ಸಿಂದಗಿ: ೧೮ ವರ್ಷಗಳ ಹಿಂದೆ ನಾನು ಈ ಶಾಲೆ ವಿದ್ಯಾರ್ಥಿಯಾಗಿದ್ದೆ. ಇಂದು ಸೈನ್ಯದಲ್ಲಿ ಮೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದಕ್ಕೆ ಇಲ್ಲಿನ ಗುರುಗಳ ಮಾರ್ಗದರ್ಶನ ನಮಗೆ ಸೈನ್ಯದಲ್ಲಿ ಅಧಿಕಾರಿಯಾಗುವಂತೆ ಮಾಡಿತು. ದೊಡ್ಡ ಕನಸುಗಳನ್ನ ಕಾಣುವುದರ ಜೊತೆಗೆ ಚೆನ್ನಾಗಿ ಅಧ್ಯಯನ ಮಾಡುವುದರ ಮೂಲಕ ಗುರಿ ಮುಟ್ಟಬೇಕು ಎಂದು ಮೇಜರ್ ವಿನೋದ್ ಚೌಹಾಣ್ ಹೇಳಿದರು.
ಪಟ್ಟಣದ ಬಂದಾಳ ರಸ್ತೆಯಲ್ಲಿರುವ ವಿವೇಕ್ ಇಂಟನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಣೆಯಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಪ್ರಾಮಾಣಿಕ ಪ್ರಯತ್ನ ಮತ್ತು ಪರಿಶ್ರಮ ಅಗತ್ಯವೆಂದು ಪ್ರಾಚಾರ್ಯ ಎ. ಆರ್.ಹೆಗ್ಗನ ದೊಡ್ಡಿ ಹೇಳಿದರು. ವಿವೇಕ್ ಇಂಟನ್ಯಾಷನಲ್ ಪಬ್ಲಿಕ್ ಸ್ಕೂಲ್ ನ್ ಪ್ರಾಚಾರ್ಯ ಶಾನಿ ಮೂಲ್ ರಾಬಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಡಳಿತ ಅಧಿಕಾರಿ ಟೆನಿ ರಾಬಿನ್ ಜಿಲ್ಲೆಯಲ್ಲ ಸಂಸ್ಥೆಯ ಅಧ್ಯಕ್ಷ ಶ್ರೀಮತಿ ನೀಲಮ್ಮ ಹೆಗ್ಗಣದೊಡ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಪ್ರಿಯದರ್ಶಿನಿ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕೆಲವು ಮಕ್ಕಳು ರಾಷÀ್ಟ್ರ ನಾಯಕರ ವೇಷ ಭೂಷಣಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿತ್ತು ವಿಶೇಷವಾಗಿತ್ತು