ಹುನಗುಂದ: ನಗರದ ಸಂಗಮ ಪ್ರತಿಷ್ಠಾನದ ೨೦೨೫ ರ ಸಂಗಮ ವಾರ್ಷಿಕ ಪ್ರಶಸ್ತಿಗೆ ಹಿರಿಯ ಲೇಖಕಿ ಹಾಗೂ ತಾಳಿಕೋಟೆ ಖಾಸ್ಗತೇಶ್ವರ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಸುಜಾತಾ ಚಲವಾದಿ ಹಾಗೂ ಯುವ ಲೇಖಕ ಪ್ರಶಸ್ತಿಗೆ ಲೇಖಕ, ಕವಿ ಹಾಗೂ ಮುದಗಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಡಿ.ಚಿತ್ತರಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಸಂಚಾಲಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಹುನಗುಂದದಲ್ಲಿ ನಡೆಯುವ ಸಂಗಮ ಸಾಹಿತ್ಯ ಸಂಭ್ರಮ ೨೦೨೫ರ ಕಾರ್ಯಕ್ರಮದಲ್ಲಿ ಈರ್ವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.