ಸಿಂದಗಿ: ಅಂಗನವಾಡಿ ಕೆಲಸಗಾರರನ್ನು ನಿರ್ಲಕ್ಷ್ಯ ಮಾಡುತ್ತಿರುವ ಕೇಂದ್ರ ಸರಕಾರ ಧೋರಣೆ ವಿರುದ್ಧ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಮೊಬಾಯಲ್ ನೀಡುವಂತೆ ಆಗ್ರಹಿಸಿ ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಶಿಶು ಅಭಿವೃದ್ಧಿ ಕಛೇರಿಯ ಮುಂದೆ ಅಂಗನವಾಡಿ ನೌಕರರ ಸಂಘ(ಸಿಐಟಿಯು ಸಂಯೋಜಿತ) ವತಿಯಿಂದ ಪ್ರತಿಭಟನೆ ನಡೆಸಿ ಅಧಿಕಾರಿ ಬಸವರಾಜ ಜಗಳೂರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಸರಸ್ವತಿ ಮಠ ಮಾತನಾಡಿ, ಹಲವು ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರು ಸರಕಾರ ನಿರ್ದೇಶನ ನೀಡುವ ಕಾರ್ಯಕ್ರಮಗಳನ್ನು ಮೊಬಾಯಿಲ್ ಮೂಲಕ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಪಾರರ್ದಶಕವಾಗಿ ಮುಟ್ಟಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ 4 ವರ್ಷಗಳ ಹಿಂದೆ ಮೊಬಾಯಿಲ್‍ಗಳನ್ನು ನೀಡಿದೆ ಆದರೆ ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಅದರಿಂದ ಇಲಾಖೆಗಳ ಮೇಲಾಧಿಕಾರಿಗಳಿಂದ ಒತ್ತಡ ಹೆಚ್ಚುತ್ತಿದ್ದು ಕಾರಣ ಮೊದಲಿನ ಪದ್ದತಿಯಂತೆ ಮನೆ ಮನೆಗಳಿಗೆ ತಿರುಗಾಡಿ ಮಾಹಿತಿ ಕಲೆ ಹಾಕಿ ರಜಿಸ್ಟರಗಳಲ್ಲಿ ಬರೆದು ಸಂಪರ್ಕ ಇಲಾಖೆಗಳಿಗೆ ಮುಟ್ಟಿಸುತ್ತೇವೆ. ನಮ್ಮ ಕಡಿಮೆ ವೇತನದಲ್ಲಿ ಮೊಬಾಯಿಲ್‍ಗಳಿಗೆ ಪ್ರತಿತಿಂಗಳು ರಿಚಾರ್ಜ ಮಾಡಲು ಆಗುತ್ತಿಲ್ಲ ಅಲ್ಲದೆ ರಿಚಾರ್ಜ ಮಾಡಿಸಿದರು ಕೂಡಾ ಸಕಾಲಕ್ಕೆ ಸಂಪರ್ಕ ಸಿಗುವುದಿಲ್ಲ ಆನ್‍ಲೈನಲ್ಲಿ ಕಾರ್ಯನಿರ್ವಹಿಸುವುದು ಅಸಾಧ್ಯವಾಗುತ್ತಿದೆ ಕಾರಣ ಒಳ್ಳೆಯ ಮೊಬಾಯಿಲ್ ಕೊಡಿ ಇಲ್ಲದಿದ್ದರೆ ರಜಿಷ್ಟರ ಬಳಕೆಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುರಡಿ ಮಾತನಾಡಿ, ದೇಶದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕರಿಗೆ ಕನಿಷ್ಟ ವೇತನ ನಿಗದಿ ಮಾಡಿ ಜಾರಿಗೊಳಿಸಿ, ಸಮಾಜಿಕ ಭದ್ರತೆಗಳಾದ ಇಎಸ್‍ಐ, ಪಿಎಫ್, ಪಿಂಚಣಿ, ಎಕ್ಸ್‍ಗ್ರೇಷಿಯಾ ಇತರೆ ಸೌಲಭ್ಯಗಳನ್ನು ಕೊಡಬೇಕು, ಸುಪ್ರೀಕೋರ್ಟ ನೀಡಿರುವ ತೀರ್ಪಿನಂತೆ ಗ್ರಾಚ್ಯುಟಿ ಕೂಡಲೇ ಜಾರಿ ಮಾಡಬೇಕು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗುವ ಮೂಲಭೂತ ಸೌಕರ್ಯಗಳನ್ನು ನಿರ್ಲಕ್ಷ ತೋರದೇ ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಪ್ರಾಂತ ರೈತ ಸಂಘದ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಕಳೆದ 4 ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬಾಯಿಲ್ ಉಪಯೋಗಿಸಿ ಹಲವಾರು ಕಾಯಕಗಳಲ್ಲಿ ತೊಡಗುವಂತೆ ಮಾಡಿದ್ದಾರೆ ಅದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿ ಕಾರ್ಯಗಳಾದ ಶಿಶು ಪಾಲನಾ ತರಬೇತಿ, ಬಾಣಂತಿಯರಿಗೆ ಜಾಗೃತಿ ಹಾಗೂ ಮಗುವಿಗೆ ಅಕ್ಷರದ ಜ್ಞಾನ ನೀಡುವುದು ಸೇರಿದಂತೆ ಮಕ್ಕಳಿಗಾಗಿ ಮಹಿಳೆಯರಿಗಾಗಿ ಕಾರ್ಯಕ್ರಮಗಳು ನೀಡಬೇಕು ಆದರೆ ಸ್ಮಶಾನ ದಾಖಲಾತಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಹಲವು ಇಲಾಖೆಗಳು ಅಂಗನವಾಡಿ ಕಾರ್ಯಕರ್ತೆಯರನ್ನು ತೊಡಗಿಸಿಕೊಂಡಿದೆ ಅದನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯ ಸರಕಾರ ಚುನಾವಣೆಯ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವೇತನ 15 ಸಾವಿರ ನೀಡುತ್ತೇವೆ ಎಂದು ಭರವಸೆ ಕೊಟ್ಟಿತ್ತು ಅದು ಇನ್ನೂವರೆಗೆ ನೀಡಿಲ್ಲ ಅದು ಕೂಡಾ ಮುಂಬರುವ ದಿನಗಳಲ್ಲಿ ಜಾರಿಗಾಗಿ ಒತ್ತಾಯಿಸಲಾಗುವುದು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಅಧಿಕಾರಿ ಬಸವರಾಜ ಜಗಳೂರ ಮಾತನಾಡಿ, ಸರಕಾರ ನೀಡಿದ ಮೊಬಾಯಿಲ್ ಕಡಿಮೆ ಸ್ಥಳಾವಕಾಶ ನೀಡಿದೆ ಅದಕ್ಕೆ ಬೇರೆ ಬೇರೆ ಆಪ್‍ಗಳನ್ನು ನೊಂದಣಿ ಪಡೆದುಕೊಳ್ಳದೇ ಇಲಾಖೆಗೆ ಸಂಬಂಧಪಟ್ಟ ಆಪ್ ಮತ್ತು ವಾಟ್ಸಾಪ ಮಾತ್ರ ನೊಂದಣಿ ಮಾಡಿಕೊಳ್ಳಿ ಮೊಬಾಯಿಲ್‍ಗಳಿಗೆ ಪ್ರತಿತಿಂಗಳು ಮುಖ್ಯ ಕಛೇರಿಯಿಂದ ರಿಚಾರ್ಜ ಆಗುತ್ತೆ ಸರಿಯಾದ ಮಾಹಿತಿ ಪಡೆದು ಮೇಲಾಧಿಕಾರಿಗಳಿಗೆ ರವಾನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎಲ್.ಎಂ.ಕುಂಬಾರ, ಸರೋಜನಿ ಪಾಟೀಲ, ಬಸಮ್ಮ ಅಗಸರ, ಸುನಂದಾ ಕಲಕೇರಿ, ಮಹಾನಂದಾ ಮಾಶ್ಯಾಳ, ಸುಮಾ ದುಳಭಾ, ಸುರೇಖಾ ಹೊಸಮನಿ, ಕಲಾವತಿ ವಾಲೀಕಾರ, ಮಹಾದೇವಿ ಪಾಸೋಡಿ, ಕೆ.ಜಿ.ನಾಗಾವಿ, ಐ.ಡಿ.ಹೊಳನವರ, ಎಸ್.ಎಸ್.ಬಿರಾದಾರ, ಕೆ.ಎಂ.ಕೆಸರಿ, ಪ್ರೇಮಾ ಕೊರವಾರ, ಶಾಂತಾ ಗೋಲಗೇರಿ, ಸವಿತಾ ಕೊಕಟನೂರ, ಪ್ರಭಾವತಿ ತಳವಾರ, ದುಂಡಮ್ಮ ಕೊರಬು, ಕವಿತಾ ವಸ್ತ್ರದ, ಆರ್.ಎಚ್.ಹಿರೇಮಠ, ಸಿವಾನಂದ ಹಡಪದ, ಹಾಜಿಮಲಂಗ ಖಾನಾಪುರ ಸೇರಿದಂತೆ ನೂರಾರು ಕಾರ್ಯಕರ್ತೆಯರು ಇದ್ದರು.