- Advertisement -
ಸಿಂದಗಿ: ಪಟ್ಟಣದ ಸೋಂಪೂರ ರಸ್ತೆಯಲ್ಲಿರುವ ಗುರುಕೃಪಾ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯ ಗುರುಮಾತೆ ಶ್ರೀಮತಿ ಹೇಮಾ ಪೊದ್ದಾರ ಅವರು ಶ್ರೀ ಸರಸ್ವತಿ ಪೂಜೆ ಸಲ್ಲಿಸುವುದರೊಂದಿಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಶಾಲೆ ಪ್ರಾರಂಭಿಸಲಾಯಿತು.
ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಆಹ್ವಾನಿಸಿ, ಶಿಕ್ಷಕ ವೃಂದವೇ ಗೋಡೆಗಳ ಮೇಲೆ ಬಿಡಿಸಿದ ರಂಗು-ರಂಗಿನ ಪ್ರಾಣಿ-ಪಕ್ಷಿಗಳ, ವಾಹನ, ಗಿಡ-ಮರ ಮತ್ತು ಹಣ್ಣುಗಳ ಚಿತ್ರ ಬಿಡಿಸಿದ್ದು ಮಕ್ಕಳಲ್ಲಿ ಒಳ್ಳೆಯ ಉತ್ಸಾಹ ತರುವಂತಹದಾಗಿತ್ತು. ಇಂದು ಶಾಲೆ ಪ್ರಾರಂಭವಾದ ದಿನ ಎಂದು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಗುರುಕೃಪಾ ಶಾಲೆ ಪ್ರವೇಶಿಸಿದರು.
ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಹಣಮಂತ ಪೋತದಾರ ಮಕ್ಕಳಿಗೆ ಸಿಹಿ ಹಂಚಿ ಸ್ವಾಗತಿಸಿದರು. ಶಿಕ್ಷಕರುಗಳಾದ ಹರೀಷ, ಪ್ರಸನ್ನ, ಶ್ರೀಮತಿ ಸೌಮ್ಯ ಪೊದ್ದಾರ, ಶ್ರೀಮತಿ ಶೃತಿ ಕುಲಕರ್ಣಿ ವಿಶಾಲ ಇನ್ನಿತರ ಶಿಕ್ಷಕ ವರ್ಗ ಉಪಸ್ಥಿತರಿದ್ದರು.