ಹಳ್ಳೂರದಲ್ಲಿ ವಿವಿಧೆಡೆ ಗಣರಾಜ್ಯೋತ್ಸವ

Must Read

ಹಳ್ಳೂರ-  ನಾವು ಭಾರತ ದೇಶದ ಪ್ರಜೆಗಳು ವಿವಿಧತೆಯಲ್ಲಿ ಏಕತೆಯನ್ನು ಕಂಡಿದ್ದೇವೆ ಸಮಾನತೆ ,ದೇಶದ ಉದ್ಧಾರಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿರೋಣ 1950 ಜನವರಿ 26 ರಂದು ಭಾರತ ಸಂವಿಧಾನವು ಜಾರಿಗೆ ಬಂದು ದೇಶವು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವಾಗಿ ಘೋಷಣೆಯಾಯಿತೆಂದು ಜಿಬಿಲ್ ಡಿಜಿಎಂ ಅಮಿತ ತ್ರಿಪಾಠಿ ಹೇಳಿದರು.

ಅವರು ಸಮೀರವಾಡಿ ಕೆ ಜಿ ಸೋಮಯ್ಯ ಇಂಗ್ಲೀಷ ಮೀಡಿಯಂ ಶಾಲೆಯಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಆಚರಣೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ 77ನೇ ಗಣರಾಜ್ಯೋತ್ಸವದ ಈ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಜನವರಿ 26ನೇ ತಾರೀಖು ಭಾರತದ ಚರಿತ್ರೆಯಲ್ಲಿ ಒಂದು ಅತ್ಯಂತ ನಿರ್ಣಾಯಕ ದಿನ. ಇದು ಸಾವಿರಾರು ವರ್ಷಗಳಿಂದ ರೂಪುಗೊಂಡಿದ್ದ ರಾಜಪ್ರಭುತ್ವ ಹಾಗೂ 17ನೇ ಶತಮಾನದಿಂದ ಅಸ್ತಿತ್ವಕ್ಕೆ ಬಂದಿದ್ದ ವಸಾಹತುಶಾಹಿ ಆಡಳಿತವನ್ನು ಕೊನೆಗೊಳಿಸಿ ಜನಪ್ರಭುತ್ವವನ್ನು ಪ್ರತಿಷ್ಠಾಪಿಸಿಕೊಂಡ ದಿನ.
ತಾರತಮ್ಯವನ್ನು ಆಧರಿಸಿದ್ದ ವಸಾಹತುಶಾಹಿಯನ್ನು ಹಾಗೂ ಪುರಾತನ ಕಾನೂನುಗಳನ್ನು ಕಿತ್ತೆಸೆದು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ವಿಚಾರದಲ್ಲಿ ಎಲ್ಲರೂ ಸಮಾನರು ಎನ್ನುವ ನವ ಭಾರತದ ಪರಿಕಲ್ಪನೆಯ ಸಂವಿಧಾನವನ್ನು ಜಾರಿಗೊಳಿಸಿದ ದಿನ. ಗಣತಂತ್ರ ವ್ಯವಸ್ಥೆಯನ್ನು ರೂಪುಗೊಳಿಸಿಕೊಳ್ಳುವುದಕ್ಕಾಗಿ ಅಸಂಖ್ಯಾತ ಜನರು ತ್ಯಾಗ-ಬಲಿದಾನಗಳನ್ನು ಮಾಡಿದ್ದಾರೆ. ಅವರೆಲ್ಲರನ್ನೂ ಈ ಅಮೃತ ಗಳಿಗೆಯಲ್ಲಿ ಗೌರವಪೂರ್ವಕವಾಗಿ ಸ್ಮರಿಸೋಣ ಎಂದು ಹೇಳಿದರು.

ಈ ಸಮಯದಲ್ಲಿ ಪ್ರಾಂಶುಪಾಲರಾದ ಅನಿಲಕುಮಾರ ಸರ,ಶಿಕ್ಷಕರಾದ ಸುನೀಲ. ವಿಕ್ರಮ ಸಹ ಶಿಕ್ಷಕಿಯರಾದ ಸಂಧ್ಯಾ ತ್ರಿಪಾಠಿ. ರೇವತಿ ಸೇರಿದಂತೆ ವಿದ್ಯಾರ್ಥಿಗಳಿದ್ದರು.

ಹಳ್ಳೂರಲ್ಲಿ ವಿವಿಧೆಡೆ 77 ನೇ ಗಣರಾಜ್ಯೋತ್ಸವ 

ಗ್ರಾಮದಲ್ಲಿ ವಿವಿಧೆಡೆ ಸಂಭ್ರಮ ಸಡಗರದಿಂದ ನಡೆದ 77 ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಹಾನ ನಾಯಕರುಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಗ್ರಾಮ ಪಂಚಾಯತಿ, ಬ ಕು ಮ ಪ್ರೌಢ ಶಾಲೆ, ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರಿ ಸಂಘ, ಗ್ರಾಮ ಆಡಳಿತ ಕಚೇರಿ, ಪಶು ಆಸ್ಪತ್ರೆ , ಶ್ರೀ ಬಸವೇಶ್ವರ ಕೊ ಅಪರೆಟಿವ ಬ್ಯಾಂಕ ಸೇರಿದಂತೆ ಶಾಲಾ ಕಾಲೇಜು, ಸರಕಾರಿ ಕಚೇರಿ ಸಂಘ ಸಂಸ್ಥೆಗಳಲ್ಲಿ,77 ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿದರು. ಮುದ್ದು ಮಕ್ಕಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರುಗಳ ವೇಷ ಭೂಷಣ ಧರಿಸಿದ್ದು ವಿಶೇಷವಾಗಿ ಕಂಡು ಬಂದಿತು.

LEAVE A REPLY

Please enter your comment!
Please enter your name here

Latest News

ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮ

ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಆವರಣದಲ್ಲಿ 77ನೇ ಗಣರಾಜ್ಯೋತ್ಸವವನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮೇಲ್ಮನವಿ ನ್ಯಾಯಪೀಠದ ಸದಸ್ಯರು ಹಾಗೂ ಗೌರವಾನ್ವಿತ ಜಿಲ್ಲಾ...

More Articles Like This

error: Content is protected !!
Join WhatsApp Group