Homeಸುದ್ದಿಗಳುS R Ekkundi Information in Kannada- ಸು.ರಂ.ಎಕ್ಕುಂಡಿ ಒಂದು ನೆನಪು

S R Ekkundi Information in Kannada- ಸು.ರಂ.ಎಕ್ಕುಂಡಿ ಒಂದು ನೆನಪು

ಸು.ರಂ. ಎಕ್ಕುಂಡಿ – ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ.ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು ೧೯೨೩ ಜನವರಿ ೨೦ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ.

೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾದರು.

ಸು. ರಂ. ಎಕ್ಕುಂಡಿ

ಜನನ: ೨೦-೦೧-೧೯೨೩
ರಾಣೆಬೆನ್ನೂರು, ಹಾವೇರಿ ಜಿಲ್ಲೆ, ಕರ್ನಾಟಕ

ವಿದಾಯ: ೧೯೯೫, ಬೆಂಗಳೂರು

ವೃತ್ತಿ: ಕವಿ ಮತ್ತು ಶಿಕ್ಷಕ

ಪ್ರಮುಖ ಪ್ರಶಸ್ತಿ(ಗಳು):

  • ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
  • ನ್ಯಾಶನಲ್ ಅವಾರ್ಡ್ ಫಾರ್ ಟೀಚರ್ಸ್s,
  • ಸೋವಿಯತ್ ಲ್ಯಾಂಡ್ ಅವಾರ್ಡ್.

ಪ್ರಭಾವಗಳು: ಮಂಗೇಶ್ ನಾಡಕರ್ಣಿ, ಸುಂದರ ನಾಡಕರ್ಣಿ

ಪ್ರಭಾವಿತರು: ವಿ. ಕೃ. ಗೋಕಾಕ್, ರಂ.ಶ್ರೀ.ಮುಗಳಿ

ಕೃತಿಗಳು:

  • ಶ್ರೀ ಆನಂದತೀರ್ಥರು
  • ಸಂತಾನ
  • ಹಾವಾಡಿಗರ ಹುಡುಗ
  • ಮತ್ಸ್ಯಗಂಧಿ
  • ಬೆಳ್ಳಕ್ಕಿಗಳು

ಕಥಾಸಂಕಲನ: ನೆರಳು

ಕಾದಂಬರಿ:‌ಪ್ರತಿಬಿಂಬಗಳು

ಪರಿಚಯ: ಶ್ರೀ ಪು.ತಿ.ನರಸಿಂಹಾಚಾರ್ಯರು

ಅನುವಾದ: ಎರಡು ರಶಿಯನ್ ಕಾದಂಬರಿಗಳು

ಪುರಸ್ಕಾರ:

  • “ಲೆನಿನ್ನರ ನೆನಪಿಗೆ” ಎನ್ನುವ ಕೃತಿಗೆ ೧೯೭೦ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ.
  • “ಮತ್ಸ್ಯಗಂಧಿ” ಕವನ ಸಂಕಲನಕ್ಕೆ ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
  • “ಬೆಳ್ಳಕ್ಕಿಗಳು” ಹಸ್ತಪ್ರತಿಗೆ ೧೯೮೨ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ.
  • “ಬಕುಲದ ಹೂವುಗಳು” ಎಂಬ ಕೃತಿಗೆ ೧೯೯೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

ಮಾಹಿತಿ ಕೃಪೆ: ವಿಕಿಪೀಡಿಯ
ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ

RELATED ARTICLES

Most Popular

error: Content is protected !!
Join WhatsApp Group