ಸಂವಿಧಾನ ಓದು- ಆಶಯ ಕುರಿತು ಉಪನ್ಯಾಸ

Must Read

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನಲ್ಲಿ ಫೆಬ್ರವರಿ ೧೨ ರಂದು ಭಾನುವಾರ ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ರೋಟರಿ ಕ್ಲಬ್, ಕೋಣಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಓದು-ಆಶಯ ಕುರಿತು ಉಪನ್ಯಾಸ ಮತ್ತು ಸಮಾಜವಾದದ ಸಹ್ಯಾದ್ರಿ ಕೃತಿ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ದೀಪ ಬೆಳಗಿಸಿ ಉದ್ಘಾಟಿಸಿದರು. ಕಸಾಪ ಹೋಬಳಿ ಘಟಕದ ಅಧ್ಯಕ್ಷರಾದ ಡಾ. ಶ್ರೀಪತಿ ಹಳಗುಂದ ಅಧ್ಯಕ್ಷತೆ ವಹಿಸಿದ್ದರು. ಸಂವಿಧಾನ ಓದು-ಆಶಯ ಕುರಿತು ಗೌರವಾನ್ವಿತ ನ್ಯಾ. ಎಚ್. ಎನ್. ನಾಗಮೋಹನ್ ದಾಸ್ ಉಪನ್ಯಾಸ ನೀಡಿದರು. ಕೃತಿ ಬಿಡುಗಡೆ ಮಾಡಿದವರು ರೋಟರಿ ಅಧ್ಯಕ್ಷರಾದ ಎಂ. ಟಿ. ಪುಟ್ಟಪ್ಪ ಅವರು. ಕಿಗ್ಗಾ ರಾಜಶೇಖರ್ ಎಸ್. ಜಿ. ಅವರು ಕೃತಿಯ ಕುರಿತು ಮಾತನಾಡಿದರು.

ಹೋರಾಟಗಾರರು, ವಕೀಲರು ಆಗಿರುವ ಕೆ. ಪಿ. ಶ್ರೀಪಾಲ್ ಅವರನ್ನು ಗೌರವಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಾಂತಮ್ಮ, ಕಸಾಪ ತಾಲ್ಲೂಕು ಅಧ್ಯಕ್ಷರಾದ ಟಿ. ಕೆ. ರಮೇಶ್‌ ಶೆಟ್ಟಿ ಉಪಸ್ಥಿತರಿದ್ದರು.

ಕಜಾಪ ಅಧ್ಯಕ್ಷರಾದ ಪ್ರೊ. ಕೆ. ಎಂ. ಸುಧಾಕರ ಅವರು ಸ್ವಾಗತಿಸಿದರು. ಕಸಾಸಾಂ ವೇದಿಕೆ ಅಧ್ಯಕ್ಷರಾದ ಪ್ರಕಾಶ್ ಬಿ. ಕೋಲಿಗೆ ನಿರೂಪಿಸಿದರು. ಕುಕ್ಕೆ ಪ್ರಶಾಂತ ಆತಿಥ್ಯ ನೀಡಿದ್ದರು. ಎಸ್. ಇ. ಅಶೋಕ, ನೆಂಪೆ ದೇವರಾಜ್, ಆರ್. ಎಂ. ಧರ್ಮಕುಮಾರ್, ಶ್ರೀಧರ ಹೊಸಕೊಪ್ಪ, ಪ್ರೊ. ನಟರಾಜ ಅರಳಿಸುರಳಿ, ಸುಂದರೇಶ್, ಕಂಪದ ಶಿವು, ತಾಯಿಮನೆ ಸುದರ್ಶನ್, ಡಾ. ಪ್ರವೀಣ್, ಡಾ. ಪ್ರದೀಪ್, ಕಂಪದಗದ್ದೆ ನಾಗಪ್ಪಗೌಡರು, ರಾಜಶೇಖರ ಎಸ್.ಕೆ., ಕಸಾಪ ಜಿಲ್ಲಾ ಕಾರ್ಯದರ್ಶಿ ಗಳಾದ ಎಂ. ಎಂ. ಸ್ವಾಮಿ, ಡಿ. ಗಣೇಶ್, ಸಹ ಕಾರ್ಯದರ್ಶಿ ಸಿ. ಎಂ. ನೃಪತುಂಗ, ಗಾಯಕಿ ಅಶ್ವಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Latest News

ವಾರದ ಸಾಮೂಹಿಕ ಪ್ರಾಥ೯ನೆ ಹಾಗೂ ವಚನ ವಿಶ್ಲೇಷಣೆ.

ಬೆಳಗಾವಿ - ವಚನ ಪಿತಾಮಹ ಡಾ. ಫ .ಗು. ಹಳಕಟ್ಟಿ  ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 08.02.2026ರಂದು ಸಾಮೂಹಿಕ ಪ್ರಾರ್ಥನೆ ಹಾಗೂ ವಚನ...

More Articles Like This

error: Content is protected !!
Join WhatsApp Group