- Advertisement -
ಮೂಡಲಗಿ: ಕರ್ನಾಟಕ ಮಲ್ಲಕಂಬ ಅಸೋಸಿಯೇಷನ್ ಲಕ್ಷ್ಮೇಶ್ವರ ಹಾಗೂ ಚಂದ್ರಯ್ಯ ಎಮ್. ಪಂಚಕಟ್ಟಿನ ಪದವಿ ಪೂರ್ವ ಮಹಾವಿದ್ಯಾಲಯ ಲೋಕಾಪೂರ ಇವುಗಳ ಆಶ್ರಯದಲ್ಲಿ ದಿನಾಂಕ-01 ರಂದು ನಡೆದ “ರಾಜ್ಯಮಟ್ಟದ ಮಲ್ಲಕಂಬ” 18 ವರ್ಷದೊಳಗಿನ ಬಾಲಕರ ಮಲ್ಲಕಂಬ ಸ್ಪರ್ಧೆಯಲ್ಲಿ ಮೂಡಲಗಿಯ ಚೈತನ್ಯ ಆಶ್ರಮ ವಸತಿ ಶಾಲೆಯ ವಿದ್ಯಾರ್ಥಿ ಕು. ಶಿವಪ್ರಸಾದ ಕಡಾಡಿ 6 ಸ್ಥಾನ ಪಡೆದು “ರಾಷ್ಟ್ರ ಮಟ್ಟಕ್ಕೆ” ಆಯ್ಕೆಯಾಗುವುದರ ಜೊತೆಗೆ ಖೇಲೋ..ಇಂಡಿಯಾ ಯುತ್ ಗೆ ಆಯ್ಕೆಯಾಗಿದ್ದಾನೆ.
ರಾಷ್ಟ್ರ ಮಟ್ಟದ ಸ್ಪರ್ಧೆ ಉತ್ತರ ಪ್ರದೇಶ ಹಾಗೂ ಖೇಲೋ ಇಂಡಿಯಾ ಮಧ್ಯಪ್ರದೇಶದಲ್ಲಿ ಜರುಗುತ್ತವೆ.
ಈ ಸಾಧನೆ ಮಾಡಿದ ವಿದ್ಯಾರ್ಥಿ ಶಿವಪ್ರಸಾದ ಕಡಾಡಿಗೆ ಚೈತನ್ಯ ಶಾಲೆಯಲ್ಲಿ ಅಭಿನಂದಿಸಿ ಹಾರೈಸಿದರು.
ಪ್ರೊ. ಎಸ್.ಎಮ್. ಕಮದಾಳ, ವಾಯ್.ಬಿ. ಪಾಟೀಲ ಕಾರ್ಯದರ್ಶಿ, ಶ್ರೀಮತಿ ರುಕ್ಮಿಣಿ ಹೊರಟ್ಟಿ ಅಧ್ಯಕ್ಷರು, ಮಲ್ಲಕಂಬ ತರಬೇತಿದಾರರಾದ ಮೆಹಬೂಬ್ ಬಂಡಿವಾಡ ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.