ಜುಲೈ-2021ರ ಮೂಡಲಗಿ ವಲಯದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ವಿವರ

Must Read

ಮೂಡಲಗಿ: ಮೂಡಲಗಿ ವಲಯದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಡು ಮಕ್ಕಳು 3613, ಹೆಣ್ಣು 3136 ಒಟ್ಟು 6749 ಮಕ್ಕಳಲ್ಲಿ ಗಂಡು 3611, ಹೆಣ್ಣು 3132 ಒಟ್ಟು 6743 ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಬಿಇಓ ಅಜಿತ್ ಮೆನ್ನಿಕೇರಿ ತಿಳಿಸಿದ್ದಾರೆ.

ತಾಲೂಕಿನ ಫಲಿತಾಂಶ 99.9%ರಷ್ಷಾಗಿದ್ದು, ತಾಲೂಕಿನ ಐವರು 623 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ, ಆರು ಜನ 621 ದ್ವಿತೀಯ, ಓರ್ವ 620 ಅಂಕಗಳಿಸಿ ತೃತೀಯ ಸ್ಥಾನ ಗಳಿಸಿ ವಲಯದ ಫಲಿತಾಂಶ ಹೆಚ್ಚಳಕ್ಕೆ ಕಾರಣರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಮಂಡಳಿಯ ನಿಯಮಾನುಸಾರ ಫಲಿತಾಂಶದ ವಿಶ್ಲೇಷಣೆ ಶಾಲಾವಾರು ಮಾಹಿತಿ ಕಲೆ ಹಾಕಲಾಗಿದೆ. ವಲಯದ 78 ಶಾಲೆಗಳು ಎ ಗ್ರೇಡ್ ಪಡೆದುಕೊಂಡಿವೆ. 4483 ಮಕ್ಕಳು ಎ+, 1933 ಮಕ್ಕಳು ಎ, 312 ಮಕ್ಕಳು ಬಿ, 15 ಮಕ್ಕಳು ಸಿ ಗ್ರೇಡ್‍ನಲ್ಲಿ ಉತ್ತೀರ್ಣವಾಗಿವೆ. ವಲಯಕ್ಕೆ ಪ್ರಥಮ ಬಂದಿರುವ ಅಶ್ವಿನಿ ಕರಿತಮ್ಮ, ಸೃಷ್ಟಿ ಜೋಡಟ್ಟಿ, ಜ್ಞಾನೇಶ್ವರ ಮಲ್ಲಾಪೂರ, ಪ್ರಜ್ವಲ ಮಗದುಮ್, ಬಸವಂತ ಮಹಾಲಿಂಗಪೂರ ಅವರ ಖುದ್ದಾಗಿ ಮನೆ ಭೇಟಿ ನೀಡಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ನೀಡಿ ಸತ್ಕರಿಸಿರುವದಾಗಿ ತಿಳಿಸಿದ್ದಾರೆ.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group