ಮೂಡಲಗಿ:-ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ “೧೬ ನೆಯ ಸತ್ಸಂಗ” ಪರಮ ಪೂಜ್ಯರುಗಳ ಸಾನ್ನಿಧ್ಯದಲ್ಲಿ ಸಂಜೆ,೬ ಗಂಟೆಗೆ, ಡಿಸೆಂಬರ್, ೦೫ ರಿಂದ ೦೯ ರವರೆಗೂ ೦೫ ದಿನ ಪ್ರವಚನ ಕಾರ್ಯಕ್ರಮ ಜರುವುದು ಎಂದು ವೇದಮೂರ್ತಿ ಶಂಕ್ರಯ್ಯ ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪೂಜ್ಯರ ನೇತೃತ್ವದಲ್ಲಿ ಚಿದಂಬರಾಶ್ರಮ ಸಿದ್ಧಾರೂಢ ಮಠ ಬೀದರ, ಪೀಠಾಧಿಪತಿಗಳಾದ ಶ್ರೀ ಡಾllಶಿವಕುಮಾರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಮತ್ತು ಸಾಧು ಸಂಸ್ಥಾನ ಮಠ ಇಂಚಲ ಪೀಠಾಧಿಪತಿಗಳಾದ ಶ್ರೀ ಡಾllಶಿವಾನಂದ ಭಾರತಿ ಮಹಾಸ್ವಾಮಿಗಳು ಉದ್ಘಾಟಿಸುವವರು.
ಸಿದ್ದಾರೂಢ ಮಠ,ಮಹಾಲಿಂಗಪೂರ ಶ್ರೀ ಸಹಜಾನಂದ ಸ್ವಾಮೀಜಿ,ಎಮ್ ಎ ಪೂರ್ಣ ಪ್ರಜ್ಞಾ ಯೋಗಾಶ್ರಮ ಕಲಬುರಗಿ ಮಾತೋಶ್ರೀ ಲಕ್ಷ್ಮೀ ತಾಯಿ,ಚಿದಾಂಬರಾಶ್ರಮ ಬೀದರ ಶ್ರೀ ಶಿವಪ್ರಕಾಶನಂದ ಗಿರಿ ಸ್ವಾಮೀಜಿ, ಅಡವಿಸಿದ್ದೇಶ್ವರ ಮಠ,ಶಿವಾಪೂರ (ಹ) ಶ್ರೀ ಅಡವಿಸಿದ್ದರಾಮ ಸ್ವಾಮೀಜಿ, ಮೈಲಾರಲಿಂಗೇಶ್ವರ ದೇವಸ್ಥಾನ,ಇಟನಾಳದ ಶ್ರೀ ಸಿದ್ದಶ್ವರ ಸ್ವಾಮೀಜಿ ಈ ಪೂಜ್ಯರು ಸಹ ಪಾಲ್ಗೊಳ್ಳುವರು.
ಸಕಲ ಭಕ್ತರು ಭಾಗವಹಿಸಿ ಶ್ರೀಗಳ “ಅಮೃತ ವಾಣಿ” ಕೇಳಿ ಪುನೀತರಾಗೋಣ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಧನ ಸಹಾಯ ಮತ್ತು ಐದು ದಿನಗಳವರೆಗೂ ಪ್ರಸಾದ ವ್ಯವಸ್ಥೆ ಕೂಡಾ ಇರುವುದು ಎಂದು ಧಾರ್ಮಿಕ ಕಮಿಟಿಯವರು ತಿಳಿಸಿದ್ದಾರೆ.
ಸತ್ಸಂಗದ ಮುಖಂಡರುಗಳಾದ ಬಸಗೌಡ ಪಾಟೀಲ, ನೇಮಿನಾಥ ಬೇವಿನಕಟ್ಟಿ, ಬಿ.ವಾಯ್ ಶಿವಾಪೂರ,ಅಜ್ಜಪ್ಪ ಬಳಿಗಾರ, ಅಜಿತ ಜರಾಳೆ ಹಾಗೂ ಇನ್ನು ಅನೇಕರು ಭಾಗಿಯಾಗಿದ್ದರು.

