ಭಾರತದ ಸಾಂಪ್ರದಾಯಕ ಕ್ರೀಡೆಗಳಿಗೆ ಪ್ರೋತ್ಸಾಹ ಅವಶ್ಯಕ- ಸತೀಶ ಕಡಾಡಿ

Must Read

ಮೂಡಲಗಿ: ಭಾರತ ಹಳ್ಳಿಗಳ ದೇಶವಾಗಿದ್ದು, ಹಳ್ಳಿ ಹಳ್ಳಿಗಳಲ್ಲಿ ವಿಭಿನ್ನ ಬಗೆಯ ಸಾಂಪ್ರದಾಯಕ ಆಚರಣೆಗಳು ಜಾರಿಯಲ್ಲಿವೆ, ಅವುಗಳಂತೆ ವಿಭಿನ್ನ ಹಳ್ಳಿ ಸೊಗಡಿನ ಮನೋರಂಜನ್ಮಾಕ ಕ್ರೀಡೆಗಳು ನಮ್ಮ ದೇಶದಲ್ಲಿವೆ. ಅವುಗಳಿಗೆ ಸೂಕ್ತ ಪ್ರೋತ್ಸಾಹ ನೀಡುವ ಮೂಲಕ ಅವುಗಳನ್ನು ಉಳಿಸಿ, ಬೆಳಸಿ ಭಾರತೀಯತೆಯನ್ನು ಎತ್ತಿಹಿಡಿಯಬೇಕಾದ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ ಎಂದು ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.

ಗುರುವಾರ ಆ. 12 ರಂದು ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದ ಮಾವಿನಮರಿ ತೋಟದಲ್ಲಿ ಸಂಗೋಳ್ಳಿ ರಾಯಣ್ಣ ಜನ್ಮದಿನಾಚರಣೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಯುವ ಘರ್ಜನೆ ಸಂಘಟನೆ ಆಯೋಜಿಸಿದ ರಾಜ್ಯಮಟ್ಟದ ಟಗರಿನ ಕಾಳಗ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಸತೀಶ ಕಡಾಡಿ ಅವರು, ಭಾರತದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಬೇಕಾದ ಮಹತ್ತರ ಜವಾಬ್ದಾರಿ ಗ್ರಾಮೀಣ ಪ್ರದೇಶದ ಯುವಕರಿಗಿದೆ. ಆ ಜವಾಬ್ದಾರಿಯನ್ನು ನಿರ್ವಹಿಸಿ ವಿವಿಧತೆಯಲ್ಲಿ ಏಕತೆ ಕಂಡುಕೊಂಡು ಸಾಮಾಜಿಕ ಸಾಮರಸ್ಯಕ್ಕಾಗಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನಂತೆ ಮಾತೃ ಭೂಮಿಯ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸುವ ಸಲುವಾಗಿ ಸೇವೆ ಸಲ್ಲಿಸುವ ಮನೋಸ್ಥೈರ್ಯವನ್ನು ಯುವಕರು ಬೆಳಸಿಕೊಳ್ಳಬೇಕೆಂದರು.

ಭವಿಷ್ಯದಲ್ಲಿ ಭಾರತ ದೇಶ ವಿಶ್ವಗುರು ಸ್ಥಾನಕ್ಕೆ ತಲುಪಬೇಕಾದರೆ ಯುವಕರು ತಮ್ಮ ಜವಾಬ್ದಾರಿಗಳನ್ನು ಅರಿತು ದೇಶದ ಉನ್ನತಿಗಾಗಿ ದುಡಿಯಬೇಕೆಂದರು.

ಕಾರ್ಯಕ್ರಮದಲ್ಲಿ ವಿಠ್ಠಲಗೌಡ ಪಾಟೀಲ,ರಾಹುಲ್ ಜಾರಕಿಹೊಳಿ, ರಾಮನಗೌಡ ಪಾಟೀಲ, ಮಂಜುನಾಥ ಸಣ್ಣಕ್ಕಿ, ಶಿವಾನಂದ ಕಮತೆ, ಕೆಂಪಣ್ಣ ಗಡಹಿಂಗ್ಲೆಜ್, ಅಡಿವೆಪ್ಪ ಮುತ್ನಾಳ ಸೇರಿದಂತೆ ರಾಜಾಪೂರ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Latest News

ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ದಾರುಣ ಸಾವು

ಬೀದರ - ಮಕರ ಸಂಕ್ರಾಂತಿ ನಿಮಿತ್ತ ಗಾಳಿಪಟ ಹಾರಿಸುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಯುವಕ ಸಂಜಿಕುಮಾರ ಎಂಬುವವರ ಕುತ್ತಿಗೆಗೆ ಗಾಳಿ ಪಟದ ಮಾಂಜಾ(ಚೀನಿ...

More Articles Like This

error: Content is protected !!
Join WhatsApp Group