ಸಿಂದಗಿ: ಮಕ್ಕಳು ಶಾಲೆಯ ಸಮಯ ಹೊರತುಪಡಿಸಿ ಮನೆಯಲ್ಲಿರುವಾಗ ಪಾಲಕರಿಗೆ ಸಹಾಯ ಮಾಡಬೇಕು. ವಿದ್ಯಾಭ್ಯಾಸ ಇಲ್ಲದೆ ಇದ್ದಲ್ಲಿ ಮಕ್ಕಳ ಭವಿಷ್ಯ ಹಾಳಾಗುತ್ತದೆ. ನಿಮ್ಮ ಅಕ್ಕಪಕ್ಕದ ಮಕ್ಕಳನ್ನು ಮನವರಿಕೆ ಮಾಡಿ ಶಾಲೆಗೆ ಕರೆ ತರುವ ಜವಾಬ್ದಾರಿ ಪ್ರತಿಯೊಬ್ಬ ಮಗುವು ವಹಿಸಬೇಕು ಅಂತೆಯೇ ಮನವರಿಕೆ ಆಗದೇ ಇದ್ದ ಪಾಲಕರ ಹತ್ತಿರ ನಿಮ್ಮ ಗುರುಗಳನ್ನು ಕರೆದುಕೊಂಡು ಹೋಗಿ ಮನವರಿಕೆ ಮಾಡುವ ಪ್ರಯತ್ನ ಎಲ್ಲಾ ಮಕ್ಕಳು ಮಾಡಬೇಕೆಂದು ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಹೇಳಿದರು.
ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಹಾಗೂ ಕಕ್ಕಳಮೇಲಿ ಎಲ್.ಟಿ ಸರ್ಕಾರಿ ಶಾಲೆಯ ಸಹಯೋಗದೊಂದಿಗೆ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಸರಳವಾಗಿ ಹೇಳಬೇಕೆಂದರೆ ಮಕ್ಕಳು ಓದುವ ವಯಸಿನಲ್ಲಿ ಓದಬೇಕು. ಇದನ್ನು ವಿಶ್ವ ಸಂಸ್ಥೆ ಜೂನ್ 12, 2002 ರಂದು ಜಾರಿಗೆ ತಂದಿತು. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಈ ದಿನವನ್ನು ಆಚರಣೆಗೆ ತಂದರು. ಅಂಕಿಸಂಖ್ಯೆಗಳ ಪ್ರಕಾರ 60 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಪುನೀತ್ ರಾಜ್‍ಕುಮಾರ್‍ರವರು ಬಹಳಷ್ಟು ಶಾಲೆಗಳನ್ನು ಹೆಣ್ಣು ಮಕ್ಕಳಿಗೋಸ್ಕರ ತೆರೆದರು ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಿಸ್ಟರ್. ಸಿಂತಿಯಾ ಡಿಮೆಲ್ಲೊರವರು ಮಾತನಾಡಿದರು 2023 ರ ವಿಶ್ವ ಬಾಲ ಕಾರ್ಮಿಕ ದಿನದ ಥೀಮ್ ಎಲ್ಲರಿಗೂ ಸಾಮಾಜಿಕ ನ್ಯಾಯ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಕೋವಿಡ್ 19 ಸಾಂಕ್ರಾಮಿಕ ರೋಗ ಹೆಚ್ಚಿನ ಕುಟುಂಬಗಳನ್ನು ಬಡತನಕ್ಕೆ ದೂಡಿದೆ ಮತ್ತು ಲಕ್ಷಾಂತರ ಮಕ್ಕಳನ್ನು ಬಾಲಕಾರ್ಮಿಕರಿಗೆ ಒತ್ತಾಯಿಸಿದೆ. ಇಂದು ಪ್ರಪಂಚದಾದ್ಯಂತ 10 ಮಕ್ಕಳಲ್ಲಿ 1 ಮಗು ಬಾಲ ಕಾರ್ಮಿಕರಾಗಿದ್ದಾರೆ. ಹುಡುಗರಿಗಿಂತ ಹುಡುಗಿಯರು 2 ಪಟ್ಟು ಹೆಚ್ಚು ಬಾಲಕಾರ್ಮಿಕರಿದ್ದಾರೆ. ಭಾರತದಲ್ಲಿ ಶೇಕಡ 90% ಬಾಲಕಾರ್ಮಿಕರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಬಾಲಕಾರ್ಮಿಕ ಪದ್ದತಿಯಿಂದ ದೈಹಿಕವಾಗಿ, ಬೌದ್ಧಿಕವಾಗಿ, ಭಾವಮಾತ್ಮಕವಾಗಿ ಮತ್ತು ಮನಸಿಕವಾಗಿ ಮಗು ಅಭಿವೃದ್ಧಿ ಹೊಂದಲು ಅವಕಾಶವನ್ನು ಪಡೆಯುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ಮಾಧ್ಯಮಿಕ ಮಟ್ಟದಲ್ಲಿ ಶಾಲೆ ತೊರೆಯುವವರ ಪ್ರಮಾಣ ಶೇ. 14.6 ರಷ್ಟು. ದೇಶದಲ್ಲಿ ಕರ್ನಾಟಕ ಬಾಲಕಾರ್ಮಿಕ ಪದ್ಧತಿಯಲ್ಲಿ 7ನೇ ಸ್ಥಾನ ಪಡೆದಿದೆ. ನಮ್ಮ ದೇಶದಲ್ಲಿ ಶೇ.33 ರಷ್ಟು ಹೆಣ್ಣು ಮಕ್ಕಳು ಮನೆಕೆಲಸದ ಕಾರಣ ನೀಡಿ ಶಾಲೆ ತೊರೆಯುತ್ತಿದ್ದಾರೆ. ಬಹುತೇಕ ಶಾಲೆ ಬಿಟ್ಟ ಮಕ್ಕಳು ಕುಟುಂಬದವರ ಜೊತೆ ದುಡಿಯಲು ಹೋಗುತ್ತಾರೆಂದು ಹೇಳಿದರು.
ಬ್ರದರ್ ಅಬ್ರಾಹಮ್ ಶಿಕ್ಷಣದ ಮಹತ್ವದ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆಯನ್ನು ಹಾಡಿದರು, ಪಿ.ಎಮ್. ದೊರನಳಿ ಸ್ವಾಗತಿಸಿದರು, ಎಸ್. ಎಮ್. ಹಳಪ್ಪಗೊಳ ವಂದಿಸಿದರು. ಎಮ್.ದಿಡ್ಡಿಮನಿ ಮುಖ್ಯಗುರುಗಳು, ಎಸ್.ಎಚ್. ಮುಳಸವಾಳಿಗಿ ಮತ್ತು ಸಂಗಮ ಸಂಸ್ಥೆಯ ಸಿಬ್ಬಂದಿ ರಾಜೀವ ಕುರಿಮನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದರು,