ಮೂಡಲಗಿ – ಕಲಾವಿದರನ್ನು, ಬರಹಗಾರರನ್ನು, ವಚನಕಾರರನ್ನು ಈ ಜಗತ್ತು ಯಾವತ್ತೂ ಸ್ಮರಿಸುತ್ತ ಬಂದಿದೆ ಎಂದು ಬಿಇಓ ಅಜಿತ ಮನ್ನಿಕೇರಿ ಹೇಳಿದರು.
ಶುಭೋದಯ ಸ್ವಾಭಿಮಾನಿ ಕರ್ನಾಟಕ ಸಂರಕ್ಷಣಾ ವೇದಿಕೆಯ ಆಶ್ರಯದಲ್ಲಿ ಸ್ಥಳೀಯ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ನಡೆದ ರಂಗೋಲಿ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರೂ ಯಾವುದಾದರೊಂದು ಪ್ರತಿಭೆಯನ್ನು ಗಳಿಸಿರುತ್ತಾರೆ. ಪ್ರತಿಭೆಗೆ ಯಾವಾಗಲೂ ಬೆಲೆ ಇದೆ ಆದ್ದರಿಂದ ಎಲ್ಲರು ಒಂದು ಕಲೆಯನ್ನು ಬೆಳೆಸಿಕೊಳ್ಳಬೇಕು ಅದರಿಂದ ಸಿಗುವ ಗೌರವ ಬೆಲೆ ಕಟ್ಟಲಾಗದಂಥದ್ದು. ರಂಗೋಲಿಯಲ್ಲಿ ತಾವು ತೋರಿದ ಪ್ರತಿಭೆ ಅನನ್ಯವಾದದ್ದು ಎಂದರು.
ಅತಿಥಿಯಾಗಿ ಆಗಮಿಸಿದ್ದ ಸಾಹಿತಿ ಮಹಾದೇವ ಜಿಡ್ಡಿಮನಿ ಮಾತನಾಡಿ, ಕಲೆಯಲ್ಲಿ ನಾವು ನಮ್ಮನ್ನು ಅರ್ಪಣಾಭಾವದಿಂದ ತೊಡಗಿಸಿಕೊಳ್ಳಬೇಕು. ಅದು ಬರಹವಾಗಲಿ, ಸಂಗೀತವಾಗಲಿ, ಚಿತ್ರಕಲೆಯಾಗಲಿ ಎಲ್ಲದರಲ್ಲೂ ನಾವು ಪರಮಾವಧಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅಂದಾಗ ಯಶಸ್ಸು ಸಿಗುತ್ತದೆ ಎಂದರು.
ಖ್ಯಾತ ಜಾನಪದ ಗಾಯಕ ಶಬ್ಬೀರ ಡಾಂಗೆ, ಸಾಹಿತಿ ಸಿದ್ರಾಮ ದ್ಯಾಗಾನಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಶುಭೋದಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸನ್ಮಾನ ಮಾಡಲಾಯಿತು.
ವೇದಿಕೆಯ ಮೇಲೆ ಡಾ.ಸಂಜಯ ಸಿಂಧಿಹಟ್ಟಿ, ಲಕ್ಷ್ಮಣ ಅಡಿಹುಡಿ, ಈರಪ್ಪ ಢವಳೇಶ್ವರ, ಗಜಾನನ ಖಾನಾಪೂರ, ಜಯಾನಂದ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಸುಭಾಸ ಕಡಾಡಿ ಸ್ವಾಗತಿಸಿದರು, ಉಮೇಶ ಬೆಳಕೂಡ ನಿರೂಪಿಸಿ ವಂದಿಸಿದರು.