Homeಸುದ್ದಿಗಳುಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರಕ್ಕೆ ಆಯ್ಕೆ

ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರಕ್ಕೆ ಆಯ್ಕೆ

spot_img

ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸ್ಕೌಟ್ ಮತ್ತು ಗೈಡ್ಸ್ , ರೇಂಜರ್ ಘಟಕದ ಕು.ಆಫ್ರಿನ್ ಮುಲ್ಲಾ,  ಕರುಣಾ ನಾಡಗೌಡ , ಸುಸ್ಮಿತಾ ಗುರುವ, ಅಲಿಯಾ ಜಮಾದಾರ ಈ ನಾಲ್ಕು ರೇಂಜರ್ಸ್ ” ರಾಜ್ಯ ಪುರಸ್ಕಾರ “ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮೂಡಲಗಿ ಶ್ರೀಪಾದಬೋಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ: 04-11-2023 ರಿಂದ 06-11-2023 ವರೆಗೆ  ನಾಲ್ಕು ದಿನಗಳವರೆಗೆ ರಾಜ್ಯ ಪುರಸ್ಕಾರ ಪ್ರಶಸ್ತಿ ಪರೀಕ್ಷೆಯನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ  ಸಂಸ್ಥೆ  ಬೆಳಗಾವಿ ಇವರು ಆಯೋಜಿಸಿದ್ದರು.      ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿಯರಾದ ಡಾ.ಬಿ.ಎಸ್.ಗಂಗನಳ್ಳಿ, ಸಂಚಾಲಕರು ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೇಂಜರ್ ಲೀಡರ್ ಇವರು ಮಾರ್ಗದರ್ಶನ ಮಾಡಿರುತ್ತಾರೆ.

ಜಿಲ್ಲಾ ಸಂಸ್ಥೆ ಬೆಳಗಾವಿಯ   ವಿಠ್ಠಲ ಎಸ್ ಬಿ,  ಡಿ. ಬಿ. ಅತ್ತಾರ   ಸಹಾಯಕ ರಾಜ್ಯ ಸಂಘಟನಾ ಆಯುಕ್ತರು ಇವರೂ ಕೂಡ ರೇಂಜರ್ಸ್ ಗೆ  ತರಬೇತಿಯನ್ನು ನೀಡಿರುತ್ತಾರೆ.

ಹಾಗೂ ವಿದ್ಯಾರ್ಥಿನಿಯರ  ಈ ಸಾಧನೆಗೆ  ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಎಸ್ ಮಾಂಗಳೇಕರ , ವ್ಯವಸ್ಥಾಪಕರಾದ  ಪ್ರಮೋದ ಸಿಂಧೆ ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group