ತುಮಕೂರಿನ ಸಿದ್ದಗಂಗಾ ಮಠದಲ್ಲಿ ‘ಸನ್ಮಾರ್ಗದ ದುಂಬಿ’ ಬಿಡುಗಡೆ..

Must Read

ತುಮಕೂರಿನ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ಮುಂಭಾಗ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಗಣಿತ ಶಿಕ್ಷಕರಾದ  ಮುತ್ತು ಯ. ವಡ್ಡರ ಇವರ ಮೂರನೇ ಕೃತಿ ಸನ್ಮಾರ್ಗದ ದುಂಬಿ ಸರಳವಾಗಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಗಳ ಅಮೃತ ಹಸ್ತದಿಂದ ಶ್ರೀಮಠದ ಭಕ್ತರ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಪರಮ ಪೂಜ್ಯರು ಇನ್ನೂ ಹೆಚ್ಚಿನ ಕೃತಿಗಳು ನಿಮ್ಮಿಂದ ನಾಡಿಗೆ ಪರಿಚಯವಾಗಲಿ ಶುಭವಾಗಲಿ ಎಂದು ಆಶೀರ್ವಾದ ನೀಡಿದರು.

ವೃತ್ತಿಯಲ್ಲಿ ಶಿಕ್ಷಕರಾಗಿರುವ  ಮುತ್ತು ಯ. ವಡ್ಡರ ಅವರು ಮೊದಲ ಬಾರಿಗೆ ವಿದ್ಯಾರ್ಥಿಗಳಿಗಾಗಿ ಸರಳ ಗಣಿತ ಪುಸ್ತಕ, ಎರಡನೇ ಬಾರಿಗೆ ನಾಡಿನ ಉದ್ದಗಲಕ್ಕೂ ಇರುವ ಎಲೆಮರೆ ಕಾಯಿಯ ಹಾಗೇ ಇರುವ ಸಾಧಕರನ್ನು ಗುರುತಿಸಿ ಎಲೆಮರೆ ಕಾಯಿಗಳು ಎಂಬ ಪುಸ್ತಕ ಹೊರತಂದು ಇದೀಗ ಮೂರನೇ ಬಾರಿಗೆ ಎಲ್ಲ ರೀತಿಯಿಂದಲೂ ಸ್ಪೂರ್ತಿದಾಯಕವಾಗಿರುವ ಸನ್ಮಾರ್ಗದ ದುಂಬಿ ಎಂಬ ಪುಸ್ತಕವನ್ನು ತಾವು ಕಲಿತಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿಯೇ ಪರಮ ಪೂಜ್ಯರ ಅಮೃತ ಹಸ್ತದಿಂದ ಬಿಡುಗಡೆಗೊಳಿಸಿದರು.

ಈ ಪುಸ್ತಕವು ಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿ, ಶಿಕ್ಷಕರಿಗಾಗಿ, ನಿರೂಪಕರಿಗಾಗಿ ಹಾಗೂ ಭಾಷಣಕಾರರಗಾಗಿ ಹೇಳಿ ಮಾಡಿಸಿರುವ ಪುಸ್ತಕ ಇದಾಗಿದೆ. ವಿದ್ಯಾರ್ಥಿಗಳು ಹೇಗೆ ಓದಬೇಕು ಜೀವನದಲ್ಲಿ ಅನೇಕ ಅವಮಾನ ಅಪಮಾನಗಳನ್ನು ಎದುರಿಸಿ ಹೇಗೆ ಮುಂದೆ ಬರಬೇಕು, ಸರಕಾರಿ ಶಾಲೆಗಳ ಕುರಿತು ಆ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಒಳ್ಳೆಯ ಹುದ್ದೆ ಸೇರಿ ಆ ಶಾಲೆಯ ಕೀರ್ತಿ ಹೇಗೆ ತರಬೇಕು, ಅದೇ ರೀತಿ ತಂದೆ ತಾಯಿಗಳ ಬಗ್ಗೆ ಗುರುಗಳ ಬಗ್ಗೆ ಮತ್ತು ಮಕ್ಕಳಲ್ಲಿ ಸಾಧಿಸುವ ಛಲ ಹುಟ್ಟಿಸುವಂತಹ ಪ್ರೇರಣಾರ್ಥಕ ಕವನಗಳು ಹೀಗೆ ಹಲವಾರು ರೀತಿಯ ವಿಷಯಗಳನ್ನು ಈ ಕವನ ಸಂಕಲನ ಒಳಗೊಂಡಿದೆ.

ಈ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಶಿಕ್ಷಕ ಮುತ್ತು ಯ. ವಡ್ಡರ ಅವರು ಪರಮಪೂಜ್ಯರನ್ನು ಭಕ್ತಿಭಾವದಿಂದ ಗೌರವಿಸಿ ಸನ್ಮಾನಿಸಿ ಪರಮ ಪೂಜ್ಯರ ಕುರಿತು ಬರೆದಿರುವಂತಹ ಕವನಗಳನ್ನ ಪೂಜ್ಯರಿಗೆ ಅರ್ಪಿಸಿದರು. ತಮಗೆ ಅಕ್ಷರ ಜ್ಞಾನವನ್ನು ನೀಡಿದ ಪರಮಪೂಜ್ಯರಾದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಹಾಗೂ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಕುರಿತು ಸ್ವರಚಿತವಾದ ಕವನ ಬರೆದು ಆ ಫೋಟೋ ಫ್ರೇಮ್ ಗಳನ್ನು ಪರಮಪೂಜ್ಯ ಗುರುಗಳಿಗೆ ಗುರುಕಾಣಿಕೆಯಾಗಿ ಶ್ರೀಗಳ ಅಮೃತ ಹಸ್ತಕ್ಕೆ ನೀಡಿದರು.

ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಮಠದ ಆಡಳಿತ ಮಂಡಳಿ, ಸ್ವಾಮೀಜಿಗಳು, ಅಧಿಕಾರಿಗಳು ಹಾಗೂ ಮಠದ ಸರ್ವ ಸಿಬ್ಬಂದಿಯವರು,ಕವಿ ಮನಸುಗಳು, ಆತ್ಮೀಯರಾದ ನಾಗರಾಜ್ ಶೆಟ್ಟಿ ದಂಪತಿಗಳು ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಿದರು. ತಾವು ಕಲಿತಿರುವ ಪುಣ್ಯ ಸ್ಥಳದಲ್ಲಿಯೇ ಪುಸ್ತಕವನ್ನು ಪರಮ ಪೂಜ್ಯರಿಂದ ಲೋಕಾರ್ಪಣೆಗೊಳಿಸಿ ಮುತ್ತು ಯ. ವಡ್ಡರ ಹಾಗೂ ಅವರ ಆತ್ಮೀಯ ಸ್ನೇಹಜೀವಿಗಳು ಹರ್ಷ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group