ರಾಷ್ಟ್ರೀಯ ಕನಕಶ್ರೀ ಸಾಹಿತ್ಯ ಪ್ರಶಸ್ತಿಗೆ ವ್ಯಂಗ್ಯ ಚಿತ್ರಕಾರ ಶರಣು ಚಟ್ಟಿ ಆಯ್ಕೆ

0
418
ಶರಣು ಚಟ್ಟಿ

ಸಿಂದಗಿ: ಬೆಳಗಾವಿ ಜಿಲ್ಲೆಯ ಬ್ಯಾಕೂಡದ ಪ್ರತಿಷ್ಠಿತ ಕನಕಶ್ರೀ ಪ್ರಕಾಶನದಿಂದ 2021 ನೇ ಸಾಲಿನ ರಾಷ್ಟ್ರೀಯ ಕನಕಶ್ರೀ ಸಾಹಿತ್ಯ ಪ್ರಶಸ್ತಿಗೆ ಗೋಲಗೇರಿಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಸಾಹಿತಿ, ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಆಯ್ಕೆಯಾಗಿದ್ದಾರೆ.

ಇವರ ‘ತುಂಟ ಮಕ್ಕಳು’ ಎಂಬ ಮಕ್ಕಳ ಕವನ ಸಂಕಲನಕ್ಕೆ ಪ್ರಶಸ್ತಿ ಲಭಿಸಿದ್ದು, ನವೆಂಬರ್ 30 ರಂದು ಧಾರವಾಡದ ರಂಗಾಯಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕನಕಶ್ರೀ ಪ್ರಕಾಶನದ ಅಧ್ಯಕ್ಷ ಸಿದ್ರಾಮ ನಿಲಜಗಿ ತಿಳಿಸಿದ್ದಾರೆ.

ಶಿಕ್ಷಕರ ಸಾಧನೆಗೆ ಸಿಂದಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಾಲೆಯ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಗೋಲಗೇರಿಯ ಜ್ಞಾನಜ್ಯೋತಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸದಸ್ಯರು, ಸಾಹಿತಿಗಳು, ವ್ಯಂಗ್ಯಚಿತ್ರಕಾರರು, ಬಂಧು ಮಿತ್ರರು ಹಾಗೂ ಗೋಲಗೇರಿ ಗ್ರಾಮಸ್ಥರು ಅಭಿನಂದಿಸಿದ್ದಾರೆ.