spot_img
spot_img

ತಹಶೀಲ್ದಾರರ ಮೇಲೆಯೇ ಹಲ್ಲೆಗೆ ಇಳಿದ ವಕೀಲೆ

Must Read

- Advertisement -

ಸರ್ಕಾರಿ ಜಾಗ ಅತಿಕ್ರಮಣ ಪ್ರಶ್ನೆ ಮಾಡಿದ್ದಕ್ಕೆ ಕಲ್ಲೆಸೆಯಲು ಬಂದ ವಕೀಲೆಯ ಪತಿ

ಬೀದರ – ಅತಿಕ್ರಮಣ ಮಾಡಿದ್ದ ೨ ಎಕರೆ ಜಾಗದ ಬಗ್ಗೆ ಪ್ರಶ್ನಿಸಲು ಹೋದ ಭಾಲ್ಕಿ ತಹಶಿಲ್ದಾರರ ಮೇಲೆಯೇ ಕಲ್ಲು ಎತ್ತಿ ಹಾಕಲು ಬಂದ ವಕೀಲೆ  ಧನಲಕ್ಷ್ಮಿ ರಾಜಕುಮಾರ ಬಲತೆ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ

ಬಸವಣ್ಣನವರ ನಾಡು ಬೀದರ ಜಿಲ್ಲೆ ಭಾಲ್ಕಿ ಯಲ್ಲಿ ವಕೀಲೆಯೊಬ್ಬರ ರುದ್ರ ರಮಣೀಯ ಅವತಾರ ನೋಡಿ ಭಾಲ್ಕಿ ಜನರು ಬೆಚ್ಚಿ ಬೀಳುವಂತಾಗಿದ್ದು ಈ ಘಟನೆ ನಡೆದದ್ದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತವರೂರಿನಲ್ಲಿ. ಈ ಘಟನೆಯಿಂದ ಸಮಾಜಕ್ಕೆ ನ್ಯಾಯ ಒದಗಿಸುವ ವಕೀಲರು ತಪ್ಪು ದಾರಿಗೆ ಇಳಿದರೆ ಬಡ ಸಾಮಾನ್ಯರ ಪಾಡು ಏನು ಗತಿ ಎಂದು ಪ್ರಶ್ನಿಸುವಂತಾಗಿದೆ.

- Advertisement -

ಧನಲಕ್ಷ್ಮಿ ರಾಜಕುಮಾರ ಬಲತೆಯವರ ಗಂಡ  ಕೈಯಲ್ಲಿ ಕಲ್ಲು ಹಿಡಿದು ಓಡಿ ಬರುವ ದೃಶ್ಯ ನೋಡಿದರೆ ಭಾಲ್ಕಿ ಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಐವತ್ತಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಇದ್ದರು ಕಲ್ಲು ಎತ್ತಿಕೊಂಡು ಒಬ್ಬ ದಂಡಾಧಿಕಾರಿ ಮೇಲೆ ಹಾಕಿದ್ದು ನೋಡಿದರೆ ಭಾಲ್ಕಿ ಎರಡನೇ ಬಿಹಾರ ರಾಜ್ಯವಾಗುತ್ತದೆ ಎಂಬುದು ಭಾಲ್ಕಿ ಜನರ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದಕ್ಕೆಲ್ಲ ಹಿನ್ನೆಲೆ ಏನೆಂದರೆ ಸರ್ಕಾರದ ಎರಡು ಎಕರೆ ಒಂದು ಗುಂಟೆ ಜಾಗ  ತಹಶೀಲ್ದಾರ್‌ ಕಚೇರಿಯ ಸರ್ಕಾರಿ ಜಾಗ ಇದೆ.  ಅದನ್ನು ಧನಲಕ್ಷ್ಮಿ ಹಾಗುಯ ಅವರ ಪತಿ ಅತಿಕ್ರಮಣ ಮಾಡಿಕೊಂಡಿದ್ದರು. ಜಾಗದ ತೆರವಿಗೆ ಪೊಲೀಸರ ರಕ್ಷಣೆ ಕೋರಿದ್ದರು. ಪೊಲೀಸರ ನಿಯುಕ್ತಿ ಮಾಡಲಾಗಿತ್ತು. ವಕೀಲೆ ಧನಲಕ್ಷ್ಮಿ ಹಾಗೂ ಅವರ ಪತಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಹಶೀಲ್ದಾರ್‌ ದೂರು ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ. ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿಲ್ಲ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಇತ್ತ ಧನಲಕ್ಷ್ಮಿ ರಾಜಕುಮಾರ ಬಲತೆ ಬೆನ್ನಿಗೆ ನಿಂತಿದ್ದು ಭಾಲ್ಕಿ ತಾಲ್ಲೂಕಿನ ವಕೀಲರು ಅಂಬೇಡ್ಕರ್ ವೃತ್ತದಲ್ಲಿ  ಪ್ರತಿಭಟನೆ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group