ಭೀಮಾ ಯುನಿರ್ವಸಲ್ ಸೆಂಟ್ರಲ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ

Must Read

ಸಿಂದಗಿ: ಭಾರತ ದೇಶವು ಜಗತ್ತಿನಲ್ಲಿ ಬಲಾಢ್ಯ ದೇಶವಾಗಿ ಹೊರಹೊಮ್ಮಲು ನಮ್ಮ ಸಂವಿಧಾನದ ಮೂಲಭೂತ ಹಕ್ಕು ಹಾಗೂ ಮೂಲಭೂತ ಕರ್ತವ್ಯ ಅಡಿಯಲ್ಲಿ ಆಡಳಿತವು ಮುಖ್ಯ ಕಾರಣವಾಗಿದೆ, ಅದೇ ರೀತಿ ಜಾತಿ, ಮತ, ಧರ್ಮ ಪಂಗಡವಿಲ್ಲದೆ ಸಮಾನತೆ ಹಾಗೂ ಸೌಹಾರ್ದದಿಂದ ನಾವು ಬದುಕು ಕಂಡುಕೊಳ್ಳುತ್ತಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷ ವಿಠ್ಠಲ ಕೊಳೂರು ಹೇಳಿದರು.

ಪಟ್ಟಣದ ಹೊರವಲಯದ ಭೀಮಾ ಯುನಿರ್ವಸಲ್ ಸೆಂಟ್ರಲ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿರುವ   74 ನೇ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡಿ, ಪ್ರತಿ ಭಾರತೀಯನಿಗೂ ಲಿಂಗಭೇದವಿಲ್ಲದೆ ಸಂವಿಧಾನದ ಅಡಿಯಲ್ಲಿ ಮತದಾನದ ಹಕ್ಕು ನೀಡಿದೆ. ನಮಗೆ ಸ್ವತಂತ್ರವಾಗಿ ಬದುಕುಲು ಹಕ್ಕುಗಳ ನೀಡಿದೆ.

ಭಾರತೀಯರಾದ ನಾವು ದೇಶದ ಮೂಲೆಮೂಲೆಯಲ್ಲಿ ಬದುಕುಕಂಡುಕೊಳ್ಳಬಹುದು. ಸೂಕ್ತ ಹಾಗೂ ಸರಳ ಆಡಳಿತ ನಡೆಸಲು ಆಡಳಿತ ವಿಕೇಂದ್ರೀಕರಣ ಮಾಡಿ ಉತ್ತಮ ಆಡಳಿತ ನೀಡಲು ಸಂವಿಧಾನ ಕಾನೂನಾತ್ಮಕ ವಿಧಿಯಿಂದ  ಮಾತ್ರ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರಾದ ದತ್ತು ಮಾವೂರ, ಪ್ರಶಾಂತ ಕಮತಗಿ, ಶ್ರೀಮಂತ ಮಲ್ಲೇದ, ಜಿ.ಕೆ. ಪಡಗಾನೂರ, ಜನಪದ ಸಾಹಿತಿ ಡಾ. ಎಂ.ಎಂ. ಪಡಶೆಟ್ಟಿ, ಶಾಂತು ಕುಂಬಾರ, ಭೀಮಾಶಂಕರ ಮಾವೂರ, ಭೀಮಾಶಂಕರ ತಾರಾಪೂರ, ಪ್ರಾಂಶುಪಾಲರಾದ ದಸರಾ ಶಾಂತಾ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.

Latest News

ಕಟ್ಟೀಮನಿ ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಮೂಡಲಗಿ: ಕಥೆಗಳ ಮೂಲಕ ಬಸವರಾಜ ಕಟ್ಟೀಮನಿಯವರ ಸಾಹಿತ್ಯ ಮತ್ತು ಚಿಂತನೆಗಳನ್ನು ಯುವ ಪೀಳಿಗೆಗೆ ತಲುಪಿಸುವುದು ಈ ಸ್ಫರ್ಧೆಯ ಉದ್ದೇಶವಾಗಿದೆ. ಕುವೆಂಪು ನಂತರದಲ್ಲಿ ಬದುಕು ಮತ್ತು ಬರಹದ...

More Articles Like This

error: Content is protected !!
Join WhatsApp Group