ಮೂಡಲಗಿ: ‘ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಆತ್ಮವಿಶ್ವದೊಂದಿಗೆ ನಿರಂತರವಾಗಿ ಪ್ರಯತ್ನಪಟ್ಟರೆ ಯಶಸ್ಸು ಬೆನ್ನು ಹಿಂದೆ ಬರುತ್ತದೆ’ ಎಂದು ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.
ಇಲ್ಲಿಯ ಎಸ್‍ಎಸ್‍ಆರ್ ಪ್ರೌಢ ಶಾಲೆಯ 2022-23ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕೌಶಲತೆಯಲ್ಲಿ ಪರಿಣಿತರಾಗುವ ಮೂಲಕ ದೇಶದ ಪ್ರಗತಿಯ ರೂವಾರಿಗಳಾಗಬೇಕು ಎಂದರು.
ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಮಾತನಾಡಿ ಪ್ರಸ್ತುತ ದಿನಮಾನದಲ್ಲಿ ಸ್ಪರ್ಧೆ ಇದ್ದು, ಅಂಥ ಸ್ಪರ್ಧೆಯನ್ನು ಎದುರಿಸುವುದಕ್ಕೆ ವಿದ್ಯಾರ್ಥಿಗಳು ಸರ್ವರೀತಿಯಲ್ಲಿ ಸಿದ್ದರಿರಬೇಕು ಎಂದರು.
ಪ್ರಸಕ್ತ ಸಾಲಿನ ಆದರ್ಶ ವಿದ್ಯಾರ್ಥಿ ವಿನಾಯಕ ಕೊಡಗನೂರ ಮತ್ತು ಆದರ್ಶ ವಿದ್ಯಾರ್ಥಿನಿ ಸುಶ್ಮಿತಾ ಗಸ್ತಿ ಅವರಿಗೆ ಪಾರಿತೋಷಕ ನೀಡಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಸುಭಾಷ ಆರ್. ಸೋನವಾಲಕರ ವಹಿಸಿದ್ದರು.
ಅತಿಥಿಗಳಾಗಿ ಸಂಸ್ಥೆಯ ನಿರ್ದೇಶಕರಾದ ಆರ್.ಪಿ. ಸೋನವಾಲಕರ, ವೆಂಕಟೇಶ ಸೋನವಾಲಕರ, ಪ್ರದೀಪ ಲಂಕೆಪ್ಪನ್ನವರ, ಅನಿಲ ಸತರಡ್ಡಿ, ವಕೀಲ ಲಕ್ಷ್ಮಣ ಅಡಿಹುಡಿ, ಬಾಲಶೇಖರ ಬಂದಿ ಇದ್ದರು.
ಶಿಕ್ಷಕ ಚಂದ್ರು ಮೋಟೆಪ್ಪಗೋಳ ಪ್ರಾಸ್ತಾವಿಕ ಮಾತನಾಡಿದರು.
ಪ್ರಾಚಾರ್ಯ ಪ್ರೊ. ಎಸ್.ಡಿ. ತಳವಾರ, ಉಪಪ್ರಾಚಾರ್ಯ ಕೆ.ಎಸ್. ಹೊಸಟ್ಟಿ, ಆರ್.ಎಂ. ಕಾಂಬಳೆ, ಸಿ.ಎಂ. ಹಂಜಿ, ಸುಭಾಷ ಕುರಣೆ, ಆರ್.ಕೆ. ಕಳಸನ್ನವರ, ಹೇಮಾ ಢವಳೇಶ್ವರ ಇದ್ದರು.