spot_img
spot_img

ಕರ್ನಾಟಕ ರಾಜ್ಯ ಬರಹಗಾರರ ಸಂಘದಿಂದ ಕನ್ನಡ ನುಡಿ ವೈಭವ ರಾಜ್ಯಮಟ್ಟದ ಸಾಹಿತ್ಯ ಕಾರ್ಯಕ್ರಮ

Must Read

- Advertisement -

ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ಇವರ ವತಿಯಿಂದ ಕನ್ನಡ ನುಡಿ ವೈಭವ ೨೦೨೪ ರಾಜ್ಯಮಟ್ಟದ ಸಾಹಿತ್ಯ ಕಾರ್ಯಕ್ರಮವು ದಾವಣಗೆರೆಯ ಎ.ವಿ.ಕೆ. ರೋಡ್‌ನಲ್ಲಿರುವ ಜಿಲ್ಲಾ ಗುರುಭವನದಲ್ಲಿ ದಿ. ೨೫-೮-೨೦೨೪ರ ಭಾನುವಾರ ಬೆ. ೧೦ಕ್ಕೆ ನಡೆಯಲ್ಲಿದೆ.

ನಾಡಿನ ಹಿರಿಯ ಸಾಹಿತಿಗಳು ಗೊರೂರು ಅನಂತರಾಜು ಇವರ ಅಧ್ಯಕ್ಷತೆ ಯಲ್ಲಿ ನಡೆಯುವ ಕಾರ್ಯಕ್ರಮವನ್ನು ದಾವಣಗೆರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಕೊಟ್ರೇಶ್ ಜಿ. ಉದ್ಘಾಟಿಸುವರು.

ಮಧುನಾಯ್ಕ್ ಲಂಬಾಣಿ ಸಂಪಾದಕತ್ವದ ಹೂ ಮುಡಿದ ಜಡೆ ಕವನ ಸಂಕಲನ, ಭಾಗ್ಯ ನಾಗರಾಜ ಅವರ ಚಿರುನಕ್ಷತ್ರ ಕೃತಿಗಳನ್ನು ಗೋವಿಂದಸ್ವಾಮಿ, ಬಂಜಾರಾ ಭಾಷಾ ಅಕಾಡೆಮಿ ಅಧ್ಯಕ್ಷರು ಬೆಂಗಳೂರು ಬಿಡುಗಡೆ ಮಾಡುವರು.

- Advertisement -

ಮುಖ್ಯ ಅತಿಥಿಗಳಾಗಿ ಮಧು ನಾಯ್ಕ್ ಲಂಬಾಣಿ, ಸಂಸ್ಥಾಪಕ ಅಧ್ಯಕ್ಷರು, ಕ.ರಾ.ಬ.ಸಂಘ, ಹೂವಿನಹಡಗಲಿ, ಶ್ರೀಕಾಂತ್ ಆರ್. ಜಾಧವ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಬಂಜಾರ ಸಾಹಿತ್ಯ ವೇದಿಕೆ ಧಾರವಾಡ, ವೀರೇಶ್ ಎಸ್. ಒಡೆನಪುರ ಜಿಲ್ಲಾಧ್ಯಕ್ಷರು ಸರಕಾರಿ ನೌಕರರ ಸಂಘ ದಾವಣಗೆರೆ, ರಾಮಪ್ಪ ಟಿ, ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಾವಣಗೆರೆ, ಹೆಚ್.ಡಿ.ಜಗ್ಗಿನ್ ಸಾಹಿತಿಗಳು ಹೊಳಲು, ಉಮೇಶ್ ಚಿನ್ನಸಮುದ್ರ ಗಾಯಕರು ದಾವಣಗೆರೆ ಭಾಗವಹಿಸುವರು. ಚಂದ್ರಶೇಖರ ಹಡಪದ, ಜಿಲ್ಲಾಧ್ಯಕ್ಷರು, ಕ.ರಾ.ಬ.ಸಂಘ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಪ್ರಸ್ತಾವಿಕ ನುಡಿಗಳನ್ನಾಡುವರು.

ಇದೇ ಸಂದರ್ಭ ರಾಜ್ಯಾದ್ಯಂತ ಆಯ್ಕೆಯಾಗಿರುವ ೪೦ ಮಂದಿ ಶಿಕ್ಷಕರಿಗೆ ಶಿಕ್ಷಣ ಸೌರಭ ಪ್ರಶಸ್ತಿ, ೭೦ ಮಂದಿ ಸಾಹಿತಿ ಗಣ್ಯರಿಗೆ ಸಾಹಿತ್ಯ ಸೌರಭ ಪ್ರಶಸ್ತಿ, ಕಲಾಕ್ಷೇತ್ರದಿಂದ ೬ ಕಲಾವಿದರಿಗೆ ಕಲಾ ಸೌರಭ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಕರ್ನಾಟಕ ರಾಜ್ಯ ಬರಹಗಾರರ ಸಂಘದಿಂದ ರಾಜ್ಯಮಟ್ಟದಲ್ಲಿ ಏರ್ಪಡಿಸಿದ್ದ ಕವನ ಸ್ಫರ್ಧೆಯಲ್ಲಿ ೮೦ ಮಂದಿ ಕವಿ ಕವಯಿತ್ರಿಯರು ಭಾಗವಹಿಸಿದ್ದು ಇವರಲ್ಲಿ ೧೦ ಉತ್ತಮ ಕವಿತೆ ರಚನೆಕಾರರಿಗೆ ಕಾವ್ಯಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ರಾಜ್ಯಾಧ್ಯಕ್ಷರು ಮಧು ನಾಯ್ಕ್ ಲಂಬಾಣಿ ತಿಳಿಸಿದ್ದಾರೆ.

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group