spot_img
spot_img

ವಿಶೇಷ ಲೇಖನ

Must Read

spot_img
- Advertisement -

ವಿಶೇಷ ಲೇಖನ

ಪಬ್ಲಿಕ್ ಟಿವಿಯವರು ಒಂದು ಪ್ರಶ್ನೆಗೆ ಉತ್ತರವನ್ನು ಪಬ್ಲಿಕ್ ನೀಡಲು ಕೇಳಿದ್ದರು. ಪ್ರಶ್ನೆ ಹೀಗಿದೆ ನೋಡಿ.

ಕೊರೊನ ವನ್ನು ತಡೆಯಲು ಸರ್ಕಾರ ಏನು ಮಾಡಬೇಕು?

  1. ವಿದೇಶ ಪ್ರವಾಸ ತಡೆಯೋದು
  2. ಮಾಸ್ಕ್ ಧರಿಸೋದನ್ನು ಕಡ್ಡಾಯ ಮಾಡೋದು
  3. ಲಾಕ್ಡೌನ್ ಮಾಡೋದು
  4. ಜನರೆ ಎಚ್ಚರವಾಗಿರೋದು

ಇದರಲ್ಲಿ ಯಾವುದೇ ವ್ಯವಹಾರಕ್ಕಾಗಲಿ, ಮನರಂಜನೆಗಾಗಲಿ, ಮಾಧ್ಯಮಗಳಿಗಾಗಲಿ ಇನ್ನಿತರ ರಾಜಕೀಯ ಚಟುವಟಿಕೆಗಳಿಗಾಗಲಿ ತಡೆಹಾಕುವ ಮಾತಿಲ್ಲ. ಸತ್ಯ ಹೇಳಬೇಕೆಂದರೆ ಮೇಲಿನ ಎಲ್ಲಾ ಕಾರ್ಯಗಳನ್ನೂ ಈಗ ಮಾಡಿ ಮುಗಿಸಿದ್ದಾರೆನ್ನಬಹುದು.

- Advertisement -

ಮಾಧ್ಯಮಗಳನ್ನು, ಮಧ್ಯವರ್ತಿಗಳನ್ನು, ಮಧ್ಯಪಾನವನ್ನು, ಮನರಂಜನೆಯನ್ನು ಮಾರಾಟ,ಹಾರಾಟ,ಹೋರಾಟಗಳನ್ನು, ರಾಜಕೀಯ ಸಮಾವೇಶ ಭಾಷಣ,ಕಾರ್ಯಕ್ರಮಗಳನ್ನು ಮಾತ್ರ ನಿಲ್ಲಿಸಿಲ್ಲ

ಕೊರೊನ ಎಂಬ ಮಹಾಮಾರಿಯನ್ನು ನಕಾರಾತ್ಮಕಶಕ್ತಿ ಎಂದು ಆಧ್ಯಾತ್ಮ ವರ್ಗದವರು ತಿಳಿದು, ಅದನ್ನು ಶಾಂತಗೊಳಿಸಲು ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಂದ ಹಿಡಿದು ಮಹಾಗುರುಗಳವರೆಗೆ ಹಮ್ಮಿಕೊಂಡು ಜೀವರಕ್ಷಣೆಗಾಗಿ ಭಗವಂತನಿಗೆ ಮೊರೆ ಹೋಗಿದ್ದಾರೆ.

ಆದರೆ, ಮಧ್ಯದಲ್ಲಿರುವವರ ಕೊರೊನ ಪ್ರಸಾರವು ಜನರ ಮನೆಗೆ ತಲುಪುವಾಗ ಕೇವಲ ಸತ್ತವರ ಸಂಖ್ಯೆ, ಕೊರೊನ ಸೋಂಕಿನವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದಷ್ಟೆ ನೋಡುತ್ತಾ ಭಯದಿಂದ ಕೆಲಸ ಕಾರ್ಯ ಬಿಟ್ಟು ಮನೆಯಲ್ಲಿದ್ದೇ ರೋಗ ಹೆಚ್ಚಾಗುತ್ತಿದೆ. ಇಲ್ಲಿ ನಾವು ಸಕಾರಾತ್ಮಕ ವಿಚಾರಗಳನ್ನು ಜನರಿಗೆ ಹರಡುತ್ತಿದ್ದರೆ ಸಮಾಜದಲ್ಲಿಯೂ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಅದನ್ನು ಬಿಟ್ಟು ತಮ್ಮ ವ್ಯವಹಾರ,ಮನರಂಜನೆ,ಸ್ವಾರ್ಥ ಕ್ಕಾಗಿ ಕೆಟ್ಟ ಸುದ್ದಿಗಳನ್ನು ದಿನವಿಡೀ ಹಾಕಿ ಜನರ ಮನಸ್ಸನ್ನು ಕೆಡಿಸಿದರೆ ಹೊರಬಂದು ಹೋರಾಟ, ಹಾರಾಟ,ಮಾರಾಟದಲ್ಲಿ ಮೈ ಮರೆತು ಇನ್ನಷ್ಟು ರೋಗ ಹರಡುತ್ತದೆ.

- Advertisement -

ಇದರಿಂದ ಲಾಭ ಯಾರಿಗೆ? ನಷ್ಟ ಯಾರಿಗೆ? ವ್ಯವಹಾರದಿಂದ ಹಣ ಗಳಿಸಬಹುದು.ಜೀವ ಉಳಿಸಬಹುದೆ? ಸಾಮಾನ್ಯರ ಜೀವ
ಉಳಿಸಲು ಸರ್ಕಾರ ಏನು ಮಾಡಬಹುದೆಂದರೆ ಮಾಧ್ಯಮಗಳ ಮೂಲಕ ಜನರನ್ನು ಎಚ್ಚರಿಸಬಹುದಷ್ಟೆ. ಆದರೆ,ಮಾಧ್ಯಮದವರಿಂದ ಕೊರೊನ ಹರಡದಂತೆ ತಡೆಯಲು ಸಾಧ್ಯವಿದೆ.

ಉತ್ತಮ ಸಾತ್ವಿಕ ವಿಚಾರಗಳ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ, ಮನೆಗೆ ತಲುಪಿಸಿ. ಈಗ ಶಾಲಾಕಾಲೇಜ್ ಬಿಟ್ಟು ಮನೆಯೊಳಗಿರುವ ಮುಂದಿನ ದೇಶದ ಪ್ರಜೆಗಳಾಗಿರುವ ಮಕ್ಕಳಲ್ಲಿ ದೇಶಭಕ್ತಿ ಜೊತೆಗೆ ದೈವಶಕ್ತಿ ಹೆಚ್ಚಾಗುವ ಉತ್ತಮವಾದ ನೈತಿಕತೆಯ ಕಾರ್ಯಕ್ರಮ. ಪ್ರಸಾರಮಾಡಿದರೆ ಅದರಲ್ಲಿ ಮನರಂಜನೆಯ ಜೊತೆಗೆ ಜ್ಞಾನವೂ ಬೆಳೆಯುತ್ತದೆ.

ಮಾಧ್ಯಮಗಳು ನಡೆಯುತ್ತಿರುವುದೇ ವೀಕ್ಷಕರಿಂದ ಎಂದಾಗ ನಾವು ಜವಾಬ್ದಾರಿಯುತ ಪ್ರಜೆಗಳಾಗಿದ್ದು ದೇಶದ ಜನತೆಗೆ ಏನು ಕೊಡಬಹುದೆನ್ನುವುದರ ಜ್ಞಾನವಿರಬೇಕಷ್ಟೆ. ಉತ್ತಮ ಸದ್ವಿಚಾರಕ್ಕೆ ಅವಕಾಶ ಕೊಡದೆ, ಕಿತ್ತುಹೋದ ಸುದ್ದಿಗಳನ್ನು ಮನೆಮನೆಗೆ ತಲುಪಿಸಿರುವುದರ ಪರಿಣಾಮವೆ ಇಂದಿನ ಸಮಾಜವನ್ನು ತಡೆಯಲಾಗುತ್ತಿಲ್ಲ. ಮುಂದಿನ ಪ್ರಜೆಗಳಿಗೆ ಉತ್ತಮರೀತಿಯಲ್ಲಿ ಜೀವನ ನಡೆಸಲು ಎಲ್ಲಾ ಪೋಷಕರು ಅವರಿಗೆ ಮನೆಯೊಳಗಿನಿಂದಲೇ ಜೀವನ ಸತ್ಯದ ಪಾಠ ತಿಳಿಸಿದರೆ ಉತ್ತಮ. ಕೊರೊನ ಮಾನವನಿಗೆ ಸರಿಯಾದ ಪಾಠ ಕಲಿಸಲು ಬಂದಿರುವ ಮಾರಿ. ಇವಳನ್ನು ಇನ್ನಷ್ಟು
ಕೆಟ್ಟ ವಿಚಾರಗಳಿಂದ ಕೆಣಕಿದರೆ ಜೀವ ಹೋಗುವುದಷ್ಟೆ.

ಜೀವ ಹೋದಮೇಲೆ ಮನರಂಜನೆ, ಮಾರಾಟ, ಹಾರಾಟ, ಹೋರಾಟವೆಲ್ಲಿರುತ್ತದೆ? ಮಾಧ್ಯಮದವರೂ ಮಾನವರಾಗಿದ್ದು, ಸಾಮಾನ್ಯ ಜ್ಞಾನದ ಸಾಮಾನ್ಯಪ್ರಜೆಯಾಗಿರುವಾಗ ಕೇವಲ ಸರ್ಕಾರ ಕೊರೊನ ತಡೆಯಬೇಕೆನ್ನುವುದರ ಸುದ್ದಿ ಹರಡದೆ, ನಾವೇನು ಸುದ್ದಿ ಹರಡಿದರೆ ಜನರ ಮನಸ್ಸು ಶಾಂತವಾಗಿ ಯೋಚಿಸುವ ಶಕ್ತಿ ಪಡೆಯಬಹುದೆನ್ನುವುದನ್ನು ಚಿಂತನೆ ನಡೆಸಿದರೆ ಯಾವ ಮಾರಿಯೂ ಬೆಳೆಯೋದಿಲ್ಲ.

ಇಂತಹ ಅನೇಕ ರೋಗಗಳು ಹಿಂದೆಯೂ ಇತ್ತು, ಈಗಲೂ ಇದೆ,ಮುಂದೆಯೂ ಇರುತ್ತದೆ. ರೋಗಕ್ಕೆ ಕಾರಣ ಮಾನವನ ಅಜ್ಞಾನದ ಮನಸ್ಸು.ಮನಸ್ಸನ್ನು ತಡೆಹಿಡಿಯಲು ಯೋಗಿಗಳಂತೆ ಜೀವನ ನಡೆಸಬೇಕು. ಭೋಗ ಜೀವನವನ್ನು ನಡೆಸುವವರಲ್ಲಿ ರೋಗವಿರುತ್ತದೆ. ಹೀಗಾಗಿ ಹೆಚ್ಚು ಹಣವಂತರು ದಾನ ಧರ್ಮ ಕಾರ್ಯಕ್ಕೆ ಬಳಸಿಕೊಂಡು ಜೀವನ ನಡೆಸಿದ್ದರು.

ಹಣವಿಲ್ಲದವರು ಕಾಯಕವೇ ಕೈಲಾಸವೆಂದು ಪರಮಾತ್ಮನ ದಾಸರಾಗಿದ್ದರು. ಕೊರೊನ ಹೆಸರಲ್ಲಿ ಎಷ್ಟೋ ಮಧ್ಯವರ್ತಿಗಳು ಹಣವಂತರಾದರು. ಆದರೆ, ರೋಗದ ಹೆಸರಲ್ಲಿ ‌ಹಣಸಂಪಾದನೆ ಅಧರ್ಮ. ಅಧರ್ಮಕ್ಕೆ ಶಿಕ್ಷೆಯಿದೆ. ಧರ್ಮಕಾರ್ಯಕ್ಕೆ,ಶಿಕ್ಷಣಕ್ಕೆ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ಕೆ ತಡೆ ಹಾಕಿ, ನಕಾರಾತ್ಮಕ ಶಕ್ತಿಗಳನ್ನು ತಡೆಯದೆ ಬೆಳೆಸಿದರೆ ಮಾರಿ ಶಾಂತಳಾಗುವಳೆ?

ಎಲ್ಲಾ ವಿಚಾರಗಳನ್ನು ಎರಡು ರೀತಿಯ ಸತ್ಯದಿಂದ ತಿಳಿಯಬಹುದು.ಆಧ್ಯಾತ್ಮ ಹಾಗು ಬೌತಿಕ ಸತ್ಯ. ಒಂದು ಕಣ್ಣಿಗೆ ಕಾಣದ ಸತ್ಯ ಇನ್ನೊಂದು ಕಣ್ಣಿಗೆ ಕಾಣುವ ಸತ್ಯ. ಕಣ್ಣಿಗೆ ಕಾಣುವ ಸತ್ಯವನ್ನು ಎಲ್ಲಾ ಒಪ್ಪಿದರೂ ಅರ್ಧಸತ್ಯ ಹಿಂದುಳಿದು ಜನರನ್ನು ಮೋಸ ಹೋಗುವಂತೆ ಮಾಡುತ್ತದೆ.

ಸಮಾನತೆಯನ್ನು ಜ್ಞಾನವಿಜ್ಞಾನದಲ್ಲಿ ಕಾಣಬೇಕಾದರೆ ಮಾನವನಿಗೆ ಸಾಮಾನ್ಯಜ್ಞಾನದ ಅಗತ್ಯವಿದೆ. ಮಧ್ಯವರ್ತಿಗಳು ಸತ್ಯಾಸತ್ಯತೆಯನ್ನು ಇಟ್ಟು ವ್ಯವಹಾರವಷ್ಟೆ ನಡೆಸಬಹುದು. ಅತಂತ್ರವಾಗಿರುವ‌ ಕೊರೊನ ಸತ್ಯವನ್ನು ಸಾಮಾನ್ಯಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಮಾಧ್ಯಮಗಳು ಸ್ವತಂತ್ರ ಜ್ಞಾನಕ್ಕೆ ಸಹಕರಿಸಿ ಜನರಿಗೆ ಸತ್ಯ
ತಿಳಿಸುವುದಕ್ಕೆ ಅವಕಾಶ ನೀಡಿದರೆ ಕೊರೊನ ಮಾರಿ ಮಾಯ.

ಸಾವು ಕೇವಲ ಕೊರೊನ ದಿಂದ ಮಾತ್ರ ಹೆಚ್ಚಾಗಿಲ್ಲ ಬೇರೆ ಕಾಯಿಲೆಗಳು, ಆತ್ಮಹತ್ಯೆಗಳು, ಕೊಲೆ,ಸುಲಿಗೆ, ಭ್ರಷ್ಟಾಚಾರದಿಂದಲೂ ಬೆಳೆಯುತ್ತಿರುವಾಗ, ಅದನ್ನು ಜನರ ಬಳಿಗೆ ತರುವ ಮುನ್ನ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ನಡೆಸಲು ಆಧ್ಯಾತ್ಮ ಸತ್ಯ ಅಗತ್ಯ. ಆಧ್ಯಾತ್ಮ ಎಂದರೆ ಆದಿ ಆತ್ಮ.ನಮ್ಮನ್ನ ನಾವು ತಿಳಿದು ,ಸಮಾಜಕ್ಕೆ ಉತ್ತಮ ವಿಚಾರ

ತಿಳಿಸುವುದರಿಂದ ಆತ್ಮಹತ್ಯೆಗಳಾಗಲಿ,ಆತ್ಮವಂಚನೆಗಳಾಗಲಿ, ಆಸತ್ಯ,ಅನ್ಯಾಯ, ಅಧರ್ಮಗಳಾಗಲಿ ಬೆಳೆಯುವುದಿಲ್ಲ. ಸ್ನೇಹಿತರು ಯಾರಾದರಾಗಲಿ ನಾವೆಲ್ಲರೂ ಮಾನವರು,ಮಧ್ಯವರ್ತಿಗಳಷ್ಟೆ ಮಾಧ್ಯಮಗಳ ಮೂಲಕ ನಮ್ಮ ನಮ್ಮ ಚಿಂತನೆಗಳು ಬೆಳೆದಿದೆಯಷ್ಟೆ.

ಹಾಗಾದರೆ ಸತ್ಯ ಧರ್ಮ ನಮ್ಮಲ್ಲಿಲ್ಲವೆ? ರೋಗ ಒಳಗಿದೆಯೆ? ಹೊರಗಿದೆಯೆ? ಗಾಳಿಯಿಂದ ಹರಡುತ್ತಿರುವ ಹೊಸರೋಗವನ್ನು ಗಾಳಿಸುದ್ದಿ ಮಾಡಿಕೊಂಡು ಹರಡುತ್ತಿದ್ದರೆ ರೋಗ ಹೋಗುವುದೆ? ಎಷ್ಟು ವೈಭವೀಕರಿಸಿದರೂ ವೈಜ್ಞಾನಿಕ ಸತ್ಯ ಸತ್ಯವಾಗೋದಿಲ್ಲ. ಎಷ್ಟೇ ಕಡೆಗಣಿಸಿದರೂ ಆಧ್ಯಾತ್ಮ ಸತ್ಯ ಅಸತ್ಯವಾಗೋದಿಲ್ಲ. ಇದೊಂದು ಸಾಮಾನ್ಯಜ್ಞಾನ ಎಲ್ಲಾ ಅರ್ಥ ಮಾಡಿಕೊಂಡರೆ ನಮ್ಮ ರೋಗಕ್ಕೆ ನಾವೇ ಕಾರಣ ಎನ್ನಬಹುದು.

ಇದನ್ನು ಪರಾಶಕ್ತಿಯ ಕೃಪೆಯಿಂದ ವಾಸಿ ಮಾಡಬಹುದೋ ಅಥವಾ ಪರಕೀಯರಿಂದಲೋ. ಪರಕೀಯರ ಬಳುವಳಿ ಅವರ ವ್ಯವಹಾರಕ್ಕೆ ಕೈ ಜೋಡಿಸಿ ಭಾರತ ಪಡೆದುಕೊಂಡು ಈಗ ಅನುಭವಿಸುವಂತಾಗಿದೆ. ಮಾಧ್ಯಮಗಳು ಎಚ್ಚರವಾದರೆ ಉತ್ತಮ ಬದಲಾವಣೆ ಸಾಧ್ಯವಿದೆ ಎನ್ನಬಹುದು.

ವಿಚಾರ ಸೂಕ್ಷ್ಮ ವಾಗಿದ್ದರೂ ಸತ್ಯವಾಗಿದೆ. ಸತ್ಯಕ್ಕೆ ಬೆಲೆಕೊಟ್ಟರೆ ಸಾವು ಬೆಳೆಯೋದಿಲ್ಲ. ಸಾವನ್ನು ತಡೆಯೋರಿಲ್ಲ.ಆದರೂ ತಡೆಯೋ ಪ್ರಯತ್ನ ವಿಜ್ಞಾನ ನಡೆಸಿದೆ. ಹಿಂದಿನ ರಾಜರ ಕಾಲದಲ್ಲಿ ಭೂ ಭಾರ ಹೆಚ್ಚಾದಾಗ ಯುದ್ದದ ಮೂಲಕ ಜೀವ ಹೋಗುತ್ತಿತ್ತು. ಅಧರ್ಮ ಹೆಚ್ಚಾದಂತೆ ಭೂಭಾರ ಹೆಚ್ಚಾಗುತ್ತದೆ. ಆದರೆ,ಈಗ ಧರ್ಮದ ಹೆಸರಲ್ಲಿಯೇ ಅಧರ್ಮ ಬೆಳೆದರೆ ಧರ್ಮರಕ್ಷಣೆಗೆ ಯಾರ ವಿರುದ್ದ ಯುದ್ದ ಮಾಡಬೇಕು? ಎಲ್ಲಾ ಸಾಮಾನ್ಯಪ್ರಜೆಗಳೆ
ಆದರೆ ಸಾಮಾನ್ಯಜ್ಞಾನ ಎಲ್ಲರಲ್ಲಿಯೂ ಇಲ್ಲ.

ಹೀಗಾಗಿ ಭೂಮಿ ಸಣ್ಣ ಅಣು ರೂಪದಲ್ಲಿ ಮಾರಿಯಾಗಿ ನಿಂತು ತನ್ನ ಲಯದ ಕಾರ್ಯ ನಡೆಸಿದ್ದಾಳೆ. ಅದರಲ್ಲಿಯೂ ಭಾರತದಂತಹ ಪವಿತ್ರ ದೇಶವನ್ನು ಸ್ವಚ್ಚಮಾಡಲು ಪ್ರಜೆಗೆ ಧರ್ಮದಿಂದ ನಡೆಯಲು ದಾರಿ ತೋರಿಸಿದ್ದರೂ, ಮನೆಯಲ್ಲಿ ಕುಳಿತವರಿಗೆ ಅಧರ್ಮವನ್ನೇ ತೋರಿಸುತ್ತಿದ್ದರೆ ಬದಲಾವಣೆ
ಸಾಧ್ಯವೆ? ನಮ್ಮೊಳಗೇ ಹೊಕ್ಕಿ ನೋಡುವುದಕ್ಕೂ ಕಷ್ಟ.

ಕಾರಣ ಹೊರಗೆ ಹರಿದಾಡಲು ಬಿಟ್ಟ ಮನಸ್ಸನ್ನು ಒಳಗೆ ಎಳೆದುಕೊಂಡು ಕೂರಲು ನಮ್ಮಲ್ಲಿ ಸಾತ್ವಿಕ ಶಕ್ತಿ ಬೇಕು. ನಮ್ಮಲ್ಲೇ ಇರದ ಶಕ್ತಿ ಮಕ್ಕಳಲ್ಲಿ ಕಾಣಬಹುದೆ?  ದೇಶದ ಪ್ರತಿಯೊಂದು ಸಮಸ್ಯೆಗೆ ಕಾರಣ ಪ್ರಜೆಗಳ ಅಜ್ಞಾನ ಅಜ್ಞಾನ ಹೋಗಲಾಡಿಸಲು ಸತ್ಯಜ್ಞಾನದ ಶಿಕ್ಷಣ ನೀಡಬೇಕು.

ಶಿಕ್ಷಣ ನೀಡು ಗುರು ಹಿರಿಯರಲ್ಲಿ ಸತ್ಯವಿರಬೇಕು. ರಾಜಕೀಯ ವಿಚಾರ ಬಿಟ್ಟು ರಾಜಯೋಗದ ವಿಚಾರದೆಡೆಗೆ ಮನಸ್ಸು ನಡೆದಾಗಲೆ ಸತ್ಯದರ್ಶನ ಸಾಧ್ಯ. ಅಂದರೆ, ನಾವೀಗ ರಾಜಕೀಯದಲ್ಲಿದ್ದು ಕೊರೊನ ವನ್ನು ಓಡಿಸೋ ಪ್ರಯತ್ನಮಾಡಿದರೂ ತಾತ್ಕಾಲಿಕ ವಷ್ಟೆ. ಇದಕ್ಕೆ ಮದ್ದು ಒಳಗಿನ ಜ್ಞಾನದಲ್ಲಿದೆ.

ಔಷಧವೂ ಒಳಗೆ ನೀಡಬೇಕು.ಮಾಧ್ಯಮಗಳು ಆರೋಗ್ಯಕರ ವಿಚಾರಗಳಿಂದ ಜನರನ್ನು ರೋಗಮುಕ್ತರಾಗಿಸಬೇಕು. ಅನಾರೋಗ್ಯವನ್ನೇ ಬೆಳೆಸಿದರೆ ಸರ್ಕಾರ ಏನು ಮಾಡಲೂ ಸಾಧ್ಯವಿಲ್ಲ. ಎಲ್ಲಾ ಪಕ್ಷದವರೂ ಈ ವಿಚಾರದಲ್ಲಿ ಒಂದಾದರೆ ಮುಂದಿನ ಭಾರತ ಆತ್ಮನಿರ್ಭರ ಆಗಲು ಸಾಧ್ಯವಿದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕಲಿಕೋಪಕರಣಗಳ ವಿತರಣಾ ಸಮಾರಂಭ

ಯಕ್ಕುಂಡಿ :ಸವದತ್ತಿ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯ ಪ್ರಾಥಮಿಕ ಶಾಲೆ ಯಕ್ಕುಂಡಿ ಯಲ್ಲಿ ಸಮರ್ಥನಂ ಸಂಸ್ಥೆ ಬೆಳಗಾವಿ ಇವರು ಕೊಡಮಾಡಿದ ವಿಕಲಚೇತನ ಮಕ್ಕಳ ಕಲಿಕೋಪಕರಣಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group