ಮಾಡಿದರು.
ರಾಯಣ್ಣನ ಹುಟ್ಟುಹಬ್ಬ ಅಥವಾ ಪುಣ್ಯತಿಥಿಯಂತಹ ಸಂದರ್ಭದಲ್ಲಿ ಅವರ ನೆನಪು ಮಾಡ್ಕೊಬೇಡಿ. ಪ್ರತಿ ದಿನವೂ ಕ್ರಾಂತಿವೀರನ ಸ್ಮರಣೆ ಮಾಡಿಕೊಂಡು ರಾಯಣ್ಣನಿಗೆ ಗೌರವ ನೀಡುವಂತೆ ಅವರು ಹೇಳಿದರು.

- Advertisement -

ಕಲ್ಲೊಳಿ ಪಟ್ಟಣದಲ್ಲಿ ಹಾಲುಮತ ಸಮಾಜ ಬಾಂಧವರು ಒಗ್ಗಟ್ಟಿನಿಂದ ಕೂಡಿಕೊಂಡು ಸುಂದರವಾದ ರಾಯಣ್ಣನ ಮೂರ್ತಿಯನ್ನು ನಿರ್ಮಿಸಿದ್ದಾರೆ. ಶೂರ ಸಂಗೊಳ್ಳಿ ರಾಯಣ್ಣನ ಜನ್ಮದಿನದಂದು ಈ ಮೂರ್ತಿಯನ್ನು ಉದ್ಘಾಟಿಸುವ ಭಾಗ್ಯ ಪ್ರಾಪ್ತಿಯಾಗಿದೆ. ಅದಕ್ಕಾಗಿ ಕಲ್ಲೊಳಿ ಪಟ್ಟಣದ ಸಮಸ್ತ ನಾಗರಿಕರಿಗೆ ಋಣಿಯಾಗಿರುವುದಾಗಿ ಅವರು ತಿಳಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಮಾಜ ಬಾಂಧವರು ಕಂಬಳಿ ಹೊದಿಸಿ ಆತ್ಮೀಯವಾಗಿ ಸತ್ಕರಿಸಿದರು.
ಕವಲಗುಡ್ಡದ ಅಮರೇಶ್ವರ ಮಹಾರಾಜರು ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ. ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ರಾಜ್ಯ ಕುರುಬರ ಸಂಘದ ನಿರ್ದೇಶಕ ರಾಜೇಂದ್ರ ಸಣ್ಣಕ್ಕಿ, ಮುಖಂಡರಾದ ನೀಲಕಂಠ ಕಪ್ಪಲಗುದ್ದಿ, ಸುಭಾಸ ಕುರಬೇಟ, ಮಲ್ಲಪ್ಪ ಹೆಬ್ಬಾಳ, ಮಲ್ಲು ಕಡಾಡಿ, ಬಸವರಾಜ ಯಾದಗೂಡ, ಉಮೇಶ ಬೂದಿಹಾಳ, ಮಹಾಂತೇಶ ಕಪ್ಪಲಗುದ್ದಿ, ವಸಂತ ತಹಶಿಲ್ದಾರ, ಮಾಳಪ್ಪ ಸನದಿ, ರಾಮು ಗಾಣಿಗೇರ, ಮಹಾದೇವ ಮದಭಾವಿ, ರಂಗಪ್ಪ ದಾಸನಾಳ, ಭಗವಂತ ಪತ್ತಾರ, ರಾಮು ಹಡಗಿನಾಳ, ಭೀಮಶಿ ಗೊರೋಶಿ,ಸಂಜು ಕಳ್ಳಿಗುದ್ದಿ,ಬಸು ಜಗದಾಳ, ಮೋಹನ ಗಾಡಿವಡ್ಡರ, ವಿವಿಧ ಸಮಾಜಗಳ ಮುಖಂಡರು
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಜಗಳವಾಡುವುದೊಂದು ಸುಗುಣವೆಂದೆನಬೇಡ ಲಾಭವಿಲ್ಲದರಿಂದ ನಷ್ಟವುಂಟು ಮನದ ನೆಮ್ಮದಿ ಕೆಡಿಸಿ ನರಕಯಾತನೆ ಕೊಡುವ ಜಗಳವನೆ ಕಡೆಗಣಿಸು‌- ಎಮ್ಮೆತಮ್ಮ ಶಬ್ಧಾರ್ಥ ಸುಗುಣ‌ = ಒಳ್ಳೆಯ ಗುಣ. ನೆಮ್ಮದಿ‌ = ಸಮಾಧಾನ ತಾತ್ಪರ್ಯ ಬೇರೆಯವರೊಂದಿಗೆ ಗುದ್ದಾಡುವುದು , ತಂಟೆತಕರಾರು ಮಾಡುವುದು...
- Advertisement -

More Articles Like This

- Advertisement -
close
error: Content is protected !!
Join WhatsApp Group