ವಿಮರ್ಶೆಯಲ್ಲಿ ಸ್ತ್ರೀ ಸಾಹಿತ್ಯಕ್ಕೆ ಅನ್ಯಾಯ ಸಂವಾದ ಹಾಗೂ ಸ್ತ್ರೀಸಂವೇದನಗಳ ಬಗ್ಗೆ ಕವಿಗೋಷ್ಠಿ ಕಾರ್ಯಕ್ರವನ್ನು ಹಾಸನ ಜಿಲ್ಲಾ ಬರಹಗಾರರ ಸಂಘದ ವತಿಯಿಂದ ಡಿ. 07 – ಭಾನುವಾರ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಧ್ವಜಾರೋಹಣ ಹಾಗೂ ಬರಹಗಾರರ ಸಂಘದ ಧ್ವಜಾರೋಹಣವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಕೆಂಚೇಗೌಡರು ಚನ್ನರಾಯಪಟ್ಟಣ ಮೇಟಿಕೆರೆ ಹಿರಿಯಣ್ಣರವರು ನೆರವೇರಿಸುವರು
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತಿ ಕುಲಪತಿಗಳು ಹಂಪಿ ವಿಶ್ವವಿದ್ಯಾಲಯ ಮಲ್ಲಿಕಾ ಘಂಟಿ ರವರು
ನೆರವೇರಿಸಲ್ಲಿದ್ದಾರೆ. ಸಾಹಿತಿಗಳು ಧಾರವಾಡ ಶ್ರೀಮತಿ ಹೇಮಾ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು
ಕಾರ್ಯಕ್ರಮದಲ್ಲಿ ವಿಚಾರ ಮಂಡನೆಯನ್ನು ಡಾ. ಸೋಮಶೇಖರ ಐ.ಎ.ಎಸ್ ಅಧ್ಯಕ್ಷರು, ಗಡಿನಾಡು ಕನ್ನಡ ಪ್ರಾಧಿಕಾರ ಹಾಗೂ ಅಧ್ಯಕ್ಷರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಡಾ.ನಿರ್ಮಲ ಯಲಿಗಾರ್ ಲೇಖಕಿ ಸಹಾಯಕ, ನಿರ್ದೇಶಕಿ ದೂರದರ್ಶನ ಬೆಂಗಳೂರು, ಶ್ರೀಮತಿ ಪುಷ್ಪ ಸಾಹಿತಿಗಳು, ಬೆಂಗಳೂರು, ಶ್ರೀಮತಿ ಶೈಲಜ ಹಾಸನ, ಸಾಹಿತಿಗಳು ಹಾಸನ, ಡಾ. ಶಾಂತ ಅತ್ನಿ. ಸಾಹಿತಿಗಳು ಹಾಸನ, ಉಪನ್ಯಾಸ ವೆಂಕಟೇಶ್ ಉದಯ ವರದಿ ಪತ್ರಿಕೆಯ ಸಂಪಾದಕರು ನೀಡಲಿದ್ದಾರೆ.
ಆಶಯ ನುಡಿಯನ್ನು ಡಾ.ಬರಾಳು ಶಿವರಾಮ ಚನ್ನರಾಯಪಟ್ಟಣ ಮಾತನಾಡಲಿದ್ದಾರೆ. ಡಾ.ಯತೀಶ್ವರ ಪ್ರಾಂಶುಪಾಲರು ಎ.ವಿ.ಕೆ ಕಾಲೇಜು ಹಾಸನ ಉಪಸ್ಥಿತಿ ಇರಲಿದ್ದಾರೆ. ಕುರುಕ್ಷೇತ್ರ ನಾಟಕದ ಮಹಿಳಾ ಕಲಾವಿದರಿಗೆ ಗೌರವ ಸಮರ್ಪಣೆ ಇರುತ್ತದೆ. ಜಿಲ್ಲೆಯ ಹಾಗು ತಾಲ್ಲೂಕು ಬರಹಗಾರರು ಜಿಲ್ಲೆಯ ಮಹಿಳಾ ಸಂಘಟನೆಗಳು, ಮಹಿಳಾ ವೇದಿಕೆಗಳು, ಮಹಿಳಾ ಲೇಖಕಿಯರು, ಕವಯಿತ್ರಿಯರು, ಕವಿಗಳು, ಸಾಹಿತಿಗಳು, ವಿಮರ್ಶಕರು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ ಎಂದು ಜಿಲ್ಲಾಧ್ಯಕ್ಷರಾದ ಸುಂದರೇಶ್ ಡಿ. ಉಡುವಾರೆ ಕಾರ್ಯದರ್ಶಿ ದಿಬ್ಬೂರು ರಮೇಶ್ ತಿಳಿಸಿದ್ದಾರೆ.

