ಅರಳಿಮಟ್ಟಿ ಶಾಲೆಯ ಸಂಗಮೇಶ ಬಡಿಗೇರ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Must Read

ಮೂಡಲಗಿ: ಪ್ರೌಢಶಾಲಾ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಏರ್ಪಡಿಸಿದ ಆನ್ಲೈನ್ ಕಲಾ ಉತ್ಸವ ಸ್ಪರ್ಧೆಯಲ್ಲಿ ಮೂಡಲಗಿ ತಾಲೂಕಿನ ಅರಳಿಮಟ್ಟಿ ಪ್ರೌಢಶಾಲೆಯಿಂದ ವಿದ್ಯಾರ್ಥಿ ಸ್ಥಳೀಯ ಆಟಿಕೆಗಳು ಮತ್ತು ಆಟಗಳು ಸ್ಪರ್ಧೆಯಲ್ಲಿ ಸಂಗಮೇಶ ಬಡಿಗೇರ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಎಂಟು ಸ್ಪರ್ಧೆಗಳಲ್ಲಿ 13 ವಿದ್ಯಾರ್ಥಿಗಳಲ್ಲಿ ಸಾವಿತ್ರಿ ಕಾಗವಾಡ ರಾಜ್ಯ ಮಟ್ಟದಲ್ಲಿ 3 ಸ್ಥಾನ ಪಡೆದಿರುತ್ತಾಳೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ದೃಶ್ಯ ಕಲೆ 3ಡಿ ಸ್ಪರ್ಧೆಯಲ್ಲಿ ಲಕ್ಷ್ಮಿ ಕಾಗವಾಡ ಪ್ರಥಮ ಸ್ಥಾನ, ದೃಶ್ಯ ಕಲೆ

2ಡಿ ಸ್ಪರ್ಧೆಯಲ್ಲಿ ಆರತಿ ಡಂಬಳ ದ್ವಿತೀಯ ಸ್ಥಾನ ಪಡೆದಿರುತ್ತಾರೆ, ಹಾಗೂ ಐಶ್ವರ್ಯಾ ಚನಾಳ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಸುಶ್ಮಿತಾ ಸಸಾಲಟ್ಟಿ ಸಂಗೀತ ವಾದ್ಯ ಸ್ಪರ್ಧೆಯಲ್ಲಿ ತೃತೀಯ ಮತ್ತು ಚಿದಾನಂದ ಕೋರೆ ನಾಟಕ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಸಾಧಕ ವಿದ್ಯಾರ್ಥಿಗಳಿಗೆ ಚಿತ್ರ ಕಲಾಶಿಕ್ಷಕರಾದ ಶೋಭಾ ಧಡೂತಿಯವರು ತರಬೇತಿ ನೀಡಿದ್ದು ಮತ್ತು ಕಳೆದ ಏಳು ವರ್ಷಗಳಿಂದ  ರಾಜ್ಯ ಮಟ್ಟಕ್ಕೆ ಹಾಗೂ ಎರಡು ವರ್ಷಗಳಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗುವಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ.

ಪ್ರೌಢಶಾಲೆಯ ವಿದ್ಯಾರ್ಥಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ

ಭಾಗವಹಿಸಲು ತಯಾರಿ ನಡೆಸುತ್ತಿದ್ದು ಸದರಿ ಮಕ್ಕಳಿಗೆ ನಿರಂತರ ತರಬೇತಿ ನೀಡುತ್ತಾ ಪ್ರೋತ್ಸಾಹಿಸುತ್ತಿರುವ ಶಾಲೆಯ ಚಿತ್ರಕಲಾ ಶಿಕ್ಷಕರನ್ನು ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯ ಶಿಕ್ಷಕರಾದ ಜಗದೀಶ ತಿಪ್ಪಿಮನಿ ಹಾಗೂ ಎಲ್ಲ ಶಿಕ್ಷಕ ವೃಂದ ಮತ್ತು ಎಸ್.ಡಿ.ಎಮ್.ಸಿ ಪದಾಧಿಕಾರಿಗಳು ಹರ್ಷ ವ್ಯಕ್ತಪಡಸಿ  ಅಭಿನಂದಿಸಿದ್ದಾರೆ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group