ಪೊಲೀಸ್ ಇಲಾಖೆ ಶಾಸಕರ ಕೈಗೊಂಬೆಯಾಗಿದೆ – ರಾಜಶೇಖರ ಪಾಟೀಲ

Must Read

ಬೀದರ – ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣದ ಇತಿಹಾಸ ಪುಟ ತಿರುವಿ ನೋಡಿದರೆ ಬಸವಣ್ಣನವರ ಶಾಪ ಬಸವಕಲ್ಯಾಣಕ್ಕೆ ತಟ್ಟಿದೆಯೇನೋ ಎಂದು ಹೇಳಬಹುದು. ಯಾಕೆಂದರೆ ಆ ದೇವರು ನಡೆದಾಡಿದ ನೆಲದಲ್ಲಿ ಮಟಕಾ ದಂಧೆ ವ್ಯಾಪಕವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ದೇಶದಲ್ಲಿ ಎಲ್ಲಿಯೂ ನಡೆಯದ ಮಟಕಾ ದಂಧೆ ಬಸವಕಲ್ಯಾಣ ನಲ್ಲಿ ನಡೆಯುತ್ತದೆ ಎಂದು ಹುಮನಾಬಾದ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಆರೋಪ ಮಾಡಿದ್ದು ಶಾಸಕ ಶರಣು ಸಲಗಾರ ಅವರು, ನೀವೇನೇ ಮಾಡ್ಕೊಳ್ಳಿ ನಮಗೆ ಹಣ ತಂದು ಕೊಡಿ ಎಂದು ಪೊಲೀಸ್ ಇಲಾಖೆಗೆ ಹೇಳಿದ್ದಾರೆಂದು ನೇರವಾಗಿ ಗಂಭೀರ ಆರೋಪ ಮಾಡಿದ್ದಾರೆ.

ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪಾಟೀಲ ಅವರು, ಬೀದರ್ ಜಿಲ್ಲೆಯ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದ್ದು ರಾಜ್ಯದ ಸರ್ಕಾರದ ಕೈಗೊಂಬೆ ಆಗಿ ಕೆಲಸ ಮಾಡುತ್ತಿದೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ ಇಲಾಖೆ ವಿಫಲವಾಗಿದೆ ಅದ ಬಸವಕಲ್ಯಾಣ ಶಾಸಕ ಶರಣು ಸಲಗರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪಾಟೀಲ ಆರೋಪಿಸಿದರು.

ಶರಣ ನಾಡಿನಲ್ಲಿ ಶಾಸಕ ಸಲಗರ ಅವರು ಪೊಲೀಸರ ಮೇಲೆ ಒತ್ತಡ ಹಾಕಿ ಮಟಕಾ ದಂಧೆ ನಡೆಸಿ ನನಗೆ ಹಣವನ್ನು ತಂದು ಕೊಡಬೇಕು ಎಂದು ಒತ್ತಡ ಹಾಕುತ್ತಾರೆ ಎಂಬುದಾಗಿ ಸ್ವತಃ ಈ ಹೇಳಿಕೆ ನನ್ನ ಮುಂದೆ ಹುಮನಾಬಾದ ಡಿವೈಎಸ್ ಪಿ ಮತ್ತು ಬಸವಕಲ್ಯಾಣ ಸಿ ಪಿ ಐ ಅಳಲು ತೊಡಗಿಕೊಂಡರು ಎಂದು ರಾಜಶೇಖರ ಪಾಟೀಲ ಮಾಧ್ಯಮದ ಮುಂದೆ ಹೇಳಿಕೊಂಡರು


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

  • ಮಟ್ಟಕ್ಕ ದಂದೆ ಬಸವಕಲ್ಯಾಣ ನಲ್ಲಿ ನಡೆಯುತ್ತದೆ ಇನ್ನೂ ಇಲ್ಲ್ ಲೀಗಲ್ ಕೆಲಸ ಬಸವಕಲ್ಯಾಣ ನಡೆಯುತ್ತದೆ ಆದರೆ ಪೊಲೀಸ ಇಲಾಖೆ ಶಾಸಕರ ಕೈಗೊಂಬೆ ಆಗಿ ಕೆಲಸ ಮಾಡುತ್ತಾರೆ ಎಂದ ರಾಜಶೇಖರ ಪಾಟೀಲ.
  • ಮುಂದೆ ನೋಡಬೇಕು ಪೊಲೀಸ್ ಇಲಾಖೆ ಮಟ್ಟಕ್ಕ ದಂದೆ ಬಂದು ಮಾಡುತ್ತಾರ ಅಥವಾ ಶಾಸಕರ ಕೈಗೊಂಬೆ ಆಗಿ ಕೆಲಸ ಮಟ್ಟಕ್ಕ ದಂದೆ ಮುಂದೆ ಆವರಿಸಿತ್ತಾರ ಕಾದು ನೋಡಬೇಕು.
Latest News

ವಿಮರ್ಶೆಯಲ್ಲಿ ಸ್ತ್ರೀ ಸಾಹಿತ್ಯಕ್ಕೆ ಅನ್ಯಾಯ ; ವಿಚಾರ ಗೋಷ್ಠಿ,

ವಿಮರ್ಶೆಯಲ್ಲಿ ಸ್ತ್ರೀ ಸಾಹಿತ್ಯಕ್ಕೆ ಅನ್ಯಾಯ ಸಂವಾದ ಹಾಗೂ ಸ್ತ್ರೀಸಂವೇದನಗಳ ಬಗ್ಗೆ ಕವಿಗೋಷ್ಠಿ ಕಾರ್ಯಕ್ರವನ್ನು ಹಾಸನ ಜಿಲ್ಲಾ ಬರಹಗಾರರ ಸಂಘದ ವತಿಯಿಂದ ಡಿ. 07 - ಭಾನುವಾರ...

More Articles Like This

error: Content is protected !!
Join WhatsApp Group