spot_img
spot_img

Sindagi: ವೈದ್ಯನಾಗಲು ಗುರುವಿನ ಮಾರ್ಗದರ್ಶನ ಅವಶ್ಯ-ಡಾ. ಅನಿಲ್ ನಾಯಕ

Must Read

spot_img
- Advertisement -

ಸಿಂದಗಿ: ವೈದ್ಯನಾಗುವ ಕನಸನ್ನು ನನಸಾಗಿಸಿಕೊಳ್ಳಬೇಕೆಂದರೆ ಗುರುವಿನ ಮಾರ್ಗದರ್ಶನ ಅವಶ್ಯ ಎಂದು ಡಾ.ಅನಿಲ್ ನಾಯಕ್ ಅಭಿಪ್ರಾಯ ಪಟ್ಟರು.

ಅವರು ಸ್ಥಳೀಯ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನಲ್ಲಿ ವೈದ್ಯರ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಮಕ್ಕಳ ಮನೋಭೂಮಿಕೆಯಲ್ಲಿ ವೈದ್ಯರಾಗುವ ಬೀಜಗಳನ್ನು ಬಿತ್ತುವ ಗುರುಗಳು ವೈದ್ಯರಿಗಿಂತ ಶ್ರೇಷ್ಠವೆಂದರು.

ಈ ವೇಳೆ ಎಚ್. ಜಿ .ಕಾಲೇಜಿನ ಪ್ರಾಚಾರ್ಯ  ಎ.ಆರ್. ಹೆಗ್ಗನದೊಡ್ಡಿ ಮಾತನಾಡಿ, ತಂದೆ ತಾಯಿಗಳು ಜನ್ಮ ನೀಡಿದರೆ ವೈದ್ಯ ನಮ್ಮ ಆರೋಗ್ಯವನ್ನು ಸುಧಾರಿಸಿ ಮರುಜನ್ಮ ನೀಡುತ್ತಾರೆ. ಹಾಗಾಗಿ ವೈದ್ಯರು ದೇವರಿಗೆ ಸಮಾನ ಎಂದರು.

- Advertisement -

ವಿವೇಕ್ ಇಂಟರ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಪ್ರಾಚಾರ್ಯ ಶಾನಿಮೋ ಲ.ರಾಬಿನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವೈದ್ಯರ ದಿನಾಚರಣೆಯ ಪ್ರಾಮುಖ್ಯತೆ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾದ ನೀಲಮ್ಮ ಹೆಗ್ಗಣದೊಡ್ಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಆಡಳಿತ ಅಧಿಕಾರಿ ರಾಬಿನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ವೈದ್ಯರಿಗೆ ಕೃತಜ್ಞತೆ ಹೇಳುವ ಗೀತೆಯನ್ನು ಹಾಡಿದರು. ಶಾಲೆಯ ಗುರುಮಾತೆಯರು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group