- Advertisement -
ಸಿಂದಗಿ: ತಂಬಾಕು ಸೇವನೆ ದೇಹಕ್ಕೆ ಅಪಾಯಕಾರಿಯಾಗಿದೆ ಇದರಿಂದ ಸ್ವಾಸ್ಥ ಹಾಳಾಗುತ್ತದೆ ಎಂದು ಡಾ.ಜಿ.ಎಸ್.ಪತ್ತಾರ ಹೇಳಿದರು.
ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಇಲ್ಲಿನ ಆರೋಗ್ಯ ಉಪಕೇಂದ್ರದಲ್ಲಿ ವಿಶ್ವತಂಬಾಕು ಮುಕ್ತ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ತಂಬಾಕು ಎಲ್ಲ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅಪಾಯಕಾರಿಯಾಗಿದೆ. ಇದು ಉಸಿರಾಟ, ಹೃದಯ ಸಂಬಂಧಿ ಕಾಯಿಲೆಗಳನ್ನು ಹುಟ್ಟು ಹಾಕುತ್ತದೆ ಇದರಿಂದ ನಾಗರಿಕರು ದೂರ ಉಳಿದು ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕೆಂದರು.
- Advertisement -
ಸಿಎನ್‍ಡಿ ವೈದ್ಯಾಧಿಕಾರಿ ಡಾ.ವರುಣ ಪಾಟೀಲ, ಹಿರಿಯ ಆರೋಗ್ಯ ಸಹಾಯಕಿ ಎಸ್.ಐ.ಕಲಶೆಟ್ಟಿ, ಭಾಗ್ಯಶ್ರೀ ವಾಲಿಕಾರ, ಸಂತೋಷ ಕೋರಿ, ಮಾರ್ತಾಂಡ ವಗ್ಗೆ, ಶಿವಪ್ಪ ಹುಲ್ಲೂರ, ಪ್ರಶಾಂತ ಶಹಾಪುರ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.