spot_img
spot_img

‘ಪತ್ರಿಕೋದ್ಯಮದಲ್ಲಿ ಮಾನವೀಯತೆಯ ಸೆಲೆ ಚಿಮ್ಮಿ ಹರಿಯವಂತಾಗಬೇಕು’ – ಪತ್ರಕರ್ತ ಡಾ.ಎಂ.ಮಹ್ಮದ್ ಬಾಷಾ ಗೂಳ್ಯಂ ಅಭಿಮತ

Must Read

- Advertisement -

ಕನ್ನಡದ ಮೊಟ್ಟಮೊದಲ ಪತ್ರಿಕೆ ಮಂಗ್ಳೂರು ಸಮಾಚಾರ ಪ್ರಾರಂಭವಾಗಿ ಇಂದಿಗೆ 180 ವರ್ಷಗಳು ಸಂದಿವೆ. ಆ ದಿನದ ನೆನೆಪಿಗೆ ಆಚರಿಸುವ ಪತ್ರಿಕಾ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರ್ವೋದಯ ಮಂಡಲ , ಬೆಂಗಳೂರು ನಗರ ಜಿಲ್ಲಾ ಘಟಕದ ವತಿಯಿಂದ ಮಲ್ಲೇಶ್ವರ 8ನೇ ಅಡ್ಡರಸ್ತೆಯ ಬಿ.ಇ.ಎಸ್.ವಿದ್ಯಾಸಂಸ್ಥೆ ಸಭಾಂಗಣದಲ್ಲಿ ‘ಪತ್ರಕರ್ತರಾಗಿ ಮಹಾತ್ಮಾ ಗಾಂಧೀಜಿ’ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು .

ದಿ ಡೈಲಿ ನ್ಯೂಸ್ ,ಕನ್ನಡ ದೈನಿಕ ಸಂಪಾದಕರು ಡಾ.ಎಂ.ಮಹ್ಮದ್ ಬಾಷಾ ಗೂಳ್ಯಂ  ಉಪನ್ಯಾಸಕಾರರಾಗಿ ಆಗಮಿಸಿ ಮಾತನಾಡುತ್ತ, ಇಂದು ಪತ್ರಿಕೋದ್ಯಮ ಹಲವಾರು ಬದಲಾವಣೆಗಳನ್ನು ಕಂಡಿದೆ. ಅದರ ರೀತಿ ಮತ್ತು ಸ್ವರೂಪ ಬದಲಾಗಿದೆ.

- Advertisement -

ಸ್ವಾತಂತ್ರ್ಯ ಪೂರ್ವದಲ್ಲಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಸಮಾಜದ ಕೈಗನ್ನಡಿಯಾಗಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸುತ್ತ ಬಂದಿದೆ ಎಂದರು.

ಮಹಾತ್ಮ ಗಾಂಧೀಜಿಯವರು ಕೇವಲ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲದೇ, ಪತ್ರಕರ್ತರಾಗಿ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ ಬರವಣಿಗೆಗಾರ ಕೂಡ ಹೌದು. ತಾವು ಬದುಕಿದ್ದ ಕಾಲದವರೆಗೂ ಜಗತ್ತು ಕಂಡ ಸರ್ವಶ್ರೇಷ್ಟ ಪತ್ರಕರ್ತರಾಗಿದ್ದರು. ಪತ್ರಿಕೋದ್ಯಮಕ್ಕೆ ಶ್ರೇಷ್ಠ ಮಾನದಂಡ ಹಾಕಿದ ಪತ್ರಕರ್ತ ಗಾಂಧೀಜಿಯವರು ಸ್ವತಃ ತಾವೇ ಹಲವಾರು ಪತ್ರಿಕೆಗಳನ್ನು ನಡೆಸುತ್ತಿದ್ದರು.

- Advertisement -

ಆಡುಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಗಾಂಧೀಜಿಯವರು ಬರೆಯದೇ ಇರುವ ವಿಷಯಗಳೇ ಇರಲಿಲ್ಲ. ಇವರ ಬರವಣಿಗೆ ಎಲ್ಲಾ ವಿಷಯಗಳನ್ನು ವ್ಯಾಪಿಸಿರುತ್ತಿದ್ದವು. ಗಾಂಧೀಜಿಯವರ ಪ್ರಕಾರ ಪತ್ರಿಕೋದ್ಯಮ ಎಂದರೆ ಸಾರ್ವಜನಿಕ ಸೇವೆಗಿರುವ ಒಂದು ಪ್ರಮುಖ ಅಸ್ತ್ರ. ಬಾಪೂಜಿಯವರು ಆರು ನಿಯತಕಾಲಿಕೆಗಳೊಂದಿಗೆ ಸಂಪರ್ಕ ಹೊಂದಿದ್ದರು ಹಾಗೂ ನಾಲ್ಕು ಪತ್ರಿಕೆಗಳಿಗೆ ಸಂಪಾದಕರಾಗಿದ್ದರು.

ತಮ್ಮ ಅಂಕಣಗಳ ಮೂಲಕ ನೈರ್ಮಲ್ಯ, ಸ್ವಯಂ ಶಿಸ್ತು, ಉತ್ತಮ ನಾಗರಿಕತೆಯ ಮಹತ್ವ ಸಾರಿದರು. ಪತ್ರಿಕೋದ್ಯಮದ ಏಕೈಕ ಗುರಿ ಜನತೆಯ ಸೇವೆಯಾಗಿರಬೇಕು ಎಂಬ ತತ್ವದಲ್ಲಿ ಅಪಾರ ನಂಬಿಕೆ ಹೊಂದಿದ್ದರು. ಗಾಂಧೀಜಿಯವರ ಪ್ರಕಾರ ಪತ್ರಿಕೆಯೆಂದರೆ ಜನಾಭಿಪ್ರಾಯಕ್ಕೆ ಮನ್ನಣೆ ನೀಡುವ ಸರ್ವಶ್ರೇಷ್ಠ ಮಾಧ್ಯಮ ಎಂದು ಅಭಿಪ್ರಾಯ ಪಟ್ಟರು. 

ಡಾ.ಯ.ಚಿ. ದೊಡ್ಡಯ್ಯ, ಗೌರವ ಕಾರ್ಯದರ್ಶಿ, ಕರ್ನಾಟಕ ಸರ್ವೋದಯ ಮಂಡಲ, ಪ್ರಾಸ್ತಾವಿಕ ನುಡಿಗಳನ್ನಡಿದರು. ಬಿ.ಇ.ಎಸ್.ವಿದ್ಯಾಸಂಸ್ಥೆ ಅಧ್ಯಕ್ಷೆ ಎನ್. ಶ್ರೀಮತಿ ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರಂಗರಾಜು, ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಧ್ಯಕ್ಷರು, ಬೆಂ.ನ.ಜಿ. ಕರ್ನಾಟಕ ಸರ್ವೋದಯ ಮಂಡಲ ಹಾಗೂ ಕಾರ್ಯದರ್ಶಿ ಸುಮ ಚಂದ್ರಶೇಖರ್ ಉಪಸ್ಥಿತರಿದ್ದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group