ಜನಜನಿತ ಕಲಾ ಪ್ರದರ್ಶನ ಸಂಘ, ಬೀದರ ವತಿಯಿಂದ ‘ಸಂಬಂಧ ದೊಡ್ಡದು’ ನಾಟಕ ಪ್ರದರ್ಶನ

0
322

ಬೀದರ: ಜನಜನಿತ ಕಲಾ ಪ್ರದರ್ಶನ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಚಲನಚಿತ್ರ ನಟ ಯಶ್ವಂತ ಕುಚಬಾಳ ಇವರ ರಚನೆ ಹಾಗೂ ನಿರ್ದೇಶನದ ಸಂಬಂಧ ದೊಡ್ಡದು ಎಂಬ ನಾಟಕ ಪ್ರದರ್ಶನ ಷ.ಬ್ರ. ಡಾ. ರಾಜಶೇಖರ ಶಿವಾಚಾರ್ಯರ ಉದ್ಘಾಟನೆಯೊಂದಿಗೆ ಜರುಗಿತು. ಅಧ್ಯಕ್ಷತೆಯನ್ನು ಶ್ರೀ ಜಗನ್ನಾಥ ಮಹಾರಾಜ ಇವರು ವಹಿಸಿದರು.

ಮುಖ್ಯ ಅತಿಥಿಗಳಾಗಿ ಮಹಾರುದ್ರಪ್ಪಾ ಆಣದೂರ, ಸಂಗಮೇಶ ಜವಾದಿ ಚಿಟಗುಪ್ಪಾ, ಡಾ. ರಾಜಕುಮಾರ ಹೆಬ್ಬಾಳೆ ಮುಂತಾದವರು ಆಗಮಿಸಿದರು.

ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ ಪೂಜ್ಯ ಶ್ರೀಗಳು ಮಾತನಾಡುತ್ತಾ, ಶರಣರು ಹೇಳುವಂತೆ ಇಂತಹ ಅನುಭವ ನಾಟಕಗಳಿಂದ ಮಾನವನ ಜೀವನ ಪರಿವರ್ತನೆಯಾಗುತ್ತಿದೆ. ಮುಪ್ಪಾವಸ್ಥೆಯ ಪಾಲಕರನ್ನು ವೃದ್ಧಾಶ್ರಮಕ್ಕೆ ತಳ್ಳುವ ಚಿತ್ರಣ ನಾಟಕದಲ್ಲಿ ಕಣ್ಣಿಗೆ ಕಟ್ಟುವಂತಿತ್ತು. ಅನೇಕ ಗ್ರಾಮಗಳಲ್ಲಿ ಇಂತಹ ನಾಟಕಗಳು ಆಗುವ ಅವಶ್ಯಕತೆ ಇದೆ ಎಂದು ಹೇಳಿದರು. ನಾಟಕ ರಚಿಸಿ, ನಿರ್ದೇಶಿಸಿದ ಯಶ್ವಂತ ಅವರ ಸಾಧನೆ ತುಂಬಾ ಶ್ಲಾಘನೀಯವಾಗಿದೆ ಎಂದು ಹೇಳಿದರು. ಇದೇ ವೇದಿಕೆ ಮೇಲೆ ಪ್ರಕಾಶ ಹಾಗೂ ತಂಡದವರಿಂದ ಜಾನಪದ ಗೀತೆಗಳು ಹಾಗೂ ಶ್ರೀಮತಿ ಶ್ರೀದೇವಿ ಹಾಗೂ ತಂಡದವರಿಂದ ಭಕ್ತಿಗೀತೆಗಳು ಜರುಗಿದವು.

ಪ್ರಾರಂಭದಲ್ಲಿ ಕು. ಪ್ರೀತಮ ಕುಚಬಾಳ ಪ್ರಾರ್ಥನೆ ಹಾಗೂ ಕ.ಜಾ.ಪ. ಸದಸ್ಯ ಶ್ರೀಮತಿ ಸಂಗೀತಾ ಕಾಂಬಳೆ ಅವರು ಸ್ವಾಗತ ಬಯಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಕುಚಬಾಳ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆಗೆ ಬೆಮಳಖೇಡಾದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊನೆಯದಾಗಿ ಸಿದ್ಧಾರ್ಥ ಪರಸನೂರ ಇವರ ವಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.