ಸಿಂದಗಿ: ಬಂದಾಳ ಶಾಲೆಯಲ್ಲಿ ಸಂವಿಧಾನ ದಿನ ಆಚರಣೆ

Must Read

ಸಿಂದಗಿ; ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಠ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಯನ್ನು ಆಚರಿಸಲಾಯಿತು.

ಶಿಕ್ಷಕ ಚಂದ್ರಶೇಖರ ಬೂಯ್ಯಾರ, ಶಿಕ್ಷಕ ಬಸವರಾಜ ಅಗಸರ ಮಾತನಾಡಿ, ಸಂವಿಧಾನ ದಿನಾಚರಣೆಯ ಮಹತ್ವದ ಕುರಿತು, ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ಸಂವಿಧಾನದ ಪ್ರಸ್ತಾವನೆ ಬೋಧಿಸಿದರು.

ಸಮಾರಂಭದಲ್ಲಿ ಶಾಲೆಯ 8 ನೆಯ ತರಗತಿಯ ವಿದ್ಯಾರ್ಥಿ ಕುಮಾರ ಶಿವಾಜಿ ಭಾಗಪ್ಪ ಉಕ್ಕಲಿ ರಚಿಸಿದ್ದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷ ಡಾ.ಬಿ.ಆರ್.ಅಂಬೇಡ್ಕರ್ ಅವರ ಸುಂದರವಾದ ಭಾವಚಿತ್ರವನ್ನು ಶಾಲೆಯ ಹಿರಿಯ ಶಿಕ್ಷಕ ಎನ್ ಎಂ ಚಪ್ಪರಬಂದ ಬಿಡುಗಡೆಗೊಳಿಸಿದರು.

ಶಾಲಾ ವಿದ್ಯಾರ್ಥಿಗಳಾದ ಭಾಗಮ್ಮ ಜಾನಪ್ಪ ಬಿರಗೊಂಡ, ಗೌರಮ್ಮ ಬಸವರಾಜ ಬಿರಾದಾರ, ಸೃಷ್ಠಿ ನೀಲಕಂಠಪ್ಪ ಹಿರೇಕುರಬರ,ಕುಮಾರ ನಿಂಗನಗೌಡ ದುಂಡಪ್ಪ ಬಿರಾದಾರ, ಶಫೀಕ್ ಖಾಜೇಸಾಬ ನಧಾಫ,ಗುರುರಾಜ ಶ್ರೀಶೈಲ ಬಿರಾದಾರ, ಶಿವಾಜಿ ಭಾಗಪ್ಪ ಉಕ್ಕಲಿ ಸೇರಿದಂತೆ ಸಂವಿಧಾನದ ಅರ್ಥ ಮಹತ್ವ ರಚನೆ ಹಾಗೂ ಅದರ ಮುಖ್ಯ ಲಕ್ಷಣಗಳು ಹಾಗೂ ಸಂವಿಧಾನದ ರಚನಾ ಕಾರ್ಯದಲ್ಲಿ ಪಾಲ್ಗೊಂಡಿರುವ ಗಣ್ಯ ವ್ಯಕ್ತಿಗಳ ವಿವರವನ್ನು ತಮ್ಮ ಮಾತಿನಲ್ಲಿ ವಿವರವಾಗಿ ತಿಳಿಸುವ ಮೂಲಕ ಸರ್ವಧರ್ಮ ಸಮಭಾವ ಎಂಬ ತತ್ವದ ಆಶಯವನ್ನು ಅರಿತು ಕೊಂಡು ನಿತ್ಯ ಜೀವನದಲ್ಲಿ ಸಂವಿಧಾನದ ಮೌಲ್ಯವನ್ನು ರೂಢಿಸಿಕೊಳ್ಳಬೇಕು ಎಂದರು.

ಶಾಲಾ ಗುರು ಎಂ.ಬಿ.ಕೋರವಾರ. ನಿಂಗನಗೌಡ ಪಾಟೀಲ,ಸಿದ್ದಲಿಂಗಪ್ಪ ಪೋದ್ದಾರ. ಎಸ್.ಬಿ.ಬಡಿಗೇರ, ಸುಮಾಂಗಲಾ ಕೆಂಭಾವಿ, ಶ್ರೀದೇವಿ ಕುರ್ಲೆ,ಅಕ್ಷತಾ ಉಡಕೇರಿ, ದೈ ಶಿ ಎಂ.ವಾಯ್ ಹಿಪ್ಪರಗಿ ಉಪಸ್ಥಿತರಿದ್ದರು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group