spot_img
spot_img

ಯೋಜನೆಗಳ ಪ್ರತಿ ಮನೆಮನೆಗೆ ಮುಟ್ಟಿಸಬೇಕು: ಶರಣಪ್ಪ ಬೆಟಗೇರಿ

Must Read

spot_img
- Advertisement -

ಗ್ಯಾರಂಟಿ ಯೋಜನೆಗಳ ಗಜೇಂದ್ರಗಡ ತಾಲೂಕ ಮಟ್ಟದ ಪ್ರಗತಿ ಪರಿಶೀಲನಾ ಸಭೆ

ಗಜೇಂದ್ರಗಡ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ 5 ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಬೇಕು. ಗ್ಯಾರಂಟಿ ಯೋಜನೆಗಳಲ್ಲಿ ಜಿಲ್ಲೆಯಲ್ಲಿಯೇ ಗಜೇಂದ್ರಗಡ ಮುಂಚೋಣಿಯಲ್ಲಿ ಇರಬೇಕು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶರಣಪ್ಪ ಬೆಟಗೇರಿ ಹೇಳಿದರು.

ಪಟ್ಟಣದ ತಾಲೂಕ ಪಂಚಾಯತ ಚಿಂತನ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಕಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಕಳೆದ ಸಭೆಗೂ ಈ ಸಭೆಗೆ ಸ್ವಲ್ಪ ಸ್ವಲ್ಪ ಪ್ರಗತಿಯಾಗಿದೆ. ಅದು ಪರಿಪೂರ್ಣವಾಗಿ ಸಾರ್ವಜನಿಕರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರಕೈಗೊಳ್ಳಬೇಕು ಎಂದು ಎಂದರು.

- Advertisement -

ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳು ಉತ್ತಮ ಪ್ರಗತಿ ಸಾಧಿಸಿದಾಗ್ಗ್ಯೂ ಕೂಡ ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳ ಕುರಿತಂತೆ ಬಹಳಷ್ಟು ಜನರಿಗೆ ಹಣ ಜಮಾ ಆಗಿರದ ಬಗ್ಗೆ ಬಹಳಷ್ಟು ದೂರುಗಳು ಬಂದಿವೆ. ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ ಯೋಜನೆಗಳು ಅವಿನಾಭಾವ ಸಂಬಂಧವಿದೆ. ಈ ಯೋಜನೆಗಳ ಅಧಿಕಾರಿಗಳು ಇಬ್ಬರು ಹೊಂದಾಣಿಕೆ ಮಾಡಿಕೊಂಡು ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸಬೇಕು. ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಹಸ್ತಕ್ಷೇಪವಿಲ್ಲದೆ. ಎಲ್ಲಾ ಸದಸ್ಯರು ನಿಮ್ಮಗಳ ಜೊತೆಗೆ ನಾವು ಕೈಜೋಡಿಸುತ್ತೇವೆ. ಎಲ್ಲರೂ ಸೇರಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡೋಣ ಎಂದು ಕರೆನೀಡಿದರು.

ಇಲಾಖೆವಾರು ಮಾಹಿತಿ ಪ್ರಗತಿ:
ಗೃಹ ಜ್ಯೋತಿ ಯೋಜನೆ: ಕೆಲವು ಮನೆಗಳಿಗೆ ಪೂರ್ತಿ ಬಿಲ್ ಬರುತ್ತಿದೆ. ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ದೇವಸ್ಥಾನಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು. ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿಲ್ಲ. ಇನ್ನೂ ಜನಸಾಮಾನ್ಯರಿಗೆ ಹೇಗೆ ಗೃಹ ಜ್ಯೋತಿ ಯೋಜನೆ ಸೌಲಭ್ಯ ಕೊಡ್ತಿರೀ? ಹೆಸ್ಕಾಂ ಇಲಾಖೆ ಮುಖ್ಯಸ್ಥರೆ ಸಭೆಗೆ ಹಾಜರಾಗಬೇಕೆಂದು ಎಂದು ಸರ್ವ ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧಿಕಾರಿ ಮಾತನಾಡಿ, ಹೊಸದಾಗಿ ಮನೆ ಕಟ್ಟಿಸಿಕೊಂಡವರಿಗೆ ಬಿಲ್ ಬರುತ್ತಿದೆ. ಕನಿಷ್ಠ ಒಂದು ವರ್ಷ ಪೂರೈಸಿದವರಿಗೆ ಅವರ ವಿದ್ಯುತ್ ಬಳಕೆ ಪ್ರಮಾಣ ನೋಡಿ ಹೇಳಬಹುದು. ದೇವಸ್ಥಾನ ಸೌಲಭ್ಯಗಳ ವಿತರಿಸುವ ಬಗ್ಗೆ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದ ಅವರು ಗೃಹ ಜ್ಯೋತಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.

- Advertisement -

ಶಕ್ತಿ ಯೋಜನೆ: ತಾಲೂಕಿನಲ್ಲಿ ಸಾರಿಗೆ ಇಲಾಖೆಯ ಬಸ್ನಲ್ಲಿ ಜೂನ್ -2023 ರಿಂದ ಸೆಪ್ಟಂಬರ್-2024 ರವರೆಗೆ ಮಹಿಳೆಯರು 7126959 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಪುರುಷರು 5111978 ಜನರು ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ಸಾರಿಗೆ ಇಲಾಖೆಯ ವ್ಯವಸ್ಥಾಪಕರು ತಿಳಿಸಿದರು.

ಕಳೆದ ಸಭೆಯಲ್ಲಿ ಹೆಚ್ಚುವರಿ ಬಸ್, ಹಳ್ಳಿಗಳಿಗೆ ಬಸ್ ಸೌಲಭ್ಯಗಳ ಬಗ್ಗೆ ಚರ್ಚಿಸಿದ ವಿಷಯಗಳ ಕುರಿತು ಅಧ್ಯಕ್ಷರು, ಸದಸ್ಯರು ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಹೆಚ್ಚುವರಿ ಬಸ್ ಗಳ ಬಗ್ಗೆ ಶಾಸಕರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಮನವಿ ಪ್ರತಿಯನ್ನು ನಮಗೆ ಕಳಿಸಿ, ನಾವು ಅದೇ ಮನವಿಯನ್ನು ಶಾಸಕರಿಗೆ ಕೊಟ್ಟು ಹೆಚ್ಚುವರಿ ಬಸ್ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇವೆ ಎಂದರು.

ರುದ್ರಾಪೂರ ಮೇಲೆ ಹೋಗುವ ಬಾದಾಮಿ ಗಜೇಂದ್ರಗಡ ಬಸ್ ನ್ನು ಕಲ್ಲಿಗನೂರು ನಾಗೇಂದ್ರಗಡ, ಲಕ್ಕಲಕಟ್ಟಿ ಮಾರ್ಗವಾಗಿ ಬಿಡಲು ತಿಳಿಸಿದಾಗ್ಯೂ ಬಸ್ ಬಿಡುತ್ತಿಲ್ಲ ಯಾಕೆ? ಎಂದು ಸದಸ್ಯ ನಿಂಗಪ್ಪ ಹಂಡಿ ಆರೋಪಿಸಿದರು. ಇದರ ಬಗ್ಗೆ ಗಮನ ಹರಿಸಿ ಬಸ್ ಬಿಡುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿತ್ತು. ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸ್ವಚ್ಛತೆ ಕಾಪಾಡಿಕೊಳ್ಳಲು ಸದಸ್ಯರು ಒತ್ತಾಯಿಸಿದರು.

ಅನ್ನಭಾಗ್ಯ ಯೋಜನೆ: ತಾಲೂಕಿನಲ್ಲಿ ನ್ಯಾಯಬೆಲೆ ಅಂಗಡಿಯ ಮಾಲೀಕರು ಸರಿಯಾಗಿ ಅಕ್ಕಿ ವಿತರಣೆ ಮಾಡುತ್ತಿಲ್ಲ. ಜನರಿಗೆ ಸರಿಯಾಗಿ ಸ್ಪಂಧನೆ ಮಾಡುತ್ತಿಲ್ಲ. ನಾಗೇಂದ್ರಗಡ ಗ್ರಾಮದಲ್ಲಿಯೇ 15 ರಿಂದ 20 ಜನರಿಗೆ ಪ್ರತಿ ತಿಂಗಳ ಅಕ್ಕಿ ಸಿಗುತ್ತಿಲ್ಲ. ಅವರನ್ನು ಶೀಘ್ರವೇ ಸಭೆ ಕರೆಯಬೇಕು ಎಂದು ಸದಸ್ಯರಾದ ನಿಂಗಪ್ಪ ಹಂಡಿ, ಪ್ರೇಮಾ ಇಟಗಿ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಇಒ ಬಸವರಾಜ ಬಡಿಗೇರ್ ತಾಲೂಕ ಪಂಚಾಯತಿಯಲ್ಲಿಯೇ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಗ್ಯಾರಂಟಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಸಭೆ ಕರೆಯೋಣ ಎಂದು ತಿಳಿಸಿದರು.
ತಾಲೂಕಿನಲ್ಲಿ ಹೊಸ ರೇಷನ್ ಕಾರ್ಡ್ ವಿತರಿಸಲು ಅಧಿಕಾರಿಗಳು ದುಡ್ಡು ಕೇಳುತ್ತಿರುವ ಬಗ್ಗೆ ಸದಸ್ಯರಾದ ಮಲ್ಲಿಕಾರ್ಜುನ್ ಗಾರಗಿ ಆರೋಪಿಸಿ, ಇದಕ್ಕೆ ಸಂಬಂಧಿಸಿದ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡುವಂತೆ ಮತ್ತು ಇನ್ನು ಮುಂದೆ ಪ್ರಾಮಾಣಿಕವಾಗಿ ಸಾರ್ವಜನಿಕರ ಸೇವೆ ಮಾಡುವಂತೆ ತಿಳಿಸಿದರು.
ಗೃಹಲಕ್ಷ್ಮೀ ಯೋಜನೆ:
ಕಳೆದ ಸಭೆಯಲ್ಲಿ ಚರ್ಚಿಸಿದಂತೆ ತಾಲೂಕಿನಲ್ಲಿ ಸಮೀಕ್ಷೆ ಕೈಗೊಂಡು ಒಟ್ಟು 303 ಗುರುತಿಸಲಾಯಿತು. ಅದರಲ್ಲಿ 145 ಫಲಾನುಭವಿಗಳಿಗೆ ಹಣ ಜಮಾ ಆಗಿದೆ. 105 ಹಣ ಜಮಾ ಆಗಿರುವುದಿಲ್ಲ. ಇವುಗಳನ್ನು ಕೂಡಾ ಸಮಸ್ಯೆ ಬಗೆಹರಿಸಿ ಜುಲೈ ತಿಂಗಳ ಡಿಬಿಟಿ ಪುಶ್ ಮಾಡಲಾಗಿದೆ. ಇನ್ನೂ 53 ಅರ್ಜಿ ಹಾಕಿದ್ದಾರೆ ಪರಿಶೀಲನೆ ಮಾಡಿ ಸರಿಪಡಿಸಲಾಗುತ್ತಿದೆ ಎಂದು ಸಭೆ ತಿಳಿಸಿದರು.
ಗೃಹ ಲಕ್ಷ್ಮೀ ಹಣ ಬೇರೆ ಬೇರೆ ಬ್ಯಾಂಕ್ ಗಳಿಗೆ ಜಮಾ ಆಗಿರುತ್ತದೆ. ಅದನ್ನು ಪರಿಶೀಲನೆ ಮಾಡಿಕೊಳ್ಳಬೇಕು ಎಂದರು. ಯಾರಿಗೆ ಹಣ ಜಮಾ ಆಗುತ್ತಿಲ್ಲ ಎಂಬ ದೂರುಗಳು ಬಂದರೆ ನನಗೆ ಅವರ ರೇಷನ್ ಕಾರ್ಡ್ ಹಾಕಿ ನಾನು ಚಕ್ ಮಾಡಿ ತಿಳಿಸುತ್ತೇನೆ ಎಂದು ಸದಸ್ಯರಿಗೆ ತಿಳಿಸಿದರು.
ಯುವನಿಧಿ ಯೋಜನೆ: ತಾಲೂಕಿನಲ್ಲಿ 359 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 215 ವಿದ್ಯಾರ್ಥಿಗಳು ಯೋಜನೆ ಫಲಾನುಭವಿಗಳಾಗಿದ್ದಾರೆ. 144 ಅನರ್ಹರಾಗಿರುತ್ತಾರೆ ಎಂದು ಮಾಹಿತಿ ನೀಡಿದರು. ಸದಸ್ಯರಾದ ಇಮಾಮ್ ಸಾಬ ಭಾಗವಾನ ಮಾತನಾಡಿ ತಾಲೂಕಿನಲ್ಲಿ ಎಷ್ಟು ಫಲಾನುಭವಿಗಳಿದ್ದಾರೆ. ಎಲ್ಲರಿಗೂ ಯೋಜನೆಯ ಸೌಲಭ್ಯಗಳು ದೊರಬೇಕು ಎಂದರು.
ಸದಸ್ಯರಾದ ಶರಣಪ್ಪ ಪೂಜಾರ, ಮಲ್ಲಿಕಾರ್ಜುನ್ ಗಾರಗಿ ಮಾತನಾಡಿ, ಸರಕಾರ ಜಾರಿಗೆ ತಂದಿರುವ ಮಹತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳನ್ನು ಲಾಭ ಪಡೆದು ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಶಕ್ತಿ ಯೋಜನೆಯಿಂದ ಧಾರ್ಮಿಕ ದತ್ತಿ ನಿಧಿಗೆ ಹೆಚ್ಚು ಅನುದಾನ ಬರುತ್ತಿದೆ. ಯೋಜನೆಗಳಳಿಂದ ಬಡತನ ರೇಖೆ ಕಡಿಮೆಯಾಗಿದೆ. ದುಡಿಯುವವರ ಪ್ರಮಾಣ ಕಡಿಮೆಯಾಗಿದೆ. ಇದರ ಹೆಚ್ಚಿನ ಚಿಂತನೆ ಮಾಡಿ ಯೋಜನೆಗಳ ಬಗ್ಗೆ ಪ್ರತಿ ಗ್ರಾಮಗಳಲ್ಲಿ ಧ್ವನಿವರ್ಧಕ, ಆಡಿಯೋ, ಬೀದಿನಾಟಕ ಮೂಲಕ ಜಾಗೃತಿ ಮೂಡಿಸಬೇಕು. 5 ಯೋಜನೆಗಳ ಲಾಭ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸದಸ್ಯರಾದ ಇಮಾಮಸಾಬ ಭಗವಾನ, ಮಲ್ಲಿಕಾರ್ಜುನ ಗಾರಗಿ, ಶರಣಪ್ಪ ಪೂಜಾರ, ಶರಣಯ್ಯ ಕಾರಡಗಿಮಠ, ಭೀಮಪ್ಪ ಮೇಟಿ, ಅಲ್ಲಾಸಾಬ ಮುಜಾವರ, ಪ್ರೇಮಾ ಇಟಗಿ, ಯಮನೂರಪ್ಪ ತಳವಾರ, ಬಸವರಾಜ ಬಿದರೂರ, ಸದಾಶಿವ ಆಚಲಕರ, ಯಲ್ಲಪ್ಪ ಕುದರಿ, ನಿಂಗಪ್ಪ ಹಂಡಿ, ಗ್ಯಾರಂಟಿ ಯೋಜನೆಯ ಐದು ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಅಧ್ಯಕ್ಷರ ಕಚೇರಿ ಉದ್ಘಾಟನೆ:
ತಾಲೂಕ ಪಂಚಾಯತಿಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷರ ನೂತನ ಕಚೇರಿಯನ್ನು ಇಂದು ಅಧ್ಯಕ್ಷರಾದ ಶರಣಪ್ಪ ಬೆಟಗೇರಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ಗ್ಯಾರಂಟಿ ಸಮಿತಿ ಅಧ್ಯಕ್ಷರಿಗೆ ಪ್ರಥಮ ಕಚೇರಿ ಉದ್ಯಾಟಿಸುತ್ತಿರುವ ತುಂಬಾ ಸಂತಸ ತಂದಿದೆ. ತಾಲೂಕ ಪಂಚಾಯತಿಯಲ್ಲಿ ಕುಳಿತುಕೊಳ್ಳಲು ಸೂಕ್ತ ಸ್ಥಳವಿರಲಿಲ್ಲ. ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಾಳಜಿ ವಹಿಸಿ ಅಧ್ಯಕ್ಷರಿಗೆ ಚೇಂಬರ್ ಒದಗಿಸಿರುವುದು ಖುಷಿ ತಂದಿದೆ ಎಂದರು. 

- Advertisement -
- Advertisement -

Latest News

ಗಮಕ ಹಬ್ಬ ಕವಿ ನಮನ ಉದ್ಘಾಟನೆ ಅಂಗುಲೀಯಕ ಪ್ರದಾನ ನೃತ್ಯ ರೂಪಕ

ಹಾಸನ - ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಹಾಸನ ವತಿಯಿಂದ ಸಂಸ್ಕಾರ ಭಾರತಿ ಕರ್ನಾಟಕ, ಹಾಸನ ಜಿಲ್ಲಾ ಘಟಕ, ಶ್ರೀ ಸೀತಾ...
- Advertisement -

More Articles Like This

- Advertisement -
close
error: Content is protected !!
Join WhatsApp Group