ಕನಕದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ.ಶಾಂತಣ್ಣ ಕಡಿವಾಳ ಸಾಧಕರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು..
ಶ್ರೇಯಾ ಜನಸೇವಾ ಫೌಂಡೇಶನ್ ಅಧ್ಯಕ್ಷರಾದ ವಿ. ಜಿ.ಪಾಟೀಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸುವರ್ಣ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಾ. ಜಿ.ಶಿವಣ್ಣ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಜನಸೇವಾ ಫೌಂಡೇಶನ್ ಅಧ್ಯಕ್ಷರಾದ ಬಾ. ಚಂದ್ರಶೇಖರ ಮೂಡಲಗೇರಿ ಎಲ್ಲರನ್ನೂ ಸ್ವಾಗತಿಸಿದರು. ವಾಣಿಜ್ಯ ತೆರಿಗೆ ಅಧಿಕಾರಿ ಆರ್.ಎಂ. ಹೂಗೇರಿ,ಮಂಜುನಾಥ ಯಡಳ್ಳಿ, ಸಮಾಜಸೇವಕಾರದ ಪೀರ್ ಸಾಬ್ ನದಾಫ್ ,ಅಪ್ನದೇಶ್ ಫೌಂಡೇಶನ್ ಕಾರ್ಯದರ್ಶಿ ಟಿ.ವೀಣಾ, ನ್ಯಾಯವಾದಿ ಶ್ರೀಮತಿ ಹೇಮಾ ಕ್ಷಿ ಕಿರೇಸೂರ, ಸಾಹಿತಿ ಸುರೇಶ ಕೊರೆಕೊಪ್ಪ, ಭದ್ರಾವತಿಯ ಸಮಾಜ ಸೇವಕ ಲಿಯೋನ್ ದೇವರಾಜು,ವಿಜಯಪುರದ ಸಮಾಜ ಸೇವಕಿ ಬಿ. ಎಸ್.ಪುಷ್ಪ,ಸಮಾಜಸೇವಕಿ ಮಂಜುಳಾ ಬೆಣ್ಣೆ ಮುಖ್ಯ ಅತಿಥಿಗಳಾಗಿದ್ದರು.ಕವಿ ಸಂಗೀತ ಮಠಪತಿ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸೇವೆಗೆ ತಮ್ಮ ಜೀವನವನ್ನೇ ಧಾರೆ ಎರೆದಿರುವ ಶ್ರೀಮತಿ ಲೂಸಿ ಸಾಲ್ದಾನ, ಕಳೆದ ನಲವತ್ತು ವರ್ಷಗಳಿಂದ ಕನ್ನಡ ನಾಡು ನುಡಿ ಸೇವೆಗೆ ತಮ್ಮ ಜೀವನವನ್ನೇ ಧಾರೆ ಎರೆದಿರುವ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ರಾದ ಸಾಹಿತಿ ಹಾಗೂ ಸಂಘಟಕರಾದ ಮೈಸೂರಿನ ಡಾ.ಭೇರ್ಯ ರಾಮಕುಮಾರ್ ,
ಮಂಡ್ಯದ ಸಾಂಪ್ರದಾಯಿಕ ಜಲತಜ್ಞ ನವಿಲುಮಾರನಹಳ್ಳಿ ರಾಮೇಗೌಡ ಸೇರಿದಂತೆ ಹಲವು ಸಾಧಕರನ್ನು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಹಲವು ಕನ್ನಡ ಗಾಯಕರು ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ಎಲ್ಲರ ಮನ ಸೆಳೆಯಿತು.