ಸಿಂದಗಿ: 1988ರಲ್ಲಿ ದೇವದಾಸಿ ಪದ್ಧತಿ ನಿಷೇದವಾಗಿದ್ದರೂ ಕೂಡಾ ಕಿವುಡ, ಕುರುಡ ಸರಕಾರಗಳು ಅವರಿಗೆ ಮೂಲಭೂತ ಸೌಲಭ್ಯಗಳನ್ನು ಕೊಡುವಲ್ಲಿ ವಿಫಲವಾಗಿದೆ ಎಂದು ಚಿತ್ರನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ ದೂರಿದರು.
ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ 50 ಸಾವಿರ ದೇವದಾಸಿ ತಾಯಂದಿರಿದ್ದಾರೆ ಅವರನ್ನು ಸರ್ವೆ ಮಾಡಿ ಅವರಿಗೆ ಸೂರು ನೀಡಿ ಪ್ರತಿಯೊಬ್ಬರಿಗೆ ರೂ. 5ಸಾವಿರ ಮಾಸಾಶನ ನೀಡುವುದರೊಂದಿಗೆ ಅವರ ಮಕ್ಕಳಿಗೆ ನೌಕರಿಯಲ್ಲಿ ಮೀಸಲಾತಿ ದೊರಕಿಸಿಕೊಟ್ಟಿಲ್ಲ. ಅಲ್ಲದೆ 2018ರಲ್ಲಿ ಪುನರ್‍ವಸತಿ ಕಾಯ್ದೆ ಜಾರಿಯಾಗಿದ್ದರು ಕೂಡಾ ಸರಕಾರದ ಕಾಳಜಿ ಮೈಕ್ ನಿಂದ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಶ್ರೀಮಂತರ ಡಿಜಿಟಲ್‍ನಿಂದ ನ್ಯಾಯ ಸಿಗದು ಬ್ರಾಹ್ಮಣರ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಇಂತಹ ಅನಿಷ್ಠ ಪದ್ದತಿ ಜಾರಿಯಾಗಿತ್ತು ಅದನ್ನು ನಿರ್ಮೂಲನೆ ಮಾಡುವಲ್ಲಿ ಸಾಕಷ್ಟು ದೇವದಾಸಿ ತಾಯಂದಿರಿಗೆ ನ್ಯಾಯ ಕೊಡಿಸುವದಾಗಿ ಹೇಳಿದ ಅವರು, ಗುಡಿಸಲು ಮುಕ್ತ ಕರ್ನಾಟಕ, ದೇವದಾಸಿ ನಿರ್ಮೂಲನೆಯಲ್ಲಿ ಕರ್ನಾಟಕ ಮುಂದಿದೆ. ಕಾರಣ ರಾಜ್ಯದ 10 ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ಹಾಕಿಕೊಂಡು ನ್ಯಾಯ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ದಸಂಸ ಜಿಲ್ಲಾ ಸಂ. ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ಸರಕಾರದಿಂದ ಹರಕೆಯನ್ನು ಕಡಿಮೆ ಮಾಡಿ ಮೂಢನಂಬಿಕೆಯಿಂದ ಹೊರಬಂದು ನೂರೆಂಟು ದೇವರುಗಳನ್ನು ನೆನೆದು ಸರಕಾರ ನೀಡುವ ಬಿಡಿಗಾಸಿಗೆ ಕೈ ಚಾಚದೇ ಡಾ. ಅಂಬೇಡ್ಕರರನ್ನು ನೆನೆದು ಸ್ವಾಭಿಮಾನದ ಬದುಕು ಸಾಗಿಸಿದರೆ ಸರಕಾರಕ್ಕೆ ನೀವೇ ದೇಣಿಗೆ ಕೊಡಬಹುದು. ಮಕ್ಕಳನ್ನು ಒಳ್ಳೆಯ ಶಿಕ್ಷಣ ಕೊಡಿಸಿ ಅವರಿಂದ ಹಸನಾದ ಜೀವನ ಸಾಗಿಸಿ, ಮನುಷ್ಯನಿಗೆ ಕಾಡುವ ದೇವರು ದೇವರೇ ಅಲ್ಲ. ಮನುಷ್ಯ ಕುಲಕ್ಕೆ ಒಳ್ಳೆಯದಾಗುವ ಪೂಜೆಗೆ ಅಣಿಯಾಗಿ ಮೂಡನಂಬಿಕೆಗಳಿಂದ ಹೊರಬನ್ನಿ ಎಂದು ಕರೆ ಕೊಟ್ಟರು.
ಈ ಪತ್ರಿಕಾಗೋಷ್ಠಿಯಲ್ಲಿ ಡಾ. ದಸ್ತಗೀರ ಮುಲ್ಲಾ, ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾತ ಸಿಂಗೆ, ಫಾದರ ಅಲ್ವೀನ್ ಡಿ.ಸೋಜಾ, ಸಿಸ್ಟರ ಸಿಂತಿಯಾ ಡಿ.ಮೆಲ್ಲೋ ಇದ್ದರು.