ಬೆಳಗಾವಿ – ಹಿಂದೂ ಸಾಧು ಸಂತರನ್ನು ಅವಹೇಳನ ಮಾಡುವಂಥ ಪೋಸ್ಟರ್ ಹಾಕಿಕೊಂಡ ಬೆಳಗಾವಿಯ ನಿಯಾಜ್ ಹೊಟೇಲ್ ನ ವಿರುದ್ಧ ಭಜರಂಗ ದಳ ಹಾಗೂ ವಿಶ್ವ ಹಿಂದೂ ಕಾರ್ಯಕರ್ತರು ಸಿಡಿದೆದ್ದಿದ್ದು ತಾಕತ್ತಿದ್ದರೆ ತಮ್ಮ ಧರ್ಮಗುರುಗಳ ವಿರುದ್ಧ ಒಂದೇ ಒಂದು ಇಂಥ ಪೋಸ್ಟ್ ಹಾಕಿ ಬದುಕಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ನಿಯಾಜ್ ಹೊಟೇಲ್ ಮಾಲೀಕನ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾ ಮುಗ್ಗಾ ಜಾಡಿಸಿರುವ ಹಿಂದೂ ಪರ ಸಂಘಟನೆಗಳು ಹಾಗೂ ವ್ಯಕ್ತಿಗಳು ಹಿಂದೂಗಳು ಮಾಂಸಾಹಾರ ಸೇವನೆ ಮಾಡುತ್ತಾರೆ ಆದರೆ ನಿಯಾಜ್ ಹೊಟೇಲಿಗೆ ಇನ್ನು ಮೇಲೆ ಹೋಗಬಾರದು ಎಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿಯ ನಿಯಾಜ್ ಹೊಟೇಲ್ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಹಿಂದೂ ಧರ್ಮ ಹಾಗೂ ಸಂತರ ಅವಹೇಳನ ಮಾಡುವಂಥ ಜಾಹೀರಾತು ಹಾಕಿದ್ದನ್ನು ಗಮನಿಸಿದ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ತಕ್ಷಣವೇ ಡಿಸಿಪಿ ಅಮಟೆಯವರಿಗೆ ದೂರು ನೀಡಿದರು.
ನಂತರ ಹಿಂದೂಗಳ ಆಕ್ರೋಶ ಹೆಚ್ಚಾಗುತ್ತಿದ್ದಂತೆ ನಿಯಾಜ್ ಹೊಟೇಲಿನ ಬಾಗಿಲು ಮುಚ್ಚಲಾಗಿದೆ.
ಈ ಘಟನೆಯನ್ನು ಖಂಡಿಸಿರುವ ಬಿಜೆಪಿ ಮಹಿಳಾ ಮೋರ್ಚಾದ ಡಾ. ಸೋನಾಲಿ ಸರ್ನೋಬತ್ ಅವರು, ನಮಗೆ ಗುರುಗಳ ಬಗ್ಗೆ ಹೆಮ್ಮೆಯಿದೆ. ನಿಯಾಜ್ ಅನ್ನು ಬಹಿಷ್ಕರಿಸಿರಿ, ಇದು ನಾಚಿಕೆಗೇಡು. ಹೊಟೇಲಿನ ಮಾಲೀಕ ಬೆಳಗಾವಿ ಹಾಗೂ ಇತರೆ ಕಡೆಗೆ ಇರುವ ಸಾಧು ಸಂತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದಿದ್ದಾರೆ.
ಸದ್ಯ ನಿಯಾಜ್ ಹೊಟೇಲು ಹಾಗೂ ಅದರ ಮಾಲೀಕನಿಗೆ ಪೊಲೀಸ್ ರಕ್ಷಣೆ ಕೊಡಲಾಗಿದೆ.
ಸುಮ್ಮ ಸುಮ್ಮನೆ ಧಾರ್ಮಿಕ ಸೂಕ್ಷ್ಮ ವಿಷಯಗಳನ್ನು ಕೆದಕಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ನಿಯಾಜ್ ಹೊಟೇಲ್ ಮಾಲೀಕರಂಥವರ ಮೇಲೆ ರಾಜ್ಯ ಗೃಹ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಾಗಿದೆ.