spot_img
spot_img

ಒಂದು ಶಿಲ್ಪ ದೇವರಾಗಬೇಕಾದರೆ ಸಂಸ್ಕಾರ ನೀಡಬೇಕು – ನಿರುಪಾಧೀಶ್ವರ ಶ್ರೀ

Must Read

spot_img
- Advertisement -

ಮೂಡಲಗಿ: ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಶ್ರೀ ಹನುಮಾನ ದೇವಸ್ಥಾನದಲ್ಲಿ ನೂತನ ಹನುಮಾನ ಮೂರ್ತಿಯನ್ನು ಸೋಮವಾರ ಬೆಳಿಗ್ಗೆ ಹೋಮ, ರುದ್ರಾಭಿಷೇಕ ಹಾಗೂ ವಿವಿಧ ವಿಧಿ, ವಿಧಾನಗಳ ಮೂಲಕ ಪ್ರತಿಷ್ಠಾಪನೆ ಮಾಡಿದರು.

ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಮರೆಗುದ್ದಿ ನಿರುಪಾದೇಶ್ವರ ಸ್ವಾಮೀಜಿ ಅವರು ಮಾತನಾಡಿ, ಒಂದು ಶಿಲ್ಪವು ದೇವರಾಗಬೇಕಾದರೆ ಅದಕ್ಕೆ ಸಂಸ್ಕಾರವನ್ನು ನೀಡಬೇಕು. ಗುರುವಿನ ಸ್ಪರ್ಶ, ಮಾರ್ಗದರ್ಶನ ಬೇಕಾಗುವುದು. ಹಾಗೆಯೇ ಮನುಷ್ಯನು ಸಹ ದೈವಭಕ್ತನಾಗಿ ಸಂಸ್ಕಾರ ಮತ್ತು ಗುರುವಿನ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ರಟಕಲ, ಕೊಕಟನೂರದ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಹನಮಂತನು ರಾಮನಲ್ಲಿ ಇಟ್ಟ ಅಚಲವಾದ ಭಕ್ತಿಯು ಭಕ್ತಿಯ ಸಾಕಾರತೆಯನ್ನು ತಿಳಿಸುತ್ತದೆ. ಎದೆ ಬಗೆದು ರಾಮನನ್ನು ತೋರಿಸುವ ಹನಮಂತನ ಭಕ್ತಿಯು ಅನನ್ಯವಾದದ್ದು ಎಂದರು.

- Advertisement -

ನಾಗೂರದ ಪ್ರಭುಲಿಂಗ ಸ್ವಾಮೀಜಿ, ವೇದಮೂರ್ತಿ ಗಂಗಾಧರ ಹಿರೇಮಠ, ಸೋಮಯ್ಯ ಹಿರೇಮಠ ಇದ್ದರು.

ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು.

ಶಾಸಕ ಸಿದ್ದು ಸೌದಿ, ಮಾಜಿ ಎಂಎಲ್‍ಸಿ ಮಹಾಂತೇಶ ಕವಟಗಿಮಠ, ಅರವಿಂದ ದಳವಾಯಿ, ಭೀಮಪ್ಪ ಗಡಾದ, ಬಿ.ಬಿ. ಹಂದಿಗುಂದ, ರಮೇಶ ಉಟಗಿ, ಎಂ.ಎಂ. ಪಾಟೀಲ, ಸುಭಾಷ ಪಾಟೀಲ, ಲಕ್ಷ್ಮಣ ಉಟಗಿ, ಗುರಪ್ಪ ಉಟಗಿ, ಸವಿತಾ ಚಂದ್ರಶೇಖರ ನಾಯಕ, ಲಕ್ಷ್ಮೀ ಪಾಟೀಲ, ಶ್ರೀದೇವಿ ಡೊಂಬರ, ಗೀತಾ ಉಟಗಿ, ಎಂ.ಜಿ. ಪಾಟೀಲ, ಶ್ರೀಶೈಲ್ ಪೂಜಾರಿ, ಚಂದ್ರಶೇಖರ ನಾಯಕ, ವಿನಾಯಕ ಬಾಗೇವಾಡಿ, ಎಂ.ವಿ. ನಾಡಗೌಡ, ಶಿವನಗೌಡ ನಾಡಗೌಡ, ವೆಂಕನಗೌಡ ನಾಡಗೌಡ, ಪಾಂಡಪ್ಪ ನಾಡಗೌಡ, ಹಣಮಂತ ಕುರಿ, ಈರಪ್ಪ ಹುಲಗಬಾಳಿ ಇದ್ದರು. ಅನ್ನ ಸಂತರ್ಪಣೆಯಲ್ಲಿ ಭಕ್ತರು ಭಾಗವಹಿಸಿದ್ದರು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group