ಬಸವ ಸಮಿತಿಯಿಂದ ಶರಣ ಸಂದೇಶ ಜಗತ್ತಿಗೆ ಮುಟ್ಟಿದೆ – ಯಾಪಲಪರವಿ

Must Read

ಜನಸಾಮಾನ್ಯರಿಂದ ಸ್ಥಾಪಿತವಾದ ಧರ್ಮ ಲಿಂಗಾಯತ

ಕಲಬುರ್ಗಿ – ಕಲಬುರ್ಗಿ ಬಸವ ಸಮಿತಿ ಅನುಭವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ಲಿಂ. ತೇಜಮ್ಮ ಮತ್ತು ಅಕ್ಕಮಹಾದೇವಿ ಮಯಾಣಿ ಸ್ಮರಣಾರ್ಥ ಜರುಗಿದ ಅರಿವಿನ ಮನೆ 886ನೆಯ ದತ್ತಿ ಕಾರ್ಯಕ್ರಮದಲ್ಲಿ ಅನುಭವ ನೀಡಿದ ವಚನ ಟಿ.ವಿ.ಯ ಪ್ರಧಾನ ಸಂಪಾದಕರಾದ ಸಿದ್ದು ಯಾಪಲಪರವಿ ಅವರು ಮಾತನಾಡಿ ಬಸವ ಸಮಿತಿಯು ಕಳೆದ ಆರು ದಶಕಗಳಲ್ಲಿ ಬಸವಾದಿ ಶರಣರ ಸಂದೇಶಗಳನ್ನು ಜಾಗತಿಕ ಮಟ್ಟದಲ್ಲಿ ಮುಟ್ಟಿಸಿದೆ , ವಚನಗಳನ್ನು ಜಗತ್ತಿನ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಅನುವಾದ ಮಾಡಿ ಪ್ರಕಟಿಸಿದೆ ಎಂದರು .

ವೈದಿಕತೆ ಮತ್ತು ಅವೈದಿಕತೆಯ ಸಂಘರ್ಷಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡೆ ಬಂದಿವೆ .ಬುದ್ಧನ ನಂತರದಲ್ಲಿ ವೈದಿಕತೆಯನ್ನು ಪ್ರತಿಭಟಿಸಿ ಹೊಸ ಧರ್ಮ ಸ್ಥಾಪಿಸಿದ್ದೆ ಬಸವಾದಿ ಶರಣರು .ಬೌದ್ಧ ಮತ್ತು ಜೈನ ಧರ್ಮವನ್ನು ಅನುಲಕ್ಷಿಸಿದ ಬಸವಣ್ಣ ತನ್ನ ಅಕ್ಕನಿಗಾದ ಮುಂಜಿವೆ ಅನ್ಯಾಯವನ್ನು ಅರಿತು ಹೊಸದಾಗಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು . ಬಸವಣ್ಣನವರು 770 ಅಮರ ಗಣಗಳನ್ನು ಸಂಘಟಿಸಿ ಅನುಭವ ಮಂಟಪ ಕಟ್ಟಿದರು . ಇಷ್ಟಲಿಂಗ ಕಂಡುಹಿಡಿದರು . ಕಾಯಕ ದಾಸೋಹ ಸಿದ್ದಾಂತ ರೂಪಿಸಿದರು . ಅಂತರ್ಜಾತಿ ವಿವಾಹದಿಂದ ಶರಣ ಕ್ರಾಂತಿ ವಿಪ್ಲವಗೊಂಡಿತು. ವಚನಗಳನ್ನು ಶರಣರು ಸಂರಕ್ಷಿಸಿದರು . ಇಪ್ಪತೈದುಸಾವಿರ ವಚನಗಳ ಲಭ್ಯತೆಯಿಂದಲೇ ಶರಣರ ಸಂದೇಶಗಳು ಜಗತ್ತಿಗೆ ಮಹತ್ವದ ವಿಚಾರಗಳನ್ನು ಒದಗಿಸಿವೆ .ಒಂದು ವೇಳೆ ಲಕ್ಷಗಟ್ಟಲೆ ವಚನಗಳು ಲಭ್ಯವಿದ್ದರೆ ಜಗತ್ತು ವಿನೂತನ ಕ್ರಾಂತಿಯಿಂದ ಬೆಳಗುತ್ತಿತ್ತು .ಲಿಂಗಾಯತ ಧರ್ಮ ಜನಸಾಮಾನ್ಯರಿಂದ ಕಟ್ಟಲ್ಪಟ್ಟ ಮತ್ತು ಮಹಿಳೆಯರಿಗೆ ಪುರುಷನ ಸಮಾನ ಸ್ಥಾನಮಾನ ನೀಡಿದ ಏಕೈಕ ಜಗತ್ತಿನ ಮೊಟ್ಟ ಮೊದಲ ಧರ್ಮವಾಗಿದೆ . ಕಳಬೇಡ ಕೊಲಬೇಡ ವಚನವು ವ್ಯಕ್ತಿತ್ವದ ಏಳು ಅರ್ಹತೆಗಳನ್ನು ಹೇಳುವ ವಚನವಾಗಿದೆ ಎಂದು ನುಡಿದರು .

ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ , ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ ,ಡಾ.ವೀರಣ್ಣ ದಂಡೆ, ಉದ್ಯಮಿ ರಾಜೇಂದ್ರ ಕೂಬಾ,ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ , ಡಾ.ಕೆ. ಎಸ್. ವಾಲಿ , ಶರಣಗೌಡ ಪಾಟೀಲ್ ಪಾಳ ,ಬಂಡಪ್ಪ ಕೇಸುರ್,ಡಾ.ಟಿ. ಗುರುಬಸಪ್ಪ ,ಡಾ.ಓಂಕಾರ ರಾಜೋಳೆ ,ದತ್ತಿ ದಾಸೋಹಿಗಳಾದ ಬಸವರಾಜ ಮಾಯಾಣಿ , ಉದ್ದಂಡಯ್ಯ ಭಾಗವಹಿಸಿದರು.

LEAVE A REPLY

Please enter your comment!
Please enter your name here

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group