spot_img
spot_img

ಇನ್ನೂ ಸಿಗದ ಪರಿಹಾರ ; ಬುತ್ತಿ ಗಂಟುಗಳೊಂದಿಗೆ ನೆರೆ ಸಂತ್ರಸ್ತರು ಬೆಳಗಾವಿಗೆ

Must Read

spot_img
- Advertisement -

“ಉಸ್ತುವಾರಿ ಸಚಿವರು ಜವಾಬ್ದಾರಿಯಿಂದ ಮಾತನಾಡಲಿ”

– ಗಡಾದ

ಮೂಡಲಗಿ – ಘಟಪ್ರಭಾ ನದಿಯ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಸುಮಾರು ಎರಡು ವರ್ಷಗಳು ಗತಿಸಿದ್ದರೂ ಕೂಡಾ ಸರಕಾರದಿಂದ ಮನೆ ಪರಿಹಾರ ಹಣ ದೊರೆಯದೇ ಇರುವುದರಿಂದ ಅರಭಾವಿ ಕ್ಷೇತ್ರದ ಅನೇಕ

- Advertisement -

ಗ್ರಾಮಗಳ ಸಾಕಷ್ಟು ಕುಟುಂಬಗಳು ಇನ್ನೂ ಸಹ ಗುಡಿ ಗುಂಡಾರ, ಸಾರ್ವಜನಿಕ ಕಟ್ಟಡಗಳಲ್ಲಿ ವಾಸ ಮಾಡುತ್ತಿದ್ದಾರೆ.ಆದರೆ ಸರ್ಕಾರ ಕುರುಡಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.

ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಸಾಕಷ್ಟು ರೈತ ಕುಟುಂಬಗಳಿಗೆ ಕೂಡ ಎರಡು ವರ್ಷಗಳಾದರೂ ಬೆಳೆ ಪರಿಹಾರದ ಹಣ ಬಂದಿರುವುದಿಲ್ಲ. ಮನೆ ಕಳೆದುಕೊಂಡಿರುವ ಕೆಲವು ಕುಟುಂಬಗಳು ಇನ್ನೂ ಗುಡಿ ಗುಂಡಾರಗಳಲ್ಲಿ, ವಾಚನಾಲಯಗಳಲ್ಲಿ, ಅಂಗನವಾಡಿ ಶಾಲೆಗಳಲ್ಲಿ ವಾಸಮಾಡುತ್ತಿದ್ದಾರೆ ಅವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದರು.

- Advertisement -

ಆದ್ದರಿಂದ ನೆರೆ ಸಂತ್ರಸ್ತರ ಹಲವಾರು ಬೇಡಿಕೆಗಳ ಸಲುವಾಗಿ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲು ಅರಭಾವಿ ಕ್ಷೇತ್ರದ

ನೆರೆ ಸಂತ್ರಸ್ತ ಕುಟುಂಬಗಳೊಂದಿಗೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಬುಧವಾರ ದಿನಾಂಕ 15 ರಂದು ಧರಣಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಪೂರ್ಣ ಪ್ರಮಾಣದಲ್ಲಿ ಮನೆಗಳು ಬಿದ್ದಿದ್ದರೂ ಕೂಡಾ ಸ್ಥಳೀಯ ರಾಜಕಾರಣದಿಂದ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾಕಷ್ಟು ಕುಟುಂಬಗಳಿಗೆ ಪರಿಹಾರ ಬಂದಿರುವುದಿಲ್ಲ, ಪೂರ್ಣ ಪ್ರಮಾಣದಲ್ಲಿ ಬಿದ್ದಿರುವ ಮನೆಗಳನ್ನು “ಸಿ” ವರ್ಗದಲ್ಲಿ ಅಳವಡಿಸಲಾಗಿದೆ. ಕೆಲವರು ತಮಗೆ ಮಂಜೂರಾಗಿರುವ ಮನೆಗಳನ್ನು  ಅವರ ಹೆಸರಿನಿಂದಲೇ ಇರುವ ಬೇರೆ ಸುರಕ್ಷಿತ ಸ್ಥಳಗಳಲ್ಲಿ ಅಥವಾ  ಅವರ ಸ್ವಂತ ಜಮೀನುಗಳಲ್ಲಿ ನಿರ್ಮಿಸಿಕೊಳ್ಳಲು ಮುಂದಾಗುತ್ತಿದ್ದು  ಅಧಿಕಾರಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ ಅದರಂತೆ ತಂತ್ರಾಂಶಗಳ ಲೋಪದೋಷಗಳಿಂದಾಗಿ ಸಾಕಷ್ಟು ಕುಟುಂಬಗಳಿಗೆ ಪರಿಹಾರದ ಕನಸು ಮರೀಚಿಕೆಯಾಗಿರುವದು, ಕೆಲ ಕುಟುಂಬಗಳಿಗೆ ರೂ. 05 ಲಕ್ಷ ಹಣ ಮಂಜೂರಾತಿ ಆದೇಶವಾಗಿದ್ದರೂ ಇದುವರೆಗೂ ಬಂದಿರುವದು ಕೇವಲ 01 ಲಕ್ಷ ರೂ.ಗಳು ಮಾತ್ರ. ಈ ಹಣ ಯಾವುದಕ್ಕೆ ಸಾಕಾಗುತ್ತದೆ ಎಂದು ಪ್ರಶ್ನಿಸಿದ ಗಡಾದ ಅವರು, ನದಿ ತೀರದಲ್ಲಿರುವ ಸಾಕಷ್ಟು ಗ್ರಾಮಗಳು ಪ್ರತಿ ವರ್ಷ ನದಿಯ ಪ್ರವಾಹಕ್ಕೆ ತುತ್ತಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿರುವುದರಿಂದ ಈ ಗ್ರಾಮಗಳನ್ನು ಸ್ಥಳಾಂತರಿಸಿ ಕುಟುಂಬಗಳಿಗೆ ಸರಕಾರದ ಯೋಜನೆಗಳಲ್ಲಿ ಮನೆ ನಿರ್ಮಿಸಿ ಕೊಡುವಂತೆಯೂ ಸರಕಾರವನ್ನು ಒತ್ತಾಯಿಸಲಾಗುವುದು, ನದಿ ತೀರದಲ್ಲಿರುವ ಎಲ್ಲ ಗ್ರಾಮಗಳನ್ನು ಶಾಶ್ವತ  ಮುಳುಗಡೆ ಪ್ರದೇಶಗಳೆಂದು ಸರಕಾರದಿಂದ ಅಧಿಕೃತವಾಗಿ ಘೋಷಣೆ ಮಾಡುವಂತೆಯೂ ಸರಕಾರಕ್ಕೆ ಆಗ್ರಹಿಸಲಾಗುವದು ಈ ಕುರಿತು ಈಗಾಗಲೇ ಮಾನ್ಯ ಕಂದಾಯ ಸಚಿವರಿಗೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಕೂಡ ಬರೆಯಲಾಗಿದೆ.

ಸಂತ್ರಸ್ತ ಕುಟುಂಬಗಳು ತಮ್ಮ ಮನೆಗಳಿಂದಲೇ ಬುತ್ತಿ ಗಂಟುಗಳು ಕಟ್ಟಿಕೊಂಡು ಬರುವುದರ ಮೂಲಕ ದಿನಾಂಕ : 15/09/2021 ರಂದು ನಡೆಯುತ್ತಿರುವ ಈ ಪ್ರತಿಭಟನೆಯು ವಿನೂತನ ರೀತಿಯದ್ದಾಗಿರುತ್ತದೆ ಎಂದರು.

ಉಸ್ತುವಾರಿ ಸಚಿವರು ಅರಭಾವಿ ಕ್ಷೇತ್ರಕ್ಕೆ ಬಂದಿದ್ದು ಯಾವಾಗ ?

ಇತ್ತೀಚೆಗೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲಾಗಿದೆ ಎಂದು ಘೋಷಣೆ ಮಾಡಿದ್ದು ಅವರು ಅರಭಾವಿ ಕ್ಷೇತ್ರದ ಯಾವ ಹಳ್ಳಿಗಳಿಗೆ ಭೇಟಿ ಕೊಟ್ಟು ಯಾರಿಗೆ ಎಷ್ಟು ಪರಿಹಾರ ನೀಡಿದ್ದಾರೆಂಬುದನ್ನು ಹೇಳಬೇಕು ಎಂದು ಭೀಮಪ್ಪ ಗಡಾದ ಸವಾಲೆಸೆದರು.

ಉಸ್ತುವಾರಿ ಸಚಿವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ೨೦೧೯ ರ ನೆರೆ ಪರಿಹಾರ ಇನ್ನೂ ಸಿಕ್ಕಿಲ್ಲ. ಪೀಡಿತ ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ. ಆದರೂ ಇವರು ಪರಿಹಾರ ಕೊಡಲಾಗಿದೆ ಎಂದು ಹೇಳಿದ್ದು ಅಚ್ಚರಿ ಮೂಡಿಸಿದೆ. ಯಾವಾಗ ಸಚಿವರು ಅರಭಾವಿ ಕ್ಷೇತ್ರದ ಹಳ್ಳಿಗಳಿಗೆ ಭೇಟಿಕೊಟ್ಟಿದ್ದರೆಂಬುದನ್ನು ಅವರೇ ಹೇಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಚನ್ನಪ್ಪ ಅಥಣಿ ಮಾತನಾಡಿ, ಶಾಸಕರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಹೀಗಾಗಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಪ್ರವಾಹದಲ್ಲಿ ಸಂಕಷ್ಟಕ್ಕೊಳಗಾಗಿರುವ ಕುಟುಂಬಕ್ಕೆ ಮನೆ ಕೊಡದೆ ಅನುಕೂಲಸ್ಥರಿಗೆ ಮನೆಗಳನ್ನು ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯ ಈರಣ್ಣ ಕೊಣ್ಣೂರ, ಮಲ್ಲಪ್ಪ ಮದಗುಣಕಿ, ಮಲ್ಲಪ್ಪ ತೇರದಾಳ, ರವಿ ಮಹಾಲಿಂಗಪೂರ,ಸಂಗಪ್ಪ ಕಳ್ಳಿಗುದ್ದಿ, ಶ್ರೀಶೈಲ ಜೈನಾಪೂರ, ಲಿಂಗರಾಜ ಅಂಗಡಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಧನುರ್ಮಾಸ ಪ್ರಯುಕ್ತ ದಿ.೪ ರಂದು ‘ಶ್ರೀ ಪವಮಾನ ಹೋಮ’

ಮೂಡಲಗಿ : ಧನುರ್ಮಾಸ ಪ್ರಯುಕ್ತ ಪಟ್ಟಣದ ಪೊಲೀಸ್ ಕ್ವಾರ್ಟರ್ ಹತ್ತಿರ ಇರುವ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಇದೇ ಶನಿವಾರ ದಿ.೪ ರಂದು ಬೆಳಗ್ಗೆ ೭ ಗಂಟೆಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group