- Advertisement -
2 025 ನೇ ಸಾಲಿನ ಕ್ರೀಡಾ ಚಟುವಟಿಕೆಗಳ ಪ್ರಾರಂಭದ ದ್ಯೋತಕವಾಗಿ ಅಥಣಿ ತಾಲೂಕಿನ ಮಲಾಬಾದ ಗ್ರಾಮದ ವಿಮೋಚನಾ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ಆವರಣದಲ್ಲಿ ಪರಿಸರವಾದಿ ಭಾಲಚಂದ್ರ ಜಾಬಶೆಟ್ಟಿ ಕ್ರೀಡಾ ಜ್ಯೋತಿ ಪ್ರಜ್ವಲನೆ ಹಾಗೂ ಗುಂಡು ಎಸೆತ ಮಾಡಿ ಉದ್ಘಾಟಿಸಿದರು.
ಕ್ರೀಡಾ ಜ್ಯೋತಿಯ ಕ್ರೀಡಾಂಗಣದ ಪ್ರದಕ್ಷಿಣೆಯೊಂದಿಗೆ ಕ್ರೀಡಾ ಚಟುವಟಿಕೆಗಳು ಪ್ರಾರಂಭಗೊಂಡವು.
ಮುಖ್ಯಾಧ್ಯಾಪಕ ಈರಣಗೌಡ ಪಾಟೀಲ, ವಿಜ್ಞಾನ ಶಿಕ್ಷಕ ಭೈರಪ್ಪ ಅವಟಿ , ಬಸವರಾಜ ಕಾಚಿ, ಇಂಗ್ಲೀಷ ಶಿಕ್ಷಕ ಮಂಜುನಾಥ, ಬಿ.ಟಿ.ಕಾಂಬಳೆ, ಕಲಗೊಂಡ ನಾಯಕ, ದೈಹಿಕ ಶಿಕ್ಷಕ ಮನೋಜ ಪಾಟೀಲ ಮುಂತಾದವರು ಉಪಸ್ಥಿತರಿದ್ದರು