“ಆಜಾದಿಕಾ ಅಮೃತ” ಮಹೋತ್ಸವ ಹಾಗೂ ಕಾನೂನು ಸೇವೆಗಳ ಸಪ್ತಾಹ ಕಾರ್ಯಕ್ರಮ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

ಸವದತ್ತಿ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 4 ರಲ್ಲಿ ‘ಕಾನೂನು ಸೇವಾ ಪ್ರಾಧಿಕಾರ ಮತ್ತು ಸವದತ್ತಿ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಭಾರತದ ಸ್ವಾತಂತ್ರ್ಯ ದ 75 ವಷ೯ಗಳ ” ಆಜಾದಿ ಕಾ ಅಮೃತ ” ಮಹೋತ್ಸವ ಹಾಗೂ ಕಾನೂನು ಸೇವೆಗಳ ಸಪ್ತಾಹದ ನೆನಪಿಗಾಗಿ ” ಫ್ಯಾನ್ ಇಂಡಿಯಾ ಜಾಗೃತಿ ಮತ್ತು ಔಟ್ರೀಚ್ ಕಾಯ೯ ಕ್ರಮಗಳು ” ಮಂಗಳವಾರ ಜರುಗಿದವು. ಕಾರ್ಯಕ್ರಮವನ್ನು ಎಸ್. ಎಚ್. ಜಾಲಿಕೊಪ್ಪ ವಕೀಲರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭಗಳಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಮಂಜುನಾಥ ನಂದೆನ್ನವರ ವಕೀಲರು ಮಾತನಾಡುತ್ತಾ “ಸೇವಾ ಮನೋಭಾವದಿಂದ ಸಮಾಜಕ್ಕೆ ಹತ್ತಿರವಾಗಬೇಕು, ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಹಾಗೂ ಅವನ್ನು ತಡೆಯುವ ಕ್ರಮಗಳು ಮತ್ತು ಕಾನೂನು ಸೇವಾ ಪ್ರಾಧಿಕಾರದಿಂದ ಸಲಹೆ ಪಡೆಯಬಹುದು.” ಎಂದು ತಿಳಿಸಿದರು. ಉದ್ಘಾಟನಾ ಪರವಾದ ನುಡಿಗಳನ್ನು ಹಿರಿಯ ನ್ಯಾಯವಾದಿಗಳಾದ ಸಂಜೀವ ಹೆಚ್. ಜಾಲಿಕೊಪ್ಪ ಮಾತನಾಡುತ್ತಾ, ” ಮನುಷ್ಯನಿಗೆ ಹುಟ್ಟಿನಿಂದ ಸಾವಿನವರೆಗೆ ಕಾನೂನಿನ ಅವಶ್ಯಕತೆ ಇದ್ದು ಅದರ ಅರಿವು ಅಗತ್ಯ” ಎಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಲ್.ಎನ್ ಗಾಣಿಗೇರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕದ ಅಧ್ಯಕ್ಷರಾದ ಹೆಚ್. ಆರ್. ಪೆಟ್ಲೂರ, ಗುರುಮಾತೆಯರಾದ ಜಿ. ಎಸ್.ಹೊಸಮನಿ,ವ್ಹಿ. ವ್ಹಿ. ಸುಬೇದಾರ್, ಡಿ. ಪಿ. ಪತ್ತಾರ, ಶಿಕ್ಷಕ ಜಿ.ಎಸ್.ಗೋರೋಬಾಳ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿನಿಯ ರಿಂದ ಪ್ರಾರ್ಥನೆ ಜರುಗಿತು ಗುರುಮಾತೆಯರಾದ ಎಚ್. ಆರ್. ನಾಗನೂರು ಸ್ವಾಗತಿಸಿದರು. ಎಚ್. ಆರ್. ಪೆಟ್ಲೂರ್ ನಿರೂಪಿಸಿದರು . ಸಂಸ್ಕೃತ ಶಿಕ್ಷಕ ಎಸ್. ಎಂ. ದೀಕ್ಷಿತ್ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!