Homeಸುದ್ದಿಗಳುಪರೀಕ್ಷಾ ಕಾರ್ಯತಂತ್ರ ಮತ್ತು ವಿಧಾನ ಅರಿತುಕೊಳ್ಳಿ-ಮಹಾಲಿಂಗ ಮೇತ್ರಿ

ಪರೀಕ್ಷಾ ಕಾರ್ಯತಂತ್ರ ಮತ್ತು ವಿಧಾನ ಅರಿತುಕೊಳ್ಳಿ-ಮಹಾಲಿಂಗ ಮೇತ್ರಿ

ಮೂಡಲಗಿ: ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಗಳಿಸಲು ಕಾರ್ಯತಂತ್ರ ಮತ್ತು ವಿಧಾನಗಳು ಅರಿತುಕೊಂಡು  ಸರಳ ಹಾಗೂ ಸುಲಭ ಎಂತಹ ಕಠಿಣ ವಿಷಯವನ್ನು ಸರಳವಾಗಿ ತಿಳಿದುಕೊಳ್ಳಲು ಸಾಧ್ಯವಾಗಿಸುತ್ತದೆ ಎಂದು ಅಥಣಿಯ ಜೆ.ಎ.ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಮಹಾಲಿಂಗ ಪಿ.ಮೇತ್ರಿ ಹೇಳಿದರು.

ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ  ಎಸ್.ಎಸ್.ಆರ್. ಪದವಿ ಪೂರ್ವ  ಕಾಲೇಜಿನಲ್ಲಿ ಬುಧವಾರದಂದು ಆಯೋಜಿಸಿದ ಅರ್ಥಶಾಸ್ತ್ರ ವಿಭಾಗದ ಅಡಿಯಲ್ಲಿ ಎರಡು ದಿನಗಳ ಕಾಲ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಮತ್ತು ಯೋಜನಾ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮನಸಿಟ್ಟು ಅಧ್ಯಯನ ಮಾಡಿದರೆ ಬರಲಿರುವ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಬಹುದು ಮತ್ತು ಉತ್ತಮ ಫಲಿತಾಂಶ ತರಬೇಕು ಎಂದರು. 

ಮೂಡಲಗಿ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ ಮಾತನಾಡಿ, ಸಾಧನೆಗೆ ಸಾಕಷ್ಟು ಅವಕಾಶಗಳಿವೆ, ಪ್ರಯತ್ನ, ಶ್ರಮ ಹಾಗೂ  ನಿರಂತರವಾಗಿ ಅಧ್ಯಯನ ಶೀಲರಾದರೆ ಪರೀಕ್ಷೆಯನ್ನು ಎದುರಿಸಲು ಆತ್ಮ  ವಿಶ್ವಾಸ ಹೆಚ್ಚುತ್ತದೆ ಎಂದರು. 

ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಡಿ.ತಳವಾರ ಮಾತನಾಡಿ, ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡಿಸಿಕೊಂಡು ಹೆಚ್ಚು ಅಂಕಗಳಿಸಿ ತಮ್ಮ ಪಾಲಕರ ಮತ್ತು ಕಾಲೇಜಿನ ಕೀರ್ತಿ ಹೆಚ್ಚಿಸಬೇಕೆಂದರು. 

ಸಮಾರಂಭದಲ್ಲಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಎ.ಎಮ್.ಪಾಟೀಲ, ಉಪನ್ಯಾಸಕರಾದ ಎಮ್.ಎಸ್.ಪಾಟೀಲ, ಬಿ.ಜಿ.ಗಡಾದ, ಎಸ್.ಕೆ.ಹಿರೇಮಠ, ಎಲ್.ಆರ್.ಧರ್ಮಟ್ಟಿ ಮತ್ತಿತರರು ಇದ್ದರು. 

ಪ್ರತಿಭಾ ಪೂಜೇರಿ, ಸೌಂದರ್ಯ ಕಮತಿ ಪ್ರಾರ್ಥಿಸಿದರು, ಅಮರೇಶ ಪಾಟೀಲ ಸ್ವಾಗತಿಸಿದರು,ಚಂದ್ರಿಕಾ ಲಗಳಿ ನಿರೂಪಿಸಿದರು, ವಿದ್ಯಾಶ್ರೀ ತಳವಾರ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group