ನವದೆಹಲಿ – ಪಶ್ಚಿಮ ಬಂಗಾಳದ ಮನೆ ಮನೆಗೆ ಹೋಗಿ ಯಾರು ಮದುವೆಯಾಗಿರುವ ಸುಂದರ ಹಿಂದೂ ಮಹಿಳೆ ಹಾಗೂ ಯಾರು ಅತಿ ಚಿಕ್ಕ ವಯಸ್ಸಿನವರಾಗಿದ್ದಾರೆ ಎಂಬುದನ್ನು ಪರೀಕ್ಷೆ ಮಾಡಿ ಟಿಎಮ್ ಸಿ ಗೂಂಡಾಗಳು ಆ ಮಹಿಳೆಯನ್ನು ಹೊತ್ತುಕೊಂಡು ಹೋಗಿ ಬಲಾತ್ಕಾರ ಮಾಡುತ್ತಿರುವ ಅತ್ಯಂತ ಹೇಯ ಕೃತ್ಯಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾಣಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ ಅವರು, ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬಂಡೋಪಾಧ್ಯಾಯ ಈ ವಿಷಯದಲ್ಲಿ ಉತ್ತರ ನೀಡಬೇಕು. ತನಿಖೆ ಮಾಡುವುದಾಗಿ ಹಾರಿಕೆಯ ಉತ್ತರ ನೀಡಬಾರದು ಎಂದರು.
ಶೇಖ ಶಹಾಜಹಾನ್ ಎಂಬ ವ್ಯಕ್ತಿ ಈಗ ಎಲ್ಲಿದ್ದಾನೆ ಎಂದು ಮಮತಾ ಬ್ಯಾನರ್ಜಿ ಉತ್ತರಿಸಬೇಕು ಎಂದು ಆಗ್ರಹಿಸಿದ ಅವರು, ಇಂಥ ವಿಷಯದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಮಾನವೀಯತೆಯ ದೃಷ್ಟಿಯಿಂದ ನೋಡಬೇಕು ಎಷ್ಟು ದಿನಗಳವರೆಗೆ ರಾಜ್ಯ ಸರ್ಕಾರ ಪ್ರಾಯೋಜಿತ ಇಂಥ ಕೃತ್ಯಗಳು ನಡೆಯುತ್ತವೆ ಎಂದು ಪ್ರಶ್ನಿಸಿದರು.
ಪ. ಬಂಗಾಳದಲ್ಲಿ ಟಿಎಂಸಿ ಗೂಂಡಾಗಳು ಹಿಂದೂಗಳ ಮನೆ ಮನೆ ಹೊಕ್ಕು ಚೆಕ್ ಮಾಡುತ್ತಾರೆ. ಯಾರು ಸುಂದರ ಹಾಗೂ ಚಿಕ್ಕ ವಯಸ್ಸಿನ ಮಹಿಳೆ ಇರುವರೋ ಅವರನ್ನು ಹೊತ್ತೊಯ್ದು ಪ್ರತಿದಿನ ಬಲಾತ್ಕಾರ ಮಾಡುತ್ತಾರೆ. ಅವರ ಪತಿ ತಡೆಯಲು ಬಂದರೆ ನಿನಗೆ ಇವಳ ಮೇಲೆ ಅಧಿಕಾರ ವಿಲ್ಲ ಎಂದು ದಬಾಯಿಸುತ್ತಾರೆ ಇಂಥ ಶೋಷಣೆ ರಾಜ್ಯ ಸರ್ಕಾರದಿಂದಲೇ ಪ್ರಾಯೋಜಿತವಾಗಿದ್ದು ಅತ್ಯಂತ ಅಮಾನವೀಯ ಎಂದು ಸ್ಮೃತಿ ಇರಾಣಿ ಕಟುವಾಗಿ ನುಡಿದರು.
ಶೇಖ ಶಹಾಜಹಾನ್ ಇತ್ತೀಚೆಗೆ ಇಡಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆಯ ಘಟನೆಯಲ್ಲಿ ಕಂಡಯಬಂದಿದ್ದು ಆತನನ್ನು ತಕ್ಷಣವೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.