spot_img
spot_img

ಡಿ.೨೩ರಂದು ಓವರ್ ಲ್ಯಾಂಡ್ ಅಸೋಸಿಯೇಷನ್ ವತಿಯಿಂದ ಅಲೆಮಾರಿಗಳ ಸಮಾವೇಶಕ್ಕೆ ಚಾಲನೆ

Must Read

spot_img
- Advertisement -

ಮೈಸೂರು -ದಕ್ಷಿಣ ಭಾರತದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮೈಸೂರಿನಲ್ಲಿ ಡಿ.೨೩ರಂದು ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಓವರ್ ಲ್ಯಾಂಡ್ ಅಸೋಸಿಯೇಷನ್ ವತಿಯಿಂದ ಅಲೆಮಾರಿಗಳ ಸಮಾವೇಶಕ್ಕೆ ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಲಿದ್ದಾರೆ.

ಈ ಸಮಾವೇಶವು ಮೈಸೂರಿನಲ್ಲಿ ಪ್ರಥಮ ಅಲೆಮಾರಿಗಳ ಒಗ್ಗೂಡುವಿಕೆಗೆ ಸಾಕ್ಷಿಯಾಗಲಿದೆ. ಇದೇ ಡಿಸೆಂಬರ್ ೨೩ರಿಂದ ೩೦ರವರೆಗೆ ದೇಶಾದ್ಯಂತ ಇರುವ ಅಲೆಮಾರಿಗಳು, ಪರಿಸರ ಪ್ರೇಮಿಗಳು ಕೊಡಗಿಗೆ ಮೈಸೂರಿನ ಮೂಲಕ ತಮ್ಮದೇ ಆದ ವಾಹನದಲ್ಲಿ ಪ್ರಯಾಣಿಸಿ ಯಾವುದೇ ರೀತಿಯ ಪರಿಸರಕ್ಕೆ ಧಕ್ಕೆಯಾಗದಂತೆ ತಮ್ಮ ತಮ್ಮ ವಾಹನದಲ್ಲಿಯೇ ವಾಸ್ತವ್ಯವನ್ನು ಹೂಡಿ, ಸಾಮಾಜಿಕ ಸೇವಾ ಕಾರ್ಯಗಳ ಚಟುವಟಿಕೆಗಳಲ್ಲಿ ಭಾಗವಹಿಸಿ, ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ವಿಶಿಷ್ಯವಾದ ವಿನೂತನ ಕಾರ್ಯಕ್ರಮವಾಗಿದೆ.

ಈ ಅಲೆಮಾರಿಗಳ ಪೈಕಿ ೫೦ಕ್ಕಿಂತ ಅಧಿಕ ಕಾರುಗಳಲ್ಲಿ ೧೦೦ಕ್ಕೂ ಹೆಚ್ಚು ಆಸಕ್ತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಬಹಳ ಮುಖ್ಯಾಂಶಗಳೆಂದರೆ ಆರೋಗ್ಯ ಶಿಬಿರ, ಬಡವರಿಗೆ ಕಂಬಳಿಗಳನ್ನು ವಿತರಿಸುವುದು ಹಾಗೂ ಮಕ್ಕಳಿಗೆ ಪುಸ್ತಕ ವಿತರಣೆ, ಪರಿಸರ ಉಳಿಸಿ ಜಾಗೃತಿ ಮೂಡಿಸಿ ಎಂಬ ವಿಚಾರ ಸಂಕಿರಣ ಮತ್ತು ಪರಿಸರದಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಿ ಮುಂದಿನ ತಲೆಮಾರಿಗೆ ಕಾಪಾಡುವಂತಹ ಪರಿಸರವನ್ನು ಉಳಿಸಿ ಬೆಳೆಸುವಂತಹ ವಿನೂತನ ಕಾರ್ಯಕ್ರಮ ಇದಾಗಿದೆ.

- Advertisement -

ಅಲೆಮಾರಿಗಳ ಪ್ರಯಾಣ, ವಿಶಿಷ್ಟ ರೀತಿಯ ಅನುಭವ ಮತ್ತು ಪ್ರವಾಸ, ಪರಿಸರ ಸಂರಕ್ಷಣೆಗೆ ಪೂರಕ ವಾತಾವರಣ ಕಲ್ಪಿಸುವುದು ಹಾಗೂ ಬಹಳ ಮುಖ್ಯವಾಗಿ ಅಲೆಮಾರಿಗಳು ವಾಹನಗಳಲ್ಲಿಯೇ ಸ್ವಯಂ ಪೂರ್ಣ ಪ್ರವಾಸವನ್ನು ಕಳೆಯುವಂತಹದ್ದು (ಊಟ, ವಸತಿ, ಶೌಚಾಲಯ, ಸ್ನಾನ ಹಾಗೂ ದೈನಂದಿನ ಚಟುವಟಿಕೆಗಳು) ಅಗಿರುತ್ತದೆ. ಪರಿಸರಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಜವಾಬ್ದಾರಿಯುತ ಭೂಪ್ರದೇಶಗಳ ಪ್ರಯಾಣವನ್ನು ಬೆಳೆಸುವ ಗುರಿಯನ್ನು ಹೊಂದಿರುತ್ತದೆ. ಸಮುದಾಯದ ಬಾಗಿತ್ವವನ್ನು, ದೇಶದ ಎಲ್ಲೆಡೆಯಿಂದ ಬರುವ ಅಲೆಮಾರಿ ಸಾಹಸಿಗರನ್ನು ಒಗ್ಗೂಡಿಸುವ ವಿಭಿನ್ನ ಗುಂಪಿನ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಕೊಡಗಿನ ಸುಂದರವಾದ ಹಾಗೂ ರಮಣೀಯವಾದ ಭೂದೃಶ್ಯಗಳನ್ನು ಸೆರೆ ಹಿಡಿದು ಜಗತ್ತಿಗೆ ತಲುಪಿಸುವ ಪ್ರಯತ್ನವಾಗಿದೆ.

ದಕ್ಷಿಣ ಭಾರತದಲ್ಲಿ ನಡೆಯುತ್ತಿರುವುದು ಇದೇ ಪ್ರಪ್ರಥಮ. ಮೈಸೂರಿನಿಂದ ಪ್ರಯಾಣಿಕರು ವಿರಾಜಪೇಟೆ, ಕುಶಾಲನಗರಗಳತ್ತ ಪಯಣ ಬೆಳೆಸಿ, ತಮ್ಮ ತಮ್ಮ ಕಾರುಗಳಲ್ಲೇ ವಾಸ್ತವ್ಯ ಹೂಡಿ, ಗ್ರಾಮ, ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸುವ ವಿಶಿಷ್ಟವಾದ ಕಾರ್ಯಕ್ರಮ ಹಾಗೂ ಮಹಿಳೆಯರ ವ್ಯಕ್ತಿತ್ವ ಮತ್ತು ಸಾಮಾಜಿಕ ಶೈಕ್ಷಣಿಕ ಸಮಾನತೆ ಕಾಪಾಡಿಕೊಳ್ಳುವಲ್ಲಿ ವಿಶೇಷ ಅರಿವು ಮೂಡಿಸುವ ಪ್ರಯೋಗವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ೬೨೬೭೦೮೯೯೫೫ ಸಂಪರ್ಕಿಸಬಹುದು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶ್ವಮಾನವನಾಗಬೇಕೆಂಬುದು ಕುವೆಂಪುರವರ ಕನಸಾಗಿತ್ತು – ಕುಸುಮಾ ಕೆ.ಆರ್ 

ಹುಟ್ಟುವ ಪ್ರತಿ ಮಗು ವಿಶ್ವ್ವಮಾನವನೇ. ಆನಂತರ ಆ ಮಗುವನ್ನು ಜಾತಿ ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು...
- Advertisement -

More Articles Like This

- Advertisement -
close
error: Content is protected !!
Join WhatsApp Group