ಸಿಂದಗಿ: ಒನಕೆ ಓಬವ್ವ 18ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ದಹನುಮಪ್ಪನ ಹೆಂಡತಿ. ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮರಾಣಿ ಅಬ್ಬಕ್ಕ ರ ಸಾಲಿನಲ್ಲಿ ಒನಕೆ ಓಬವ್ವ ಅವರನ್ನು ಪರಿಗಣಿಸಲಾಗುತ್ತದೆ ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ವೀರವನಿತೆ ಒನಕೆ ಓಬವ್ವ ಅವರ ಜಯಂತ್ಯುತ್ಸವನ್ನು ಆಚರಿಸುವ ಮೂಲಕ ಮಾತನಾಡಿ, ಹೈದರಾಲಿಯು ಚಿತ್ರದುರ್ಗದ ಮೇಲೆ ಹಠಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು. ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು. ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ. ಕರ್ನಾಟಕದ ಇತಿಹಾಸದಲ್ಲಿ ಆಕ್ರಮಣಕಾರರ ವಿರುದ್ಧ ಏಕಾಂಗಿಯಾಗಿ ಹೋರಾಡಿದ ಇಂತಹ ವೀರ ಮಹಿಳಾ ಯೋಧರು ಅನೇಕರಿದ್ದಾರೆ. ಪೋರ್ಚುಗೀಸ್ ನೌಕಾಪಡೆಯನ್ನು ಮಂಗಳೂರಿನಿಂದ ಹಿಮ್ಮೆಟ್ಟಿಸಲು ಒತ್ತಾಯಿಸಿದ ಉಳ್ಳಾಲದ ರಾಣಿ ಅಬ್ಬಕ್ಕ ಚೌಟ, ಔರಂಗಜೇಬ್ ಮತ್ತು ಅವನ ಮೊಘಲ್ ಸೈನ್ಯವನ್ನು ಹಿಮ್ಮೆಟ್ಟಿಸಿದ ಕೆಳದಿ ಚೆನ್ನಮ್ಮ ಮತ್ತು ಬ್ರಿಟೀಷರ ವಿರುದ್ಧ ಹೋರಾಡಿದ ವೀರ ಕಿತ್ತೂರು ರಾಣಿ ಚೆನ್ನಮ್ಮ, ಚಿತ್ರದುರ್ಗ ಕೋಟೆಯನ್ನು ಹೈದರ್ ಅಲಿಯ ಪಡೆಗಳಿಂದ ಏಕಾಂಗಿಯಾಗಿ ರಕ್ಷಿಸಿದ ಒನಕೆ ಓಬವ್ವ ಅಂತಹ ಸುಪ್ರಸಿದ್ಧ ದೇವತೆ. ಒನಕೆ ಓಬವ್ವ ಭಾರತದ ಕರ್ನಾಟಕ ರಾಜ್ಯದ ಚಿತ್ರದುರ್ಗ ರಾಜ್ಯದಲ್ಲಿ ವಾಸಿಸುತ್ತಿದ್ದ ವೀರ ಮಹಿಳೆ. ಅವಳು ಮಾತ್ರ ತನ್ನ ನಗರವನ್ನು ಆಕ್ರಮಿಸಲು ಪ್ರಯತ್ನಿಸುತ್ತಿದ್ದ ನೂರಾರು ಸೈನಿಕರನ್ನು ಕೊಂದಳು. ಅವಳ ನಿಜವಾದ ಹೆಸರು ಓಬವ್ವ. ಅವಳು ಆ ಸೈನಿಕರನ್ನು ಪೆಸ್ಟಲ್ (ಕನ್ನಡ ಭಾಷೆಯಲ್ಲಿ ಒನಕೆ) ಸಹಾಯದಿಂದ ಹತ್ಯೆ ಮಾಡಿದಳು; ಆದ್ದರಿಂದ ಅವಳು ಒನಕೆ ಓಬವ್ವ ಎಂಬ ಹೆಸರಿನಿಂದ ಪ್ರಸಿದ್ಧಳಾದಳು ಎಂದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಐ.ಎ.ಮಕಾಂದಾರ, ಗ್ರಾಮ ಲೆಕ್ಕಾಧಿಕಾರಿ ನಿಖಿಲ ಖಾನಾಪೂರ, ಕುಮಾರಿ ಸ್ನೇಹಾ ಕೊಪ್ಪ, ಜಿ.ಎಸ್.ಸೋಮಾನಾಯಕ, ಸೋಯಲ್ ಗುಂದಗಿ, ಸಿ.ಎಲ್.ಬೋಸಗಿ, ಅನೀಲ ಹಿರೇಮಠ, ಗುರುನಾಥ ರಡ್ಡಿ ಸೇರಿದಂತೆ ಹಲವರಿದ್ದರು.